ಅಂದು ಭಯ ಹುಟ್ಟಿಸಿದ್ದಾಕೆ, ಇಂದು ಮನಸ್ಸೇ ಕದ್ದಳು: ಕೊಹ್ಲಿ

ಮುಂಬೈ: ಪರಿ ಸಿನಿಮಾದಲ್ಲಿ ಪತ್ನಿಯ ನಟನೆ ನೋಡಿ ಭಯ ಪಟ್ಟಿದ್ದ ಕೊಹ್ಲಿ, ಇಂದು ಸೂಯಿಧಾಗಾ ಚಿತ್ರದ ಮಮತಾ ಪಾತ್ರಧಾರಿ ನನ್ನ ಹೃದಯವನ್ನೇ ಕದ್ದಿದಾಳೆ ಅಂತಾ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಬಾಲಿವುಡ್‍ನ ಸೂಯಿಧಾಗ ಸಿನಿಮಾ ಇಂದು ತೆರೆಕಂಡಿದ್ದು, ಪತ್ನಿಯ ಚಿತ್ರ ನೋಡಿದ ವಿರಾಟ್ ಕೊಹ್ಲಿ ವಿಮರ್ಶೆಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮದುವೆ ಬಳಿಕ ಪರಿ ಚಿತ್ರದ ನಂತರ ಸೂಯಿಧಾಗ ಕಲಾತ್ಮಕ ಸಿನಿಮಾದಲ್ಲಿ ‘ಮಮತಾ’ ಪಾತ್ರದಲ್ಲಿ ವಿರಾಟ್ ಮಡದಿ ಮಿಂಚಿದ್ದಾರೆ. ಚಿತ್ರದಲ್ಲಿ ದರ್ಜಿಯಾಗಿ ವರುಣ್ ಧವನ್ ನಟಿಸಿದ್ದಾರೆ.

ಕೊಹ್ಲಿ ವಿಮರ್ಶೆ:
ದರ್ಜಿ ಪಾತ್ರದ ವರುಣ್ ಧವನ್ ಸೂಪರ್ ಆಗಿ ನಟಿಸಿದ್ದಾರೆ. ಚಿತ್ರದ ‘ಮಮತಾ’ ಪಾತ್ರದಾರಿ ನನ್ನ ಹೃದಯವನ್ನೇ ಕದ್ದಿದ್ದಾಳೆ. ಈ ಪಾತ್ರ ಅನುಷ್ಕಾರ ನಟನೆಯ ಸಾಮಾಥ್ರ್ಯ ಮತ್ತು ಕೌಶಲ್ಯತೆಯನ್ನು ತೋರಿಸುತ್ತಿದೆ. ಸಿನಿಮಾದ ಪ್ರಭಾವದಿಂದಾಗಿ ಮತ್ತೊಮ್ಮೆ ನಾನು ಅನುಷ್ಕಾ ಪ್ರೀತಿಯಲ್ಲಿ ಬಿದ್ದಿದ್ದೇನೆ. ನನ್ನ ಪ್ರೀತಿಯ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ಚಿತ್ರ ನೋಡುವುದನ್ನು ಮಿಸ್ ಮಾಡಿಕೊಳ್ಳಬೇಡಿ ಎಂದು ವರುಣ್ ಮತ್ತು ಅನುಷ್ಕಾಗೆ ಟ್ಯಾಗ್ ಮಾಡಿದ್ದಾರೆ.

ಓರ್ವ ಸಾಮಾನ್ಯ ದರ್ಜಿ ಹೇಗೆ ಯಶಸ್ವಿ ಉದ್ಯಮಿ ಆಗುತ್ತಾನೆ ಎಂಬ ಕಥೆಯನ್ನು ಚಿತ್ರ ಹೊಂದಿದೆ. ದರ್ಜಿಗೆ ಪತ್ನಿ ಹೇಗೆ ಬೆನ್ನೆಲುಬಾಗಿ ನಿಲ್ಲುತ್ತಾಳೆ ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾ ಸೆಟ್ಟೇರುತ್ತಲೇ ವೀಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸುತ್ತಾ ಬಂದಿತ್ತು.

ವರುಣ್ ಮತ್ತು ಅನುಷ್ಕಾ ಇದೇ ಮೊದಲ ಬಾರಿಗೆ ಪ್ರಯೋಗಾತ್ಮಕ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಚಿತ್ರೀಕರಣದ ಆರಂಭದಲ್ಲಿ ವರುಣ್ ಮತ್ತು ಅನುಷ್ಕಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಯಂತ್ರದ ಮುಂದೆ ಬಟ್ಟೆ ಹೊಲಿಯುವ ಫೋಟೋವನ್ನು ಹಾಕಿಕೊಂಡಿದ್ದರು. ಈ ಹಿಂದೆ ಎಲ್ಲ ಫಿಲ್ಮ್ ಗಳಲ್ಲಿ ಲವ್ವರ್ ಬಾಯ್ ಪಾತ್ರದಲ್ಲಿ ನಟಿಸಿದ್ದ ವರುಣ್ ಇದೇ ಮೊದಲ ಬಾರಿಗೆ ಒಬ್ಬ ಸಾಮಾನ್ಯ ಟೈಲರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸೂಯಿಧಾಗಾ ಯಶ್‍ರಾಜ್ ಬ್ಯಾನರ್ ನಲ್ಲಿ ಮೂಡಿ ಬಂದಿದ್ದು ಶರತ್ ಕಟರಿಯಾ ನಿರ್ದೇಶನವನ್ನು ಹೊಂದಿದೆ. ಸೂಯಿಧಾಗ ಚಿತ್ರಕ್ಕೆ ಮನೀಶ್ ಶರ್ಮಾ ಬಂಡವಾಳ ಹಾಕಿದ್ದು, ಇದೇ ಮೊದಲ ಬಾರಿಗೆ ಅನುಷ್ಕಾ ಮತ್ತು ವರುಣ್ ಧವನ್ ತೆರೆಯ ಮೇಲೆ ಒಂದಾಗಿದ್ದಾರೆ.

ಪರಿ ಚಿತ್ರ ಬಿಡುಗಡೆ ಆಗಿದ್ದಾಗ, ಈವರೆಗಿನ ನನ್ನ ಹೆಂಡತಿಯ ಅತ್ಯುತ್ತಮ ಚಿತ್ರ. ನಾನು ದೀರ್ಘ ಸಮಯದ ಬಳಿಕ ನೋಡಿದ ಬೆಸ್ಟ್ ಸಿನಿಮಾ. ಸ್ವಲ್ಪ ಹೆದರಿಕೆ ಆಯ್ತು. ಆದರೂ ನಿನ್ನ ಬಗ್ಗೆ ಹೆಮ್ಮೆಪಡುತ್ತೇನೆ ಅನುಷ್ಕಾ ಎಂದು ಬರೆದುಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *