ನಿನ್ನ ಉಡುಪು ಚಿಕ್ಕದ್ದು ಎಂದಿದ್ದಕ್ಕೆ ಎಲ್ಲರ ಮುಂದೆ ಕ್ಲಾಸ್ ರೂಮಿನಲ್ಲೇ ಬಟ್ಟೆ ಬಿಚ್ಚಿದ ವಿದ್ಯಾರ್ಥಿನಿ

ನ್ಯೂಯಾರ್ಕ್: ನಿನ್ನ ಉಡುಪು ಚಿಕ್ಕದ್ದು ಎಂದು ಪ್ರೊಫೆಸರ್ ಹೇಳಿದ್ದಕ್ಕೆ ವಿದ್ಯಾರ್ಥಿನಿಯೊಬ್ಬಳು ಬಟ್ಟೆ ಬಿಚ್ಚಿ ಸೆಮಿನಾರ್ ಮಾಡಿ ಪ್ರತಿಭಟನೆ ನಡೆಸಿದ್ದಾಳೆ.

ಲಿಟೆಟಿಯಾ ಚಾಯ್ ತರಗತಿಯಲ್ಲಿ ಎಲ್ಲರ ಮುಂದೆ ಬಟ್ಟೆ ಬಿಚ್ಚಿದ ವಿದ್ಯಾರ್ಥಿನಿ. ಚಾಯ್ ಬಟ್ಟೆ ಬಿಚ್ಚಿ ಪ್ರೊಫೆಸರ್ ವಿರುದ್ಧ ಪ್ರತಿಭಟಸಿದ್ದಾಳೆ. ಈಕೆಗೆ ಹಲವು ಯುವತಿಯರು ಸಾಥ್ ಕೂಡ ನೀಡಿದ್ದಾರೆ. ಈ ಬಗ್ಗೆ ಚಾಯ್ ಫೇಸ್‍ಬುಕ್‍ನಲ್ಲಿ ಲೈವ್ ಬಂದು ತಿಳಿಸಿದ್ದಾಳೆ.

ಸೆಮಿನಾರ್ ಮಂಡನೆ ವೇಳೆ ನಾನು ಡೆನಿಮ್‍ನ ಚಿಕ್ಕ ಶಾರ್ಟ್ಸ್ ಅನ್ನು ಧರಿಸಿದ್ದೆ. ಇದನ್ನು ಕಂಡ ಪ್ರೊಫೆಸರ್ ರುಬೆಕಾ ಮಗ್ಗೂರ್, ನೀನು ನಿಜವಾಗಿಯೂ ಇದು ಧರಿಸುತ್ತೀಯಾ? ಎಂದು ನನಗೆ ಪ್ರಶ್ನಿಸಿದ್ದರು. ಸೆಮಿನಾರ್ ಟಾಪಿಕ್ ಬಗ್ಗೆ ಗಮನ ಹರಿಸುವ ಬದಲು ನಿನ್ನತ್ತ ಗಮನ ಹರಿಸಲು ನೀನು ಈ ರೀತಿ ಉಡುಪು ಧರಿಸಿದ್ದಿ ಎಂದು ಹೇಳಿ ನನಗೆ ಅವಮಾನ ಮಾಡಿದರು. ಪ್ರೊಫೆಸರ್ ಈ ರೀತಿ ಹೇಳಿದಾಗ ನನಗೆ ಏನೂ ಹೇಳಬೇಕೆಂದು ತಿಳಿಯಲಿಲ್ಲ ಎಂದು ಚಾಯ್ ತನ್ನ ಫೇಸ್‍ಬುಕ್‍ನಲ್ಲಿ ಹೇಳಿಕೊಂಡಿದ್ದಾಳೆ.

ಕೆಲವು ವಿದ್ಯಾರ್ಥಿಗಳು ಚಾಯ್ ಪರವಾಗಿ ನಿಂತರು. ಅಂತರಾಷ್ಟ್ರೀಯ ವಿದ್ಯಾರ್ಥಿಗಳು ಪ್ರೊಫೆಸರ್ ಮಗ್ಗೂರ್ ಪರವಾಗಿ ನಿಂತರು. ಆಗ ಚಾಯ್ ನಾನು ಯಾವುದಾದರೂ ನೈತಿಕ ಅಪರಾಧ ಮಾಡಿದ್ದೀನಾ ಎಂದು ಅಳುತ್ತಾ ಕ್ಲಾಸ್‍ರೂಮಿನಿಂದ ಹೊರಹೋದಳು. ನಂತರ ಮಗ್ಗೂರ್ ಹೊರಬಂದು ನೀನು ಈ ರೀತಿಯ ಉಡುಪು ಧರಿಸುವುದರಿಂದ ನಿನ್ನ ತಾಯಿಗೆ ನಿನ್ನ ಬಗ್ಗೆ ಹೇಗೆ ಎನ್ನಿಸುತ್ತದೆ ಹೇಳು ಎಂದು ಚಾಯ್‍ಗೆ ಪ್ರಶ್ನಿಸಿದ್ದಾರೆ.

ಆಗ ಚಾಯ್, ನನ್ನ ತಾಯಿ ಸ್ತ್ರಿ ಸಮಾನತಾವಾದಿಯಾಗಿದ್ದು, ಆಕೆ ಕೂಡ ಲಿಂಗ ಹಾಗೂ ಲೈಂಗಿಕತೆ ವಿಭಾಗದ ಪ್ರೊಫೆಸರ್ ಆಗಿದ್ದಾಳೆ. ನಾನು ಹಾಕುವ ಉಡುಪಿನಿಂದ ನನ್ನ ತಾಯಿಗೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದ್ದಾಳೆ. ನಂತರ ಚಾಯ್ ಸೆಮಿನಾರ್ ಮಾಡುವಾಗ ತನ್ನ ಬಟ್ಟೆಗಳನ್ನು ಬಿಚ್ಚಿದ್ದಾಳೆ. ಅದನ್ನು ನೋಡಿ ಮಗ್ಗೊರ್ ನೀನು ಎನು ಮಾಡುತ್ತಿದ್ದೀಯ ಎಂದು ಕೇಳಿದ್ದಕ್ಕೆ, ನನ್ನ ಜೀವನದ ಅತ್ಯುತ್ತಮ ಭಾಷಣವನ್ನು ಕೊಡಲು ಮುಂದಾಗುತ್ತಿದ್ದೇನೆ ಎಂದು ಉತ್ತರಿಸಿದ್ದಾಳೆ.

ಚಾಯ್ ಸೆಮಿನಾರ್ ಮಾಡುತ್ತಿರುವ ವಿಡಿಯೋ ಲೈವ್‍ನಲ್ಲಿ ಪ್ರಸಾರವಾಗಿದ್ದು, ಚಾಯ್ ವರ್ತನೆಯನ್ನು ಆಕೆಯ ತಾಯಿ ಕೊರಿಯಾದಲ್ಲಿ ಕೂತು ವೀಕ್ಷಿಸಿದ್ದಾರೆ. ಸದ್ಯ ಚಾಯ್‍ನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Comments

Leave a Reply

Your email address will not be published. Required fields are marked *