ಕನ್ನಡಿಯಲ್ಲಿ ತನ್ನ ಮುಖ ತಾನೇ ನೋಡಿ ಗುರ್ ಎಂದ ಕಪಿರಾಯ

ನವದೆಹಲಿ: ಜನರು ಪ್ರವಾಸಕ್ಕೆ ಎಲ್ಲಿ ಹೋದರು ಅಲ್ಲಿ ಕಪಿರಾಯ ಪ್ರತ್ಯಕ್ಷನಾಗುತ್ತಾನೆ. ಅದೇ ರೀತಿ ಇಲ್ಲೊಂದು ಕೋತಿ ಬೈಕ್ ಮೇಲೆ ಕುಳಿತುಕೊಂಡು ತನ್ನ ಮುಖ ತಾನೇ ನೋಡಿಕೊಂಡು ಗುರ್ ಎನ್ನುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಪ್ರಾಣಿಗಳು ವಿಶೇಷವಾಗಿ ಏನನ್ನಾದರೂ ಮಾಡಿದರೆ ಅದು ಸೋಶಿಯಲ್ ಮೀಡಿಯಾದಲ್ಲಿ ಬೇಗ ವೈರಲ್ ಆಗುತ್ತೆ. ಅದರಲ್ಲಿಯೂ ಪ್ರಾಣಿಗಳ ವೀಡಿಯೋಗಳು, ಅವುಗಳು ಆಟವಾಡುತ್ತಿರುವ, ತನ್ನ ಎದುರಿಗೆ ಇರುವ ವ್ಯಕ್ತಿಯಂತೆ ನಟಿಸುವುದು. ಮನುಷ್ಯನ ಜೊತೆಗೆ ನಡೆದುಕೊಳ್ಳುವ ರೀತಿ ಈ ಎಲ್ಲ ಅಂಶಗಳಿಂದ ಪ್ರಾಣಿಗಳು ಮನುಷ್ಯನಿಗೆ ಬಹಳ ಹತ್ತಿರವಾಗುತ್ತೆ. ಅದರಂತೆ ಜನರು ಪ್ರವಾಸಕ್ಕೆ ಅಥವಾ ಎಲ್ಲಿಗಾದರೂ ದೇವಸ್ಥಾನಕ್ಕೆ ಹೋದರೆ ಮನುಷ್ಯನಿಗೆ ಕಾಣಸಿಗುವುದು ಎಂದರೆ ಕೋತಿ. ಇದು ಅಲ್ಲಿಗೆ ಬಂದ ಜನರ ಕೈಯಲ್ಲಿ ಏನಿದೆ ಅದನ್ನು ಕಿತ್ತು ತಿನ್ನುವುದೇ ಇವರ ಚಾಳಿ. ಇಲ್ಲೊಂದು ಕೋತಿ ಬೈಕ್ ಮೇಲೆ ಕುಳಿತುಕೊಂಡು ತನ್ನ ಮುಖವನ್ನು ತಾನೇ ನೋಡಿಕೊಂಡು ಗುರ್ ಎಂದು ರಿಯಾಕ್ಟ್ ಮಾಡುತ್ತಿದೆ. ಇದನ್ನೂ ಓದಿ: ನಾನು ಕಬಡ್ಡಿಯಾಡಿದ್ದನ್ನು ರಾವಣರು ವೀಡಿಯೋ ಮಾಡಿದ್ದಾರೆ: ಪ್ರಜ್ಞಾ ಠಾಕೂರ್

ಈ ದೃಶ್ಯವನ್ನು ನೋಡುತ್ತಿದ್ದ ಜನರಿಗೆ ಇದು ಒಳ್ಳೆಯ ಮನೋರಂಜನೆಯಾಗಿತ್ತು. ಅದು ಅಲ್ಲದೇ ಈ ವೀಡಿಯೋವನ್ನು ಜನರು ಫೋನ್ ನಲ್ಲಿ ಚಿತ್ರಿಸಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಲಾಗಿದೆ. ಈ ವೀಡಿಯೋ ನೋಡಿದವರೆಲ್ಲ ನಗುವಿನ ಎಮೋಜಿಯನ್ನು ಕಳುಹಿಸುತ್ತಿದ್ದಾರೆ.

ಈ ವೀಡಿಯೋದಲ್ಲಿ ಕೋತಿ ಬೈಕಿನ ಹ್ಯಾಂಡಲ್ ಮೇಲೆ ಕುಳಿತು ಅಲ್ಲಿಂದ ಕನ್ನಡಿಯಲ್ಲಿ ತನ್ನ ಮುಖ ತಾನೇ ನೋಡಿಕೊಂಡು ಬಾಯಿ ತೆರೆದು, ಇದು ನಾನಾ ಅಥವಾ ಬೇರೆ ಕೋತಿನಾ ಎಂದು ಗೊಂದಲದಿಂದ ತಲೆ ಕೆರೆದುಕೊಳ್ಳುತ್ತೆ. ಅದು ಅಲ್ಲದೇ ಕೋಪದಿಂದ ಕನ್ನಡಿಯನ್ನು ಹೊಡೆದು, ಕನ್ನಡಿಗೆ ಗುರ್ ಎಂದು ರಿಯಾಕ್ಟ್ ಮಾಡಿರುವ ದೃಶ್ಯ ಸೆರೆಯಾಗಿದೆ. ಇದನ್ನೂ ಓದಿ: ಮಾಜಿ ಮಂತ್ರಿ ಎನ್.ಎಚ್ ಶಿವಶಂಕರರೆಡ್ಡಿ ವಿರುದ್ಧ ನಿಂದನೆ ಆರೋಪ -ಆಡಿಯೋ ವೈರಲ್

 

View this post on Instagram

 

A post shared by Sachin Sharma (@helicopter_yatra_)

ಈ ವೀಡಿಯೋವನ್ನು ನೋಡಿದ ವೀಕ್ಷಕರಲ್ಲಿ ಒಬ್ಬರಂತೂ, ಈ ಕೋತಿ ಕರೀನಾ ಕಪೂರ್‍ನಿಂದ ಸ್ವ-ಪ್ರೇಮ ಸಲಹೆಗಳನ್ನು ತೆಗೆದುಕೊಳ್ಳಬಹುದು. ಅವರು ತಮ್ಮ ಚಿತ್ರದಲ್ಲಿ ‘ನೀನು ಇಷ್ಟು ಸುಂದರವಾಗಿರುವುದು ನ್ಯಾಯವಲ್ಲ’ ಎಂದು ಕನ್ನಡಿ ಮುಂದೆ ನಿಂತಿಕೊಂಡು ಹೇಳಿಕೊಳ್ಳುತ್ತಿರುತ್ತಾಳೆ ಅದೇ ರೀತಿ ಈ ಕೋತಿ ಸಹ ಎಂದು ಕಾಮೆಂಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *