ಹೆದ್ದಾರಿಗಾಗಿ ಧರೆಗುರುಳಿದ ಬೃಹತ್ ಮರ- ನೂರಾರು ಹಕ್ಕಿಗಳ ಮಾರಣಹೋಮ

ತಿರುವನಂತಪುರಂ: ರಾಷ್ಟ್ರೀಯ ಹೆದ್ದಾರಿಗಾಗಿ ಬೃಹತ್ ಮರವೊಂದನ್ನು ಉರುಳಿಸಿದ ಪರಿಣಾಮ ನೂರಾರು ಪಕ್ಷಿಗಳು ಮಾರಣಹೋಮವಾದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ತಿರುರಂಗದಿ ನಗರದ ವಿಕೆ ಪಡಿ ಎಂಬಲ್ಲಿ ನಡೆದಿದೆ.

ಸಾವಿರಾರು ಪಕ್ಷಿಗಳ ಮಾರಣಹೋಮವಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಪಕ್ಷಿಪ್ರಿಯರು ಆಕ್ರೋಶ ಹೊರಹಾಕಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಮರ ಉರುಳಿಸಿದ ಜೆಸಿಬಿ ಚಾಲಕನನ್ನು ಬಂಧಿಸಲಾಗಿದೆ. ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಪಡೆಯದೇ ಮರವನ್ನು ಉರುಳಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ರಾಷ್ಟ್ರೀಯ ಹೆದ್ದಾರಿ 66 ಅನ್ನು ವಿಸ್ತರಣೆ ಮಾಡುವ ಸಲುವಾಗಿ ರಸ್ತೆ ಬದಿಯ ಮರಗಳನ್ನು ಕಡಿಯಲಾಗುತ್ತಿತ್ತು. ಅಂತೆಯೇ ಗುರುವಾರ ಭಾರೀ ಗಾತ್ರದ ಮರವನ್ನು ನೆಲಕ್ಕುರುಳಿಸಿದರಿಂದ ನೂರಾರು ಪಕ್ಷಿಗಳು ಸಾವನ್ನಪ್ಪಿವೆ. ಇದನ್ನೂ ಓದಿ: ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಳ್ಳುವುದು ಲೈಂಗಿಕ ಉದ್ದೇಶವನ್ನು ಸೂಚಿಸುತ್ತದೆ: ಮುಂಬೈ ಕೋರ್ಟ್

ಮರ ಕಡಿಯುವುದಕ್ಕೂ ಮುನ್ನ ಅವುಗಳಿಗೆ ಹಾರಲು ಅವಕಾಶ ನೀಡಬೇಕಿತ್ತು. ಇಲ್ಲವೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ ಇದ್ಯಾವುದೂ ಮಾಡದೇ ಏಕಾಏಕಿ ಮರವನ್ನು ಉರುಳಿಸಿರುವ ಪರಿಣಾಮ ಗೂಡು ಸಮೇತ ಹಕ್ಕಿಗಳು ಮರದ ಕೊಂಬೆಗಳಿಗೆ ಸಿಲುಕಿ ಮೃತ ಪಟ್ಟಿವೆ. ಇನ್ನೂ ಕೆಲವು ಮರ ಬಿದ್ದ ರಭಸಕ್ಕೆ ನೆಲಕ್ಕೆ ಅಪ್ಪಳಿಸಿ ಸಾವನ್ನಪ್ಪಿವೆ.

ಹುಣಸೆ ಮರದಲ್ಲಿ ಶಿಳ್ಳೆ ಹೊಡೆಯುವ ಬಾತುಕೋಳಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ಗೂಡುಕಟ್ಟಿಕೊಂಡು ಬದುಕು ನಡೆಸುತ್ತಿದ್ದವು. ಈ ಬಡ ಜೀವಿಗಳ ಜೀವನದ ಬಗ್ಗೆ ಹೆಚ್ಚು ಗಮನ ಹರಿಸದ ಜನರ ಮೇಲೆ ಇದೀಗ ನೆಟ್ಟಿಗರು ಗರಂ ಆಗಿದ್ದಾರೆ. ಈ ಪಕ್ಷಿಗಳನ್ನು ಉಳಿಸಲು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳದೆ ಮರವನ್ನು ಉರುಳಿಸಲು ನಿರ್ಧರಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *