ಪತ್ನಿ ಜೊತೆ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ್ರು ವಿರಾಟ್!

ಸಿಡ್ನಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ನಟಿ ಅನುಷ್ಕಾ ಶರ್ಮಾ ಅವರ ಜೊತೆಗೂಡಿ ಆಸೀಸ್ ವಿರುದ್ಧ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ್ದಾರೆ.

ಆಸೀಸ್ ನೆಲದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಮುತ್ತಿಟ್ಟಿತ್ತು. 2-1ರ ಅಂತರದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ 71 ವರ್ಷಗಳ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಗೆಲುವನ್ನು ಸಾಧಿಸಿದೆ. ಈ ಸರಣಿ ಗೆದ್ದಿರುವುದರಿಂದ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಫುಲ್ ಖುಷ್ ಆಗಿದ್ದಾರೆ.

ಆಸ್ಟ್ರೇಲಿಯಾ ನೆಲದಲ್ಲೇ ಕಾಂಗರೂ ವಿರುದ್ಧ ಸರಣಿ ಗೆದ್ದ ಭಾರತದ ಕ್ರಿಕೆಟ್ ತಂಡದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಅಲ್ಲದೆ ಈ ಗೆಲುವನ್ನು ತನ್ನ ತಂಡದವರ ಜೊತೆ ಹಾಗೂ ಅಭಿಮಾನಿಗಳ ಜೊತೆ ಕುಣಿದು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳ ಜೊತೆ ಟೀಂ ಇಂಡಿಯಾ ಆಟಗಾರರಿಂದ ಭಾಂಗ್ರ ಡ್ಯಾನ್ಸ್..!

ಈಗ ತಮ್ಮ ಪ್ರೀತಿಯ ಪತ್ನಿ ಜೊತೆ ತಮ್ಮ ಗೆಲುವನ್ನು ಸಂಭ್ರಮಿಸಿ ಖುಷಿಪಟ್ಟಿದ್ದಾರೆ. ವಿರಾಟ್ ಹಾಗೂ ಅನುಷ್ಕಾ ತಮ್ಮ ಸ್ನೇಹಿತರ ಜೊತೆಗೂಡಿ ಈ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲೂ ಅನುಷ್ಕಾಗೆ ವಿರಾಟ್ ಕೇಕ್ ತಿನ್ನಿಸಿ ಗೆಲುವನ್ನು ಸಂಭ್ರಮಿಸಿದ್ದಾರೆ.

ಅನುಷ್ಕಾ ಶರ್ಮಾ ಭಾರತೀಯ ಕ್ರಿಕೆಟ್ ತಂಡ ಮಾಡಿರುವ ಸಾಧನೆಗೆ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಿಂದ ಶುಭಾಶಯವನ್ನು ತಿಳಿಸಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ, ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದೆ. ತಂಡದ ಎಲ್ಲಾ ಆಟಗಾರರಿಗೆ, ಕೋಚ್ ಹಾಗೂ ಸಿಬ್ಬಂದಿಗೆ ಶುಭಾಶಯಗಳು. ಯಾವುದು ಮುಖ್ಯವೋ ಅದನ್ನು ಪರಿಗಣಿಸಿ ಬೇಡವಾದ ವಿಚಾರವನ್ನು ಬಿಟ್ಟುಬಿಡಿ. ಈ ಗೆಲುವಿನಿಂದ ನಾನು ತುಂಬಾ ಸಂತೋಷವಾಗಿದ್ದೇವೆ. ನನ್ನ `ಲವ್’ ಬಗ್ಗೆ ನನಗೆ ಹೆಮ್ಮೆಯಾಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

https://www.instagram.com/p/BsUnLapnceH/?utm_source=ig_embed

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *