ಹಾರರ್ ಸಿನಿಮಾ ಶೂಟಿಂಗ್ ವೇಳೆ ಸಹನಟಿಯ ಮೇಲೆ ದಾಳಿ ಮಾಡಿದ್ಳು ದೆವ್ವ ಪಾತ್ರಧಾರಿ ನಟಿ- ವಿಡಿಯೋ ವೈರಲ್

ನೋಮ್ ಪೆನ್: ಸಿನಿಮಾ ಚಿತ್ರೀಕರಣದ ವೇಳೆ ದೆವ್ವದ ವೇಷ ಧರಿಸಿದ್ದ ನಟಿಯೊಬ್ಬಳು ತನ್ನ ಸಹನಟಿಯ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದು, ಇದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಕಾಂಬೋಡಿಯಾದಲ್ಲಿ ಹಾರರ್ ಸಿನಿಮಾ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ದೆವ್ವದ ಪಾತ್ರ ನಿರ್ವಹಿಸುತ್ತಿದ್ದ ನಟಿ ಕಪ್ಪು ಸೀರೆಯುಟ್ಟಿದ್ದು, ವಿಕಾರವಾಗಿ ಮೇಕಪ್ ಮಾಡಲಾಗಿತ್ತು.

ಸಿನಿಮಾ ಸೆಟ್‍ನಲ್ಲಿ ಇದ್ದಕ್ಕಿದ್ದಂತೆ ಆಕೆ ವಿಚಿತ್ರವಾಗಿ ವರ್ತಿಸಿದ್ದು, ತೆಳುವಾದ ವೈರ್‍ನಿಂದ ಬೇರೊಬ್ಬ ನಟಿಯ ಕತ್ತು ಬಿಗಿದಿದ್ದಾಳೆ. ದಾಳಿಗೊಳಗಾದ ನಟಿಗೆ ಕತ್ತಿನ ಭಾಗದಲ್ಲಿ ಗಾಯವಾಗಿದೆ.

ವಿಡಿಯೋದಲ್ಲಿ ಚಿತ್ರತಂಡ ನಟಿಯ ಮೈಮೇಲೆ ದೆವ್ವ ಬಂದಿದೆ ಎಂಬಂತೆ ಬಿಂಬಿಸಿದ್ದು, ಆಕೆಯ ಜೊತೆ ಮಾತನಾಡಿ ನಟಿಯ ದೇಹವನ್ನು ಬಿಟ್ಟುಹೋಗುವಂತೆ ಕೇಳಿಕೊಳ್ತಿರೋದನ್ನ ಕಾಣಬಹುದು. ಘಟನೆಯ ಫೋಟೋ ಹಾಗೂ ವಿಡಿಯೋವನ್ನ ಫೇಸ್‍ಬುಕ್ ಬಳಕೆದಾರರಾದ ಖೋಮ್ ಸೊಖ್ಖಾಯ್‍ತಿಟ್ ಎಂಬವರು ಹಂಚಿಕೊಂಡಿದ್ದಾರೆ.

ಹಲ್ಲೆಗೊಳಗಾದ ನಟಿ ಫೋನಿನಲ್ಲಿ ಮಾತನಾಡುತ್ತಾ ಅಳುತ್ತಿರೋದನ್ನ ಕಾಣಬಹುದು. ಘಟನೆಯಿಂದಾಗಿ ಆಕೆ ತುಂಬಾ ಭಯಭೀತಳಾಗಿದ್ದಳು ಎಂದು ವರದಿಯಾಗಿದೆ. ವಿಡಿಯೋ ನೋಡಿದವರು ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಕೆಲವರು ಈ ಬಗ್ಗೆ ತಮಾಷೆ ಮಾಡಿದ್ರೆ, ಇನ್ನೂ ಕೆಲವರು ಇದು ನಿಜಾನಾ ಅಂತ ಹುಬ್ಬೇರಿಸಿದ್ದಾರೆ.

ಆದ್ರೆ ನಟಿ ಬೇಕಂತಲೇ ಹೀಗೆಲ್ಲಾ ಮಾಡಿದಳಾ? ಇದೆಲ್ಲಾ ಸಿನಿಮಾ ಪ್ರಮೋಷನ್‍ಗಾಗಿ ನಡೆದ ಗಿಮಿಕ್ಕಾ ಎಂಬ ಪ್ರಶ್ನೆಗಳು ಮೂಡಿವೆ.

https://www.facebook.com/visalsak.ratanak/videos/pcb.1410207952441699/1410207595775068/?type=3&theater

Comments

Leave a Reply

Your email address will not be published. Required fields are marked *