ತನ್ನ ಹೆಸರನ್ನೇ ಬಿಟ್ಟು All-Time XI ಹೆಸರಿಸಿದ ಸಚಿನ್ – ಈ ಸ್ಟಾರ್ ಆಟಗಾರಿಗಿಲ್ಲ ಸ್ಥಾನ!

ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹೆಸರಿಸಿದ ಸಾರ್ವಕಾಲಿಕ ಶ್ರೇಷ್ಠ ತಂಡದಲ್ಲಿ ತನ್ನ ಹೆಸರನ್ನೇ ಬಿಟ್ಟಿದ್ದಾರೆ. ಅಲ್ಲದೇ ಟೀಂ ಇಂಡಿಯಾದ ಸ್ಟಾರ್ ಆಟಗಾರರಾದ ಧೋನಿ, ಕೊಹ್ಲಿಗೂ ಕೂಡ ಸ್ಥಾನ ಕೊಟ್ಟಿಲ್ಲ.

ಸಚಿನ್ ಪ್ರಕಟಿಸಿದ ತಂಡದಲ್ಲಿ ಪ್ರಸ್ತುತ ಸ್ಟಾರ್ ಆಟಗಾರರಾಗಿ ಮಿಂಚುತ್ತಿರುವ ಯಾವೊಬ್ಬ ಆಟಗಾರನೂ ಸ್ಥಾನ ಪಡೆದಿಲ್ಲ. ಟೀಂ ಇಂಡಿಯಾದಲ್ಲಿ ಮಿಂಚಿದ್ದ ಹಿಂದಿನ ಆಟಗಾರರಾದ ವೀರೇಂದ್ರ ಸೆಹ್ವಾಗ್, ಸುನೀಲ್ ಗವಾಸ್ಕರ್, ಸೌರವ್ ಗಂಗೂಲಿ ಮತ್ತು ಹರ್ಭಜನ್ ಸಿಂಗ್ ಸ್ಥಾನ ಪಡೆದಿದ್ದಾರೆ. ಆದರೆ ಸಚಿನ್ ಸ್ವಂತ ತನ್ನ ಹೆಸರನ್ನು ಕೂಡ ತಂಡದಲ್ಲಿ ಸೂಚಿಸದೆ ಕೈಬಿಟ್ಟಿದ್ದಾರೆ. ಇದನ್ನೂ ಓದಿ: ಬೊಕ್ಕ ತಲೆಗೆ ಆಟೋಗ್ರಾಫ್ ಹಾಕಿದ ಸ್ಪಿನ್ನರ್ ಜ್ಯಾಕ್ ಲೀಚ್ ವೀಡಿಯೋ ವೈರಲ್

ತಂಡದ ಬ್ಯಾಟಿಂಗ್ ವಿಭಾಗದಲ್ಲಿ 3 ಜನ ಭಾರತೀಯರು, 2 ವೆಸ್ಟ್ ಇಂಡೀಸ್, 1 ಸೌತ್ ಆಫ್ರಿಕಾದ ಆಲ್‍ರೌಂಡರ್ ಮತ್ತು ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ಗೆ ಅವಕಾಶ ಸಿಕ್ಕಿದೆ. ಬೌಲಿಂಗ್ ವಿಭಾಗದಲ್ಲಿ ಭಾರತದ ಮತ್ತು ಆಸ್ಟ್ರೇಲಿಯಾದ ತಲಾ ಒಬ್ಬೊಬ್ಬ ಸ್ಪಿನ್ನರ್ ಮತ್ತು ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾದ ತಲಾ ಒಬ್ಬೊಬ್ಬ ವೇಗಿಗಳನ್ನು ಸಚಿನ್ ಆಯ್ಕೆ ಮಾಡಿಕೊಂಡಿದ್ದಾರೆ.

ಸಚಿನ್ ಹೆಸರಿಸಿರುವ ತಂಡದಲ್ಲಿ ವೀರೇಂದ್ರ ಸೆಹ್ವಾಗ್, ಸುನಿಲ್ ಗವಾಸ್ಕರ್, ಬ್ರಿಯಾನ್ ಲಾರಾ, ವಿವ್ ರಿಚರ್ಡ್ಸ್, ಜಾಕ್ ಕಾಲಿಸ್, ಸೌರವ್ ಗಂಗೂಲಿ, ಆಡಮ್ ಗಿಲ್‍ಕ್ರಿಸ್ಟ್, ಶೇನ್ ವಾರ್ನ್, ವಾಸಿಂ ಅಕ್ರಮ್, ಹರ್ಭಜನ್ ಸಿಂಗ್ ಮತ್ತು ಗ್ಲೆನ್ ಮೆಕ್‍ಗ್ರಾತ್ ಹೆಸರನ್ನು ಆಯ್ಕೆ ಮಾಡಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: ರೋಚಕ ಘಟ್ಟದಲ್ಲಿ ಟೆಸ್ಟ್‌ – ಭಾರತದ ಗೆಲುವಿಗೆ ಬೇಕಿದೆ 8 ವಿಕೆಟ್‌

Comments

Leave a Reply

Your email address will not be published. Required fields are marked *