ಪತ್ನಿಯೊಂದಿಗೆ ಸಿಕ್ಕಿಬಿದ್ದ ಯುವಕನನ್ನ ಮರಕ್ಕೆ ಕಟ್ಟಿ ಅರೆನಗ್ನಗೊಳಿಸಿ ಥಳಿಸಿದ ಪತಿ – ವಿಡಿಯೋ ವೈರಲ್

ಜೈಪುರ: ಪತ್ನಿಯೊಂದಿಗೆ ಸಿಕ್ಕಿಬಿದ್ದ ಯುವಕನನ್ನು ಪತಿ ಗ್ರಾಮದ ಮರವೊಂದಕ್ಕೆ ಕಟ್ಟಿ ಹಾಕಿ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜಸ್ಥಾನದ ಬಾಂಸವಾಡ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತನ್ನ ಪತ್ನಿಯ ಜೊತೆ ಯುವಕ ಇರೋದನ್ನ ಕಂಡ ಪತಿ ಕೋಪಗೊಂಡು ಆತನನ್ನು ಹೊರತಂದು ಮರಕ್ಕೆ ಕಟ್ಟಿ ಅರೆ ನಗ್ನಗೊಳಿಸಿ ಹೊಡೆದಿದ್ದಾನೆ.

ಯುವಕನಿಗೆ ಥಳಿಸುತ್ತಿರುವ ಸುದ್ದಿ ಕೆಲವೇ ಕ್ಷಣಗಳಲ್ಲಿ ಗ್ರಾಮದ ತುಂಬೆಲ್ಲಾ ಹರಡಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಯುವಕನನ್ನು ಬಿಡಿಸಲು ಮುಂದಾಗಿಲ್ಲ. ಈ ವೇಳೆ ಗ್ರಾಮದ ಕೆಲ ಯುವಕರು ತಮ್ಮ ಮೊಬೈಲ್ ನಲ್ಲಿ ಹಲ್ಲೆಯ ದೃಶ್ಯಗಳನ್ನು ಸೆರೆ ಹಿಡಿದುಕೊಂಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಯುವಕನನ್ನು ರಕ್ಷಣೆ ಮಾಡಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ಪಂಚಾಯಿತಿ ವಿವಾದಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಯುವಕನನ್ನು ಥಳಿಸಲಾಗಿದೆ. ಈ ಸಂಬಂಧ ಗ್ರಾಮದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಅಂತಾ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಹಲ್ಲೆ ಮಾಡಿರುವ ವ್ಯಕ್ತಿ ಮಾತ್ರ ಯುವಕ ನನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಅಂತಾ ದೂರು ನೀಡಿದ್ದರೆ ಇತ್ತ ಯುವಕ ಸಹ ಹಲ್ಲೆ ಮಾಡಿದವರ ವಿರುದ್ಧ ದೂರು ದಾಖಲಿಸಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *