ವಿಡಿಯೋ: ಭಾರೀ ಮಳೆಗೆ ನೋಡನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋಯ್ತು ಎಮ್ಮೆಗಳು

ರಾಯಚೂರು/ಚಾಮರಾಜನಗರ: ಮಹದೇಶ್ವರ ಬೆಟ್ಟದಿಂದ ನಾಗಮಲೈಗೆ ಹೋಗುವ ಮಾರ್ಗ ಮಧ್ಯೆ ಇರುವ ಕೊಳ್ಳೆಗಾಲ ತಾಲೂಕಿನ ಹಲೆಯೂರು ಗ್ರಾಮದಲ್ಲಿ ವರುಣನ ಆರ್ಭಟಕ್ಕೆ ನಾಲ್ಕು ಎಮ್ಮೆಗಳು ಕೊಚ್ಚಿಕೊಂಡು ಹೋಗಿದೆ.

ಜಿಲ್ಲೆಯಲ್ಲಿ ಗುರುವಾರ ರಭಸದಿಂದ ಸುರಿದ ಮಳೆಗೆ ಮಲೆಮಹದೇಶ್ವರ ಬೆಟ್ಟದ ತಪ್ಪಲಲ್ಲಿ ಮೇವು ಮೇಯುತ್ತಿದ್ದ ಎಮ್ಮೆಗಳು ಎಲ್ಲರೂ ನೋಡ ನೋಡುತ್ತಿದ್ದಂತೆಯೇ ಹಳ್ಳವೊಂದರಲ್ಲಿ ಕೊಚ್ಚಿ ಹೋಗಿವೆ.

ಗದ್ದೆಗಳಿಗೆ ನೀರು: ವಿವಿಧೆಡೆ ಭಾರೀ ಮಳೆ ಸುರಿದಿದ್ದು ಹಳ್ಳಗಳು ತುಂಬಿಹರಿಯುತ್ತಿವೆ. ಉತ್ತಮ ಮಳೆಯಿಂದ ಒಂದೆಡೆ ರೈತರ ಮೊಗದಲ್ಲಿ ಖುಷಿ ಮೂಡಿದ್ದರೆ ಇನ್ನೊಂದೆಡೆ ಹೊಲ ಗದ್ದೆಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.

ಮಾನ್ವಿ ತಾಲೂಕಿನ ಹಿರೇಕೊಟ್ನೆಕಲ್ ಬಳಿ ಹೆದ್ದಾರಿ ಕುಸಿದು ಬಿದ್ದಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಬುದ್ದಿನ್ನಿ ಹಳ್ಳ ತುಂಬಿ 10 ಹಳ್ಳಿಗಳ ಸಂಪರ್ಕ ಕಡಿತವಾಗಿದ್ದು ಶಾಲೆ ಮತ್ತು ಕಾಲೇಜಿಗಳಿಗೆ ಹೋಗಲಾಗದೇ ವಿದ್ಯಾರ್ಥಿಗಳ ಪರದಾಡುತ್ತಿದ್ದಾರೆ.

ನಂದಿಹಾಳ, ನಸ್ಲಾಪುರ, ಅಮರಾವತಿ, ರಾಜಲದಿನ್ನಿ ಗ್ರಾಮಗಳಿಗೆ ನೀರು ನುಗ್ಗಿದೆ. ಮಾನವಿ ಪಟ್ಟಣದಲ್ಲಿ ನಮಾಜ್‍ಗೇರಿ ಗುಡ್ಡದ ಈದ್ಗಾ ಮೈದಾನ ಗೋಡೆ ಪಕ್ಕದ ಮನೆಯ ಮೇಲೆ ಕುಸಿದು ಬಿದ್ದ ಪರಿಣಾಮ ಮನೆಯಲ್ಲಿದ್ದ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳಾದ ಹನುಮಂತ, ಕೃಷ್ಣ, ಲಕ್ಷ್ಮಿ, ಪೂಜಾ, ತೇಜಸ್ವಿನಿಯನ್ನ ಮಾನ್ವಿ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಸಿಂಧನೂರು ತಾಲೂಕಿನಲ್ಲೂ ಭಾರೀ ಮಳೆಯಾಗಿದ್ದು ತಿಮ್ಮಾಪೂರ ಸೇತುವೆ ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತ ಗೊಂಡಿದೆ.

https://youtu.be/miOJ9iXiKyk

https://youtu.be/iwtyxNr7HZU

Comments

Leave a Reply

Your email address will not be published. Required fields are marked *