ಮುಂಬೈ: ಕ್ರಿಕೆಟ್ ಮತ್ತು ಬಾಲಿವುಡ್ ಅಂಗಳದಲ್ಲಿ ಈಗ ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ಇಬ್ಬರ ಮದುವೆ ಸುದ್ದಿ ಹರಿದಾಡುತ್ತಿದೆ. ಡಿಸೆಂಬರ್ 9, 10, 11ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಮಿಲನ್ ನಲ್ಲಿ ಮದುವೆ ಆಗಲಿದ್ದಾರೆ. ಈ ಸುದ್ದಿಗೆ ಪುಷ್ಟಿ ನೀಡುವಂತೆ ಗುರುವಾರ ಅನುಷ್ಕಾ ಪರಿವಾರ ಭಾರೀ ಲಗೇಜ್ ಗಳೊಂದಿಗೆ ಇಟಲಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಅನುಷ್ಕಾ ಶರ್ಮಾರ ಪಿಎ ಮಾತ್ರ ಮದುವೆಯ ಸುದ್ದಿ ಸುಳ್ಳು ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ ಗುರುವಾರ ಅನುಷ್ಕಾ ಮಾತ್ರ ಕುಟುಂಬಸ್ಥ ಸಮೇತರಾಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದೇ ಅನುಷ್ಕಾ ಮತ್ತು ಕುಟುಂಬಸ್ಥರು ನಡೆದಿದ್ದಾರೆ. ಇದೇ ವೇಳೆ ನಟಿ ದೀಪಿಕಾ ಪಡುಕೋಣೆ ತಮ್ಮ ತಾಯಿಯೊಂದಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ದೀಪಿಕಾ ತಮ್ಮ ತಾಯಿಯೊಂದಿಗೆ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಕ್ಟೋಬರ್ ನಲ್ಲೇ ಸುದ್ದಿ ಬ್ರೇಕ್:
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಡಿಸೆಂಬರ್ ನಲ್ಲಿ ಮದುವೆ ಆಗಲಿದ್ದಾರೆ ಎಂದು ಸುದ್ದಿಯೊಂದು ಬಾಲಿವುಡ್ ಮತ್ತು ಕ್ರಿಕೆಟ್ ಅಂಗಳದಲ್ಲಿ ಅಕ್ಟೋಬರ್ ತಿಂಗಳಿನಲ್ಲೇ ಹರಿದಾಡಿತ್ತು. ಆದರೆ ಅನುಷ್ಕಾರ ಟ್ಯಾಲೆಂಟ್ ಏಜೆನ್ಸಿ, ಅವರು ಡಿಸೆಂಬರ್ ನಲ್ಲಿ ಮದುವೆ ಆಗುತ್ತಿಲ್ಲ ಎಂದು ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿತ್ತು. ಇತ್ತೀಚೆಗೆ ವಿರಾಟ್ ಮತ್ತು ಅನುಷ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಂಡು, ಮದುವೆಯ ಬಗ್ಗೆ ಮಾತುಗಳನ್ನು ಹೇಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.
ವೈಯಕ್ತಿಕ ಕಾರಣಗಳಿಂದಾಗಿ ಮುಂದಿನ ಕೆಲವು ಸರಣಿಯಲ್ಲಿ ತಮಗೆ ಆಡಲು ಸಾಧ್ಯವಾಗುತ್ತಿಲ್ಲ ಎಂದು ಈ ಹಿಂದೆ ಬಿಸಿಸಿಐಗೆ ಕೊಹ್ಲಿ ಮನವಿಯಲ್ಲಿ ತಿಳಿಸಿದ್ದರು. ಜನವರಿಯಿಂದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದ ಪ್ರವಾಸ ಕೈಗೊಳ್ಳಲಿದ್ದು, ನಿರಂತರ ಕ್ರಿಕೆಟ್ ಆಡುತ್ತೀರೋ ಕೊಹ್ಲಿ ಅದಕ್ಕೂ ಮೊದಲು ಕೊಂಚ ವಿರಾಮ ಬಯಸಿದ್ದರು. ಹೀಗಾಗಿ ಡಿಸೆಂಬರ್ ನಲ್ಲಿ ಅನುಷ್ಕಾ ಜೊತೆ ಮದುವೆ ಮಾಡಲೆಂದೇ ರಜೆಗೆ ಮನವಿ ಮಾಡಿದ್ದರು ಎನ್ನುವ ಸುದ್ದಿ ಬಾಲಿವುಡ್, ಕ್ರಿಕೆಟ್ ವಲಯದಲ್ಲಿ ಹರಿದಾಡುತಿತ್ತು.
https://www.youtube.com/watch?v=1ZclNrW1mz4




https://www.youtube.com/watch?v=G6xhtjAA7WA



https://www.instagram.com/p/BaL6GSJgd2r/?taken-by=virushka_slayz
https://www.instagram.com/p/BaG3kbPAgsM/?taken-by=virushka_slayz
https://www.instagram.com/p/BaEKoW6APKn/?taken-by=virushka_slayz
https://www.instagram.com/p/BZ-W1s4AnHO/?taken-by=virushka_slayz
https://www.instagram.com/p/BZ9LGKDAGDg/?taken-by=virushka_slayz
https://www.instagram.com/p/BZ1Ht0bguK4/?taken-by=virushka_slayz
https://www.instagram.com/p/BZrSdyBA8yB/?taken-by=virushka_slayz
https://www.instagram.com/p/BZqmYwZAKvO/?taken-by=virushka_slayz
https://www.instagram.com/p/BZqDne_ARAG/?taken-by=virushka_slayz
https://www.instagram.com/p/BZnyoZWgL__/?taken-by=virushka_slayz
https://www.instagram.com/p/BZjLyWzAqOH/?taken-by=virushka_slayz
https://www.instagram.com/p/BZd5m_SAksf/?taken-by=virushka_slayz
https://www.instagram.com/p/BZfkpf9AQJ9/?taken-by=virushka_slayz
https://www.instagram.com/p/BZYWWK2gy5U/?taken-by=virushka_slayz
https://www.instagram.com/p/BZQLfbmgnDr/?taken-by=virushka_slayz
https://www.instagram.com/p/BZL0jVHApMk/?taken-by=virushka_slayz
https://www.instagram.com/p/BZH5FqiALw7/?taken-by=virushka_slayz
https://www.instagram.com/p/BY9fht1AA8z/?taken-by=virushka_slayz
https://www.instagram.com/p/BY3jv_1gf-B/?taken-by=virushka_slayz
https://www.instagram.com/p/BY2TmCwgLGz/?taken-by=virushka_slayz
https://www.instagram.com/p/BY0NcNkADkz/?taken-by=virushka_slayz
https://www.instagram.com/p/BYsa_MCAQ3R/?taken-by=virushka_slayz

Leave a Reply