ವಿರಾಟ್ ಕೊಹ್ಲಿ & ಧೋನಿಯನ್ನ ಮಿಸ್ ಮಾಡಿಕೊಂಡ ಪಾಕ್ ಅಭಿಮಾನಿಗಳು

ನವದೆಹಲಿ: ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನ 8 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಆಯೋಜಿಸಲಾಗಿದೆ. ಇಷ್ಟು ಸುದೀರ್ಘ ಸಮಯದ ನಂತರ ಅಂತರಾಷ್ಟ್ರೀಯ ಕ್ರಿಕೆಟ್ ತಾರೆಗಳು ಪಾಕಿಸ್ತಾನಕ್ಕೆ ಭೇಟಿ ನೀಡ್ತಿರೋದ್ರಿಂದ ಪಾಕ್ ಕ್ರಿಕೆಟ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಪಾಕಿಸ್ತಾನ ಹಾಗೂ ವರ್ಲ್ದ್ ಇಲವೆನ್ ತಂಡಗಳ ನಡುವಿನ ಪಂದ್ಯದ ವೇಳೆ ಪಾಕ್ ಅಭಿಮಾನಿಗಳು ಕೊಹ್ಲಿ ಅವರ ಆಟವನ್ನು ಮಿಸ್ ಮಾಡಿಕೊಂಡಿದ್ದಾರೆ.

ತಮ್ಮ ಅದ್ವಿತೀಯ ಸ್ಟೈಲ್ ಹಾಗೂ ಆಕ್ರಮಣಕಾರಿ ಆಟದಿಂದ ವಿರಾಟ್ ಅಪಾರ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನ ಯಾವುದೇ ಇತರೆ ದೇಶದಲ್ಲಾದ್ರೂ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದ್ದಾರೆ. ಗಡ್ಡಾಫಿ ಕ್ರೀಡಾಂಗಣದಲ್ಲಿ ನಡೆದ ಟಿ20 ಪಂದ್ಯವೊಂದರ ಸಂದರ್ಭದಲ್ಲಿ ಅಭಿಮಾನಿಯೊಬ್ಬರು `ಕೊಹ್ಲಿ ಕೊ ಅಮ್ಮಿ ಸೆ ಇಜಾಸತ್ ನಹಿ ಮಿಲಿ’ (ಕೊಹ್ಲಿಗೆ ಪಾಕಿಸ್ತಾನಕ್ಕೆ ಬರಲು ಅಮ್ಮನಿಂದ ಪರ್ಮಿಷನ್ ಸಿಕ್ಕಿಲ್ಲ) ಎಂಬ ಫಲಕವನ್ನು ಪ್ರದರ್ಶಿಸಿದ್ರು. ಹಾಗೇ ಮಿಸ್ ಯು ಧೋನಿ, ಕೊಹ್ಲಿ. ಪಾಕಿಸ್ತಾನದಲ್ಲಿ ಆಟವಾಡಿ ಎಂಬ ಫಲಕವನ್ನೂ ಪ್ರದರ್ಶನ ಮಾಡಿದ್ರು.

ಈ ಸರಣಿಯಲ್ಲಿ ಭಾಗವಹಿಸಿದ್ದ ಫಾಫ್ ಡು ಪ್ಲೆಸಿಸ್, ಇಮ್ರಾನ್ ತಹೀರ್, ಮೊನೆ ಮಾರ್ಕೆಲ್, ಡರೆನ್ ಸಮಿ, ಸ್ಯಾಮ್ಯುಯೆಲ್ ಬದ್ರಿ, ಪಾಲ್ ಕಾಲಿಂಗ್ ವುಡ್ ಸೇರಿದಂತೆ ಹಲವು ಆಟಗಾರರಿಗೆ ಪಾಕಿಸ್ತಾನದಲ್ಲಿ ಅದ್ಧೂರಿ ಸ್ವಾಗತ ಸಿಕ್ತು. ಆದ್ರೆ ಇಷ್ಟೆಲ್ಲಾ ಆಟಗಾರರ ಮಧ್ಯೆಯೂ ಪಾಕಿಸ್ತಾನದ ಜನ ಕೊಹ್ಲಿಯನ್ನ ಮಿಸ್ ಮಾಡಿಕೊಂಡಿದ್ದಾರೆ.

ಶುಕ್ರವಾರದಂದು ಲಾಹೋರ್‍ನಲ್ಲಿ ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಪಾಕಿಸ್ತಾನ, ವಲ್ಡ್ ಇಲವೆನ್ ತಂಡದ ವಿರುದ್ಧ 33 ರನ್‍ಗಳ ಜಯವನ್ನು ದಾಖಲಿಸಿತು. ಇದಕ್ಕೂ ಮುನ್ನ ಫಾಫ್ ಡು ಪ್ಲೆಸಿಸ್ ಪಂದ್ಯದ ಟಾಸ್ ಗೆದ್ದುಕೊಂಡು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟ್ ಮಾಡಲು ಆರಂಭಿಸಿದ ಪಾಕ್ 54 ವಿಕೆಟ್‍ಗಳ ನಷ್ಟಕ್ಕೆ 183 ರನ್ ಗಳಿಸಿ ತನ್ನ ಆಟವನ್ನು ಪೂರ್ಣಗೊಳಿಸಿತು. ನಂತರ ಪಾಕ್ ಮೊತ್ತಕ್ಕೆ ಉತ್ತರಿಸಲು ಕಣಕ್ಕಿಳಿದ ವರ್ಲ್ದ್ ಇಲೆವೆನ್ ತಂಡ, ಪಾಕ್ ಬೌಲಿಂಗ್ ದಾಳಿಗೆ ತುತ್ತಾಗಿ 5 ವಿಕೆಟ್ ನಷ್ಟಕ್ಕೆ ಕೇವಲ 67 ರನ್ ಗಳಿಸಲಷ್ಟೇ ಶಕ್ತವಾಯಿತು.

Comments

Leave a Reply

Your email address will not be published. Required fields are marked *