ಕಾರ್, ಬೈಕ್, ಎತ್ತಿನಗಾಡಿ ನಂತರ ವಿಮಾನದಿಂದ ಇಳಿದು ಕಿಕಿ ಡ್ಯಾನ್ಸ್: ವಿಡಿಯೋ ವೈರಲ್

ಕಾರ್, ಬೈಕ್, ಎತ್ತಿನಗಾಡಿ ನಂತರ ವಿಮಾನದಿಂದ ಇಳಿದು ಪೈಲೆಟ್ ಇಬ್ಬರು ಕಿಕಿ ಚಾಲೆಂಜ್‍ಗೆ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಲೆಜಾಂದ್ರ ಹಾಗೂ ಆಕೆಯ ಸಹ ಚಾಲಕಿ ಇಬ್ಬರು ವಿಮಾನದಿಂದ ಇಳಿದು ಕಿಕಿ ಚಾಲೆಂಜ್ ಸ್ವೀಕರಿಸಿದ್ದಾರೆ. ವಿಡಿಯೋದಲ್ಲಿ ಪೈಲೆಟ್ ಇಬ್ಬರು ಚಲಿಸುತ್ತಿರುವ ವಿಮಾನದಿಂದ ಇಳಿದು ‘ಮೈ ಫೀಲಿಂಗ್ಸ್’ ಹಾಡಿಗೆ ಡ್ಯಾನ್ಸ್ ಮಾಡಿ ಕಿಕಿ ಚಾಲೆಂಜ್ ಸ್ವೀಕರಿಸಿದ್ದಾರೆ.

ಈ ವಿಡಿಯೋದಲ್ಲಿ ಮೊದಲು ಇಬ್ಬರು ಪೈಲೆಟ್ ಕಾಕ್‍ಪಿಟ್‍ನಲ್ಲಿ ಕುಳಿತಿರುತ್ತಾರೆ. ನಂತರ ವಿಮಾನದ ಸ್ಪೀಡ್ ಲೀವರ್ ಕಂಟ್ರೋಲ್ ಮಾಡಿ ವಿಮಾನವನ್ನು ಚಲಿಸುವ ಹಾಗೇ ಮಾಡಿದ್ದಾರೆ. ನಂತರ ಇಬ್ಬರು ವಿಮಾನದಿಂದ ಬೇಗ ಕೆಳಗೆ ಇಳಿದು ಇಂಗ್ಲೀಷ್ ಹಾಡಿಗೆ ಡ್ಯಾನ್ಸ್ ಮಾಡಲು ಶುರು ಮಾಡಿಡಿದ್ದಾರೆ.

ಸದ್ಯ ಮಹಿಳಾ ಪೈಲೆಟ್ ಇಬ್ಬರು ಕಿಕಿ ಚಾಲೆಂಜ್ ಸ್ವೀಕರಿಸಿ ವಿಮಾನದ ಹೊರಗೆ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋ 25 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಏನಿದು ಕಿಕಿ ಚಾಲೆಂಜ್ ?
ಟ್ರಾಫಿಕ್ ಮಧ್ಯೆ ಚಲಿಸುವ ವಾಹನದಿಂದ ಜಿಗಿದು ಹಾಲಿವುಡ್ ಗಾಯಕ ಡ್ರೇಕ್ ನ “ಇನ್ ಮೈ ಫೀಲಿಂಗ್ಸ್” ಹಾಡು ಹೇಳಿಕೊಂಡು ವಾಹನದ ವೇಗಕ್ಕೆ ರಸ್ತೆಯಲ್ಲಿ ಡ್ಯಾನ್ಸ್ ಮಾಡಬೇಕು. ಮತ್ತೆ ಕಾರಿನೊಳಗೆ ಜಿಗಿದು ಕುಳಿತುಕೊಳ್ಳಬೇಕು. ಈ ಅಪಾಯಕಾರಿ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿತ್ತು.

ವಿಶ್ವದಲ್ಲಿರುವ ಎಲ್ಲ ಸೆಲೆಬ್ರಿಟಿಗಳು ಈ ಚಾಲೆಂಜ್ ಸ್ವೀಕರಿಸಿ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ನಟಿ ಆದಾ ಶರ್ಮಾ ಈ ಚಾಲೆಂಜ್ ಸ್ವೀಕರಿಸಿ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಅಲ್ಲದೇ ಕನ್ನಡದಲ್ಲಿ ಬಿಗ್ ಬಾಸ್ ನಿವೇದಿತಾ ಗೌಡ ಮೊದಲ ಬಾರಿಗೆ ಕಿಕಿ ಚಾಲೆಂಜ್ ಸ್ವೀಕರಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *