ಸಿಎಸ್‍ಕೆ vs ಆರ್​ಸಿಬಿ ಅಭಿಮಾನಿಗಳ ವಾರ್- ಧೋನಿ, ಕೊಹ್ಲಿ ತುಂಟಾಟ

ದುಬೈ: ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿಸಿದೆ. ಶಾರ್ಜಾ ಮೈದಾನದಲ್ಲಿ ನಡೆದ ಆರ್​ಸಿಬಿ ಮತ್ತು ಸಿಎಸ್‍ಕೆ ನಡುವಿನ ಪಂದ್ಯದಲ್ಲಿ ಎರಡು ತಂಡದ ಅಭಿಮಾನಿಗಳು ಪರಸ್ಪರ ಕಾಲೆಳೆದುಕೊಂಡರೆ. ಸಿಎಸ್‍ಕೆ ನಾಯಕ ಧೋನಿ ಮತ್ತು ಆರ್​ಸಿಬಿ ಕ್ಯಾಪ್ಟನ್ ಕೊಹ್ಲಿ ಪರಸ್ಪರ ಪ್ರೀತಿಯಿಂದ ತುಂಟಾಟವಾಡಿ ಎಲ್ಲರ ಮನಗೆದ್ದಿದ್ದಾರೆ.

ಐಪಿಎಲ್‍ನ ಸೌತ್ ಇಂಡಿಯನ್ ಡರ್ಬಿಎಂದೇ ಹೆಸರುವಾಸಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವೆಂದರೆ ಬಹಳ ರೋಚಕ ಅದರಲ್ಲೂ ಎರಡು ತಂಡಗಳ ಅಭಿಮಾನಿಗಳಂತೂ ಪರಸ್ಪರ ಕಾಲೆಳೆಯುವ ಮೂಲಕ ಪಂದ್ಯಕ್ಕೆ ಇನ್ನಷ್ಟು ಕೂತುಹಲ ಮೂಡಿಸುತ್ತಾರೆ. ಅದೇ ರೀತಿ ಬಹುನಿರೀಕ್ಷಿತ ಈ ತಂಡಗಳು 35ನೇ ಪಂದ್ಯದಲ್ಲಿ ಪರಸ್ಪರ ಎದುರುಬದುರಾದವು. ಈ ಪಂದ್ಯ ಆರಂಭಕ್ಕೂ ಮೊದಲು ಟಾಸ್‍ಗಾಗಿ ಮೈದಾನಕ್ಕೆ ಬಂದ ಧೋನಿ ಮತ್ತು ವಿರಾಟ್ ಕೊಹ್ಲಿ ಪರಸ್ಪರ ಪ್ರೀತಿಯಿಂದ ಮಾತನಾಡಿಕೊಂಡು, ತುಂಟಾಟವಾಡಿ ಅಭಿಮಾನಿಗಳಿಗೆ ಖುಷಿ ನೀಡಿದರು. ಇದನ್ನೂ ಓದಿ: ಟಿ20 ವಿಶ್ವಕಪ್‍ಗೆ ಟೀಂ ಇಂಡಿಯಾಗೆ ಧೋನಿ ಮೆಂಟರ್

ಧೋನಿ ಮತ್ತು ವಿರಾಟ್ ನಡುವೆ ಉತ್ತಮವಾದ ಬಾಂಧವ್ಯವಿದ್ದು, ಜೊತೆಯಾಗಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾಗ ಕೊಹ್ಲಿ, ಧೋನಿ ಒಳ್ಳೆಯ ಸ್ನೇಹವನ್ನು ಬೆಳೆಸಿದ್ದರು. ಬಳಿಕ ವಿರಾಟ್‍ಗೆ ನಾಯಕತ್ವದ ಗುರುವಾಗಿ ಧೋನಿ ಕಾಣಿಸಿಕೊಂಡಿದ್ದರು. ವಿರಾಟ್ ಕೂಡ ಹಲವು ಬಾರಿ ಧೋನಿ ನನ್ನ ಪಾಲಿನ ನಾಯಕ ಎಂದು ಹೇಳಿಕೊಂಡಿದ್ದಾರೆ. ಇದೀಗ ಧೋನಿ ಭಾರತ ತಂಡದಲ್ಲಿ ಇಲ್ಲದಿದ್ದರು ಕೂಡ ವಿರಾಟ್, ಧೋನಿ ಸ್ನೇಹ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಐಪಿಎಲ್‍ನಲ್ಲಿ ಇವರಿಬ್ಬರು ಜೊತೆಯಾಗಿದ್ದ ಫೋಟೋಗಳು ವೈರಲ್ ಆಗುತ್ತಿದೆ.

https://twitter.com/Proud_VJFan/status/1441442370189361157

ಟಿ20ವಿಶ್ವಕಪ್‍ಗಾಗಿ ಈಗಾಗಲೇ ವಿರಾಟ್ ಸಾರಥ್ಯದ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಜೊತೆಗೆ ಧೋನಿಯನ್ನು ತಂಡದ ಮೆಂಟರ್ ಆಗಿ ನೇಮಿಸಿದೆ. ಹಾಗಾಗಿ ಐಪಿಎಲ್ ಬಳಿಕ ಧೋನಿ ಮತ್ತು ವಿರಾಟ್‍ರನ್ನು ಭಾರತ ತಂಡದಲ್ಲಿ ಒಟ್ಟಿಗೆ ನೋಡುವ ಅವಕಾಶ ಒದಗಿ ಬರಲಿದೆ. ಇದೀಗ ಐಪಿಎಲ್‍ನಲ್ಲಿ ಈ ಇಬ್ಬರು ಸ್ನೇಹಿತರು ಜೊತೆಯಾಗಿದ್ದನ್ನು ಕಂಡು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಹಲವು ರೀತಿಯ ಕಾಮೆಂಟ್‍ಗಳನ್ನು ಹಾಕುವ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಆರ್​ಸಿಬಿ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ಗೆ ಭರ್ಜರಿ ಜಯ

 

 

Comments

Leave a Reply

Your email address will not be published. Required fields are marked *