ನವದೆದೆಹಲಿ: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಗುರವಾರ ಟ್ವಿಟ್ಟರ್ ನಲ್ಲಿ ತಮ್ಮ ಅರೆಬೆತ್ತಲಾಗಿ ಫೋಟೋವೊಂದನ್ನು ಹಾಕಿದ್ದಾರೆ.
ಈ ಫೋಟೋವನ್ನು ಇಟ್ಟುಕೊಂಡು ಕೊಹ್ಲಿಯ ಕಾಲೆಳೆಯುತ್ತಿರುವ ನೆಟ್ಟಿಗರು ಸಂಚಾರಿ ನಿಯಮ ಪಾಲಿಸದೆ ಕೊಹ್ಲಿ ಅವರು ಈಗ ತಾನೇ ದಂಡ ಕಟ್ಟಿಬಂದು ಕುಳಿತಿದ್ದಾರೆ ಎಂದು ಕಾಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.
https://twitter.com/imVkohli/status/1169540309648166913
ಮಂಗಳವಾರ ದೆಹಲಿಯಲ್ಲಿ ಹೆಲ್ಮೆಟ್ ಹಾಕದ ದಿನೇಶ್ ಮದನ್ ಎಂಬುವರಿಗೆ ಗುರುಗ್ರಾಮ ಸಂಚಾರಿ ಪೊಲೀಸರು ಬರೋಬ್ಬರಿ 23,000 ರೂ ದಂಡ ಹಾಕಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈಗ ಇದನ್ನೇ ಮುಂದೆ ಇಟ್ಟುಕೊಂಡು ಕೊಹ್ಲಿಯನ್ನು ಟ್ರೋಲ್ ಮಾಡಿರುವ ನೆಟ್ಟಿಗರು, ಕೊಹ್ಲಿ ಸಂಚಾರಿ ಪೊಲೀಸರಿಗೆ ಫೈನ್ ಕಟ್ಟಿ ಬಂದು ಈ ರೀತಿ ಕುಳಿತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.
ತನ್ನ ಶರ್ಟ್ ಲೆಸ್ ಫೋಟೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿರುವ ವಿರಾಟ್ ಕೊಹ್ಲಿ, ನಾವು ಎಲ್ಲಿಯವರಿಗೆ ನಮ್ಮನ್ನು ನಾವು ನೋಡಿ ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯ ತನಕ ನಾವು ಹೊರ ಪ್ರಪಂಚವನ್ನು ಅರಿಯಲು ಸಾಧ್ಯವಿಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
https://twitter.com/imVkohli/status/1169540309648166913
ಇದಕ್ಕೆ ಕೆಲ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಈ ಮೇಲಿನ ಮಾತುಗಳನ್ನು ಬಟ್ಟೆ ಹಾಕಿಕೊಂಡೇ ಹೇಳಬಹುದು. ಈ ಮಾತನ್ನು ಹೇಳಲು ಬಟ್ಟೆ ಬಿಚ್ಚಬೇಕಾ ಎಂದಿದ್ದಾರೆ. ಇನ್ನೂ ಕೆಲವರು ಅನುಷ್ಕಾ ಮತ್ತು ವಿರಾಟ್ ಫೋಟೋ ಕೊಲಾಜ್ ಮಾಡಿ ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ನೀವು ಕುಳಿತಿರುವ ಸ್ಥಳ ಯಾವುದೋ ಟ್ರಾಫಿಕ್ ಸಿಗ್ನಲ್ ರೀತಿಯಲ್ಲಿ ಇದೇ ಎಂದು ಹೇಳಿದ್ದಾರೆ.
Ye baat kapde pehen kar bhi bol sakta tha bhai.. kaunsi meaning badal jaati
— maithun (@Being_Humor) September 5, 2019
ಪ್ರಸ್ತುತ ವಿಂಡೀಸ್ ಪ್ರವಾಸದಲ್ಲಿರುವ ಕೊಹ್ಲಿ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವುದರ ಜತೆಗೆ ಭಾರತ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎನ್ನುವ ದಾಖಲೆ ಬರೆದಿದ್ದಾರೆ. ಇದರ ಜೊತೆಗೆ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‍ನಲ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಟೆಸ್ಟ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ಭರ್ಜರಿ ಫಾಮ್‍ನಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಮೊದಲ ಸ್ಥಾನಕ್ಕೇರಿದ್ದಾರೆ.
https://twitter.com/erbmjha/status/1169545581636702208

Leave a Reply