ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ತವರಿಗೆ ಹಿಂದಿರುಗಿದ್ದು, ವಿರಾಟ್ ತಮ್ಮ ಬಿಡುವಿನ ಸಮಯದಲ್ಲಿ ಸ್ನೇಹಿತನ ಮದುವೆ ಸಮಾರಂಭದಲ್ಲಿ ಸಿಕ್ಕಾಪಟ್ಟೆ ಕುಣಿದು ಕುಪ್ಪಳಿಸಿದ್ದಾರೆ.
ಮುಂಬೈನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪತ್ನಿ ಅನುಷ್ಕಾ ಶರ್ಮಾರನ್ನು ಬರಮಾಡಿಕೊಂಡ ಪತಿ ವಿರಾಟ್, ಪತ್ನಿಯ ಜೊತೆ ಸ್ಥಳೀಯ ಟ್ಯಾಟೂ ಪಾರ್ಲರ್ ಗೆ ಹೋಗಿ, ವಿಶೇಷ ಟ್ಯಾಟೂ ಹಾಕಿಸಿಕೊಂಡರು.
ಗೆಳೆಯನ ಮದುವೆಯಲ್ಲಿ ವಿರಾಟ್ ಕೊಹ್ಲಿ ಪಂಜಾಬಿ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿರಾಟ್ಗೆ ಶಿಖರ್ ಧವನ್ ಕೂಡ ಸಾಥ್ ನೀಡಿದ್ದು, ಮದುಮಗನ ಜೊತೆ ಇಬ್ಬರೂ ಕುಣಿದು ಕುಪ್ಪಳಿಸಿದ್ದಾರೆ.
ವಿರಾಟ್ ಕೊಹ್ಲಿ ಅವರ ಡಾನ್ಸ್ ವಿಡಿಯೋವನ್ನ ಇನ್ಸ್ಟಾಗ್ರಾಂನ ಫ್ಯಾನ್ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ. ವಿರಾಟ್ ಕೊಹ್ಲಿ ಭಾಂಗ್ರ ಶೈಲಿಯ ಸ್ಟೆಪ್ ಹಾಕಿ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಅವರ ನೃತ್ಯ ಯಾರಿಗೆ ತಾನೆ ಇಷ್ಟ ಆಗೊಲ್ಲ ಹೇಳಿ? ಕೇವಲ ಕ್ರಿಕೆಟಿಗನಾಗದೇ ತಮ್ಮ ಇನ್ನಿತರ ಕಲೆಗಳ ಸಾಮರ್ಥ್ಯ ವನ್ನ ಯಾವಾಗಲು ತೋರಿಸುತ್ತಾ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಅಭಿಮಾನಿಗಳು ಇವರ ಡಾನ್ಸ್ ನೋಡಲು ಕಾತುರರಾಗಿರುತ್ತಾರೆ.
https://www.instagram.com/p/Bf5zZI0FsgK/?utm_source=ig_embed&utm_campaign=embed_profile_upsell_test
https://www.instagram.com/p/Bf5dne_FURm/?utm_source=ig_embed&utm_campaign=embed_profile_upsell_test

Leave a Reply