ವಿರಾಟ್ ಕೊಹ್ಲಿಗೆ 6 ವರ್ಷದ ಲೆಗ್ ಸ್ಪಿನ್ನರ್ ಸವಾಲು!

ಆಡಿಲೇಡ್: ಪ್ರವಾಸಿ ಟೀಂ ಇಂಡಿಯಾ ತಂಡದ ಆಡಿಲೇಡ್ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಸಿದ್ಧತೆ ನಡೆಸಿದ್ದು, ಪಂದ್ಯದಲ್ಲಿ ಆಸೀಸ್ ಪಡೆಯ 6 ವರ್ಷದ ಪೋರ ಟೀಂ ಇಂಡಿಯಾಗೆ ಸವಾಲು ನೀಡಲಿದ್ದಾರೆ.

ಹೌದು, ಆಡಿಲೇಡ್ ಓವೆಲ್ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಪಂದ್ಯ ಗುರುವಾರ ಆರಂಭ ಆಗಲಿದ್ದು, ಈ ಪಂದ್ಯಕ್ಕೆ ಆಸೀಸ್ ತಂಡದಲ್ಲಿ 6 ವರ್ಷದ ಆರ್ಚಿ ಷಿಲ್ಲರ್ ಸ್ಥಾನ ಪಡೆದಿದ್ದಾನೆ. ಈ ಪೋರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಆತನ ಆಸೆಯಂತೆ ಆಸೀಸ್ ತಂಡದಲ್ಲಿ ಆಡುವ ಅವಕಾಶ ನೀಡಲಾಗಿದೆ.

ಆರ್ಚಿ ಆಸೀಸ್ ತಂಡದ ನ್ಯಾಥನ್ ಲಿಯಾನ್ ಅಭಿಮಾನಿಯಾಗಿದ್ದು, ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಪಂದ್ಯಕ್ಕೂ ಮುನ್ನ ಆಸೀಸ್ ತಂಡ ಪಾಕಿಸ್ತಾನ ವಿರುದ್ಧ ಟೆಸ್ಟ್ ಪಂದ್ಯವನ್ನಾಡಿತ್ತು. ಈ ವೇಳೆ ಆಸೀಸ್ ತಂಡ ಕೋಚ್ ಆರ್ಚಿಗೆ ತಂಡದಲ್ಲಿ ಆಡುವ ಅವಕಾಶ ನೀಡುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಆರ್ಚಿಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಯಿತು. ಇದರಂತೆ ಇಂದು ಆರ್ಚಿ ಆಸೀಸ್ ಕ್ರಿಕೆಟ್ ಆಟಗಾರರೊಂದಿಗೆ ಅಭ್ಯಾಸ ನಡೆಸಲು ಮೈದಾನಕ್ಕೆ ಆಗಮಿಸಿದ್ದ. ಆರ್ಚಿ ಲೆಗ್ ಸ್ಪಿನ್ನರ್ ಆಗುವ ಹಂಬಲ ಹೊಂದಿದ್ದು, ಅದರಂತೆ ಆತನಿಗೆ ತರಬೇತಿ ಕೂಡ ನೀಡಲಾಗಿದೆ.

ಆರ್ಚಿ ಮಗುವಿದ್ದಾಗಲೇ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದು, ತನ್ನ ಜೀವನದ ಬಹು ಸಮಯವನ್ನು ಆಸ್ಪತ್ರೆಯಲ್ಲೇ ಕಳೆದಿದ್ದಾನೆ. ಆತನ ಮುಖದಲ್ಲಿ ನಗು ಕಾಣುವ ಉದ್ದೇಶದಿಂದ ಈ ಅವಕಾಶ ನೀಡಲಾಗಿದೆ. ಇದು ನಾವು ಆತನಿಗೆ ಮಾಡಬಲ್ಲ ಸಣ್ಣ ಕಾರ್ಯ ಎಂದು ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.

ಟೀಂ ಇಂಡಿಯಾ ಮಹತ್ವದ ಆಸೀಸ್ ಸರಣಿಯಲ್ಲಿ ಮೊದಲು ನಡೆದ ಟಿ20 ಟೂರ್ನಿ 1-1 ಅಂತರದಲ್ಲಿ ಡ್ರಾ ಆಗಿದ್ದು, ಇತ್ತಂಡಗಳು 4 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *