ಕಲಬುರಗಿಯಲ್ಲಿ ಹುಲಿ ಪ್ರತ್ಯಕ್ಷ ವದಂತಿಗೆ ಹೈರಾಣಾದ ಜನ: ಅಷ್ಟಕ್ಕೂ ಆ ಹುಲಿ ಫೋಟೋ ಎಲ್ಲಿಯದು ಗೊತ್ತಾ?

ಕಲಬುರಗಿ:  ಜಿಲ್ಲೆಯ ಜನರು ಇಷ್ಟು ದಿನ ತಮ್ಮ ಜಿಲ್ಲೆಯಲ್ಲಿ ಚಿರತೆಗಳನ್ನು ನೋಡಿದ್ರು. ಆದ್ರೆ ಕಳೆದ ರಾತ್ರಿಯಿಂದ ಹುಲಿ ಇದೆ ಅನ್ನೋದನ್ನು ಕೇಳಿ ಶಾಕ್ ಆಗಿದ್ದಾರೆ.

ಕಳೆದ ರಾತ್ರಿ ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಬಳಿಯಿರುವ ಚಂದಾಪುರ ಬಳಿ ಹುಲಿಯೊಂದು ರಸ್ತೆ ದಾಟಿಕೊಂಡು ಹೋಗಿದೆ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಫೋಟೋಗಳನ್ನು ಹರಿಬಿಡಲಾಗುತ್ತಿದೆ. ಚಂದಾಪುರ ಬಳಿಯ ಅರಣ್ಯ ಪ್ರದೇಶದಲ್ಲಿ ಹುಲಿ ಪ್ರತ್ಯಕ್ಷ ವದಂತಿ ಜೋರಾಗಿ ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಿದೆ. ಹುಲಿ ಫೋಟೋ ನೋಡಿ ಚಂದಾಪುರ ಸೇರಿದಂತೆ ಅಕ್ಕಪಕ್ಕ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಅಲ್ಲದೆ ಬೆಳಗಿನ ಜಾವದವರೆಗೆ ಚಿಂಚೋಳಿ-ಚಂದಾಪುರ ರಸ್ತೆ ಬಂದ್ ಮಾಡಲಾಗಿತ್ತು.

ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಫೋಟೋಗಳು ಹರಿದಾಡುತ್ತಿವೆ. ಆದ್ರೆಯಾರು ನೋಡಿದ್ದಾರೆ ಅನ್ನೋದು ಗೊತ್ತಾಗಿಲ್ಲಾ. ಇಲ್ಲಿವರಗೆ ಈ ಭಾಗದ ಅರಣ್ಯದಲ್ಲಿ ಹುಲಿ ಕಂಡುಬಂದಿರುವ ಉದಾಹರಣೆಗಳಿಲ್ಲ.

ಹುಲಿ ವದಂತಿ ಬಗ್ಗೆ ಮಾಹಿತಿ ನೀಡಿರುವ ಚಿಂಚೋಳಿ ಆರ್‍ಎಫ್‍ಓ ಸುನೀಲ್ ಕುಮಾರ್ ಚವ್ಹಾಣ್, ಈ ಭಾಗದಲ್ಲಿ ಇಲ್ಲಿವರಗೆ ಹುಲಿ ಕಂಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಯಾರೋ ಫೋಟೋ ಹರಿಬಿಡುತ್ತಿದ್ದಾರೆ. ಇಂದು ಮುಂಜಾನೆ ಹುಲಿ ಹೆಜ್ಜೆಗಳನ್ನು ಕೂಡಾ ಪರಿಶೀಲಿಸಲಾಗಿದೆ. ಆದ್ರೆ ಯಾವುದೇ ಹೆಜ್ಜೆ ಗುರುತು ಸಿಕ್ಕಿಲ್ಲ. ಯಾರು ಕೂಡಾ ಪ್ರತ್ಯಕ್ಷವಾಗಿ ನೋಡಿದವರಿಲ್ಲ. ಆದ್ರು ವಿನಾಕಾರಣ ವದಂತಿ ಹಬ್ಬಿಸಲಾಗುತ್ತಿದೆ. ಈ ಭಾಗದ ಅರಣ್ಯ ಹುಲಿಗೆ ಸೂಕ್ತವಾದ ಅರಣ್ಯವಲ್ಲ. ಹೀಗಾಗಿ ಇಲ್ಲಿ ಹುಲಿಗಳು ಇಲ್ಲ ಅಂತ ಹೇಳಿದ್ದಾರೆ.

ಹುಲಿ ಫೋಟೋ ಗುಜರಾತ್ ನದ್ದು: ಚಂದಾಪುರ ದಲ್ಲಿ ಕಂಡುಬಂದಿದೆ ಅಂತ ಹೇಳಲಾಗುತ್ತಿರುವ ಹುಲಿಯ ವೈರಲ್ ಫೋಟೋ ಗುಜರಾತ್‍ನದ್ದು ಅಂತ ಹೇಳಲಾಗುತ್ತಿದೆ. ಗುಜರಾತ್ ನ ಗೀರ್ ಅರಣ್ಯ ಪ್ರದೇಶದಲ್ಲಿ ಕೆಲ ತಿಂಗಳ ಹಿಂದೆ ತಗೆಯಲಾಗಿರುವ ಫೋಟೋ ಇದಾಗಿದ್ದು, ರಾಜ್ಯದ ಅನೇಕ ಜಿಲ್ಲೆಯ ಜನರು ಇದು ನಮ್ಮ ಜಿಲ್ಲೆಯದ್ದು ಅಂತ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ ಎನ್ನಲಾಗಿದೆ.

A tiger beat the heat at a pond at Nagarahole forest. 

ಯಾವ ಪ್ರದೇಶದಲ್ಲಿ ಹುಲಿ ಇರುತ್ತವೆ?: ಜಿಂಕೆ, ಕಡವೆಗಳು ಹೆಚ್ಚು ಇದ್ದರೆ ಹುಲಿ ಬರುತ್ತವೆ. ನಾಯಿಗಳು ಹೆಚ್ಚಾಗಿದ್ದ ಪ್ರದೇಶದಕ್ಕೆ ಚಿರತೆಗಳು ಬರುತ್ತವೆ. ಬಿಸಿಲಿನಿಂದ ಕೂಡಿರುವ ಅರಣ್ಯದಲ್ಲಿ ಹುಲಿಗಳು ವಾಸವಾಗೋದಿಲ್ಲ. ಹುಲಿಗಳು ಒಂದೋದಾಗಿ ಓಡಾಡೋದಿಲ್ಲ. ಹೆಚ್ಚಾಗಿ ಗುಂಪಾಗಿ ಹೋಗುತ್ತವೆ. ಚಿರತೆ ಮಾತ್ರ ಒಂದೊಂದಾಗಿ ಅಡ್ಡಾಡುತ್ತದೆ. ಚಿಂಚೋಳಿ ಕಾಡು ಬಿಸಿಲಿನಿಂದ ಕೂಡಿದ ಕಾಡು. ಹೀಗಾಗಿ ಹುಲಿ ಇರೋದಿಲ್ಲ. ದಟ್ಟವಾದ ಕಾಡಿನಲ್ಲಿ ಮಾತ್ರ ಹುಲಿ ಇರುತ್ತವೆ ಎಂದು ಆರ್‍ಎಫ್‍ಓ ಸುನೀಲ್ ಕುಮಾರ್ ತಿಳಿಸಿದ್ದಾರೆ.

A tiger crossing the safari trail inside Bandipur National Park in Mysuru 

                        A tiger passing a dry area of Bandipur Forest 

Eye to eye: Tiger seen at Nagarahole National Forest

Comments

Leave a Reply

Your email address will not be published. Required fields are marked *