ನವದೆಹಲಿ: ವಿರಾಟ್ ಮತ್ತು ಅನುಷ್ಕಾರವರು ಕ್ಯೂಟ್ ಫೋಟೋವೊಂದನ್ನು ಕ್ಲಿಕ್ ಮಾಡಿ ಇನ್ಸಟಾ ದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಅದು ಹೆಚ್ಚಿನ ಜನರ ಮೆಚ್ಚುಗೆಯನ್ನು ಪಡೆದಿಕೊಂಡಿದ್ದು, ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಅವರು ಶುಕ್ರವಾರ ರಾತ್ರಿ ಹೋಟೆಲ್‍ವೊಂದಕ್ಕೆ ಊಟ ಮಾಡುವುದಕ್ಕೆ ತೆರಳಿದ್ದರು. ಆ ವೇಳೆ ಫೋಟೋವನ್ನು ಕ್ಲಿಕ್ ಮಾಡಿ, ಇನ್ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ, ‘ನನ್ನ ಸಂಗಾತಿ ಜೊತೆ ಅತ್ಯುತ್ತಮವಾದ ಭೋಜನ’ ಎಂದು ಬರೆದುಕೊಂಡಿದ್ದಾರೆ. ಇದು ಒಂದು ದಿನದಲ್ಲೇ ಮಿಲಿಯನ್ ಲೈಕ್ಸ್ ಪಡೆದುಕೊಂಡಿದೆ.
ಈ ಫೋಟೋವಿಗೆ ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸಿದ್ದು, ‘ಕಪಲ್ ಗೋಲ್ಸ್’ ಎಂದು ಕಮೆಂಟ್ ಮಾಡಿದ್ದಾರೆ.
ಈ ತಿಂಗಳಲ್ಲೇ ವಿರುಷ್ಕಾ ಸಾಲು ಸಾಲದ ಫೋಟೋಗಳನ್ನು ಅಪ್ಲೋಡ್ ಮಾಡಿದ್ದರು. ಎಲ್ಲವೂ ಹೆಚ್ಚಿನ ಲೈಕ್ಸ್ ಪಡೆದುಕೊಂಡಿದೆ. ಅಷ್ಟೇ ಅಲ್ಲದೇ ಭಾರತ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯ ವೀಕ್ಷಣೆಗಾಗಿ ಅನುಷ್ಕಾರವರು ವಿರಾಟ್‍ರೊಂದಿಗೆ ಲಂಡನ್ ಗೆ ತೆರಳಿದ್ದಾರೆ. ಆ ವೇಳೆ ಅನುಷ್ಕಾರವರು ಶಿಖರ್ ಧವನ್ ಕುಟುಂಬ ಮತ್ತು ಎಂ ಎಸ್ ಧೋನಿ ಪತ್ನಿ ಸಾಕ್ಷಿರವರೊಂದಿಗೆ ಕ್ಲಿಕ್ ಮಾಡಿದ ಫೋಟೋಗಳನ್ನು ಕೂಡ ಅಪ್ಲೋಡ್ ಮಾಡಿಕೊಂಡಿದ್ದರು.
https://www.instagram.com/p/Bld697WAlaz/?utm_source=ig_embed
https://www.instagram.com/p/Bla3P77gTYe/?taken-by=virat.kohli
https://www.instagram.com/p/Bk-qhasFPQC/?taken-by=sakshisingh_r

Leave a Reply