ಮುಂಬೈ: ಈ 40 ಪ್ಲಸ್ ಹಾಟಿ ಹುಡುಗಿಯನ್ನು ಜನರು ಮರೆತೇ ಹೋಗಿದ್ದರು. ಕೆಲವು ವರ್ಷಗಳ ಹಿಂದೆ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ಕಾಣಿಸುತ್ತಿದ್ದರು. ಆದರೆ ಇತ್ತೀಚೆಗೆ ಪೇಜ್ 3 ಪಾರ್ಟಿಗೂ ಈ ಫೇಸ್ ಕಟ್ಟು ನೋ ಎಂಟ್ರಿಯಂತಾಗಿತ್ತು. ಆದರೆ ಇದೀಗ ಈಕೆ `ನನ್ನನ್ನು ಅಷ್ಟು ಬೇಗ ಮರೆಯೋಕೆ ಬಿಡ್ತೀನಾ’ ಎಂದು ತನ್ನ ಜಿಮ್ ವಕೌರ್ಟ್‍ನ ಝಲಕ್ ತೋರಿಸಿದ್ದಾರೆ.
ಸುಶ್ಮಿತಾ ಸೆನ್ ಬಹುಶಃ ಬಾಲಿವುಡ್ ಮಾತ್ರ ಅಲ್ಲ, ಇಡೀ ಭಾರತೀಯ ಚಿತ್ರರಂಗವೇ ಈ ಹೆಣ್ಣನ್ನು ಮರೆತು ಹೋಗಿದೆ. ದಶಕಗಳ ಹಿಂದೆ ಐಶ್ವರ್ಯ ರೈ ಮತ್ತು ಸುಶ್ಮಿತಾ ಸೇನ್ ಇಬ್ಬರನ್ನೂ ಕಂಪೇರ್ ಮಾಡುತ್ತಿದ್ದರು. ಒಬ್ಬರು ಮಿಸ್ ಯುನಿವರ್ಸ್ ಇನ್ನೊಬ್ಬರು ಮಿಸ್ ವರ್ಲ್ಡ್. ಆದರೆ ಐಶ್ ಗೆ ಕೈ ಹಿಡಿದ ಅದೃಷ್ಟ ಸುಶ್ ಕಾಲ ಬಳಿಗೂ ಸುಳಿಯಲಿಲ್ಲ. ಅದೇ ಸುಶ್ಮಿತಾ ಈಗ ಮತ್ತೆ ಲೈಮ್ ಲೈಟಿಗೆ ಬರಲು ಜಬರ್ ದಸ್ತ್ ವರ್ಕೌಟ್ ಮಾಡ್ತಿದ್ದಾರೆ.
ಇದೇ ತಿಂಗಳು 19ಕ್ಕೆ ಸುಶ್ಮಿತಾಗೆ 42 ವರ್ಷ ತುಂಬುತ್ತದೆ. ಅದಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದಾರೆ. ಸಿಕ್ಸ್ ಪ್ಯಾಕ್ ಆ್ಯಬ್ ಗಾಗಿ ಜಿಮ್ ನಲ್ಲಿ ಕಸರತ್ತು ನಡೆಸ್ತಿದ್ದಾರೆ. ಇದರ ಒಂದು ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಸದ್ಯ ವೈರಲ್ ಆಗಿದೆ.
https://www.instagram.com/p/Ba_esGvHrxT/?hl=en&taken-by=sushmitasen47
https://www.instagram.com/p/Bal1sk8HJsI/?hl=en&taken-by=sushmitasen47






Leave a Reply