ಪ್ರಾಣಿಗಳನ್ನು ತುಂಬಿಕೊಂಡಂತೆ 800 ಜನ ಒಂದೇ ವಿಮಾನದಲ್ಲಿ ಭಾರತಕ್ಕೆ ಬಂದಿಲ್ಲ

ನವದೆಹಲಿ: ಅಫ್ಘಾನಿಸ್ತಾನದಿಂದ 800 ಮಂದಿ ವಿಮಾನದ ಮೂಲಕ ಭಾರತಕ್ಕೆ ಮರಳುತ್ತಿದ್ದಾರೆ ಎಂಬ ಹೆಡ್‍ಲೈನ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಫೇಕ್ ಫೋಟೋವೊಂದು ಹರಿದಾಡುತ್ತಿದೆ.

ತಾಲಿಬಾನ್‍ಗಳ ಅಟ್ಟಹಾಸಕ್ಕೆ ನಡುಗಿ ಅಲ್ಲಿನ ಜನ ಜೀವ ಉಳಿದರೆ ಸಾಕು ಎಂದು ಭಾವಿಸಿ ವಿದೇಶಗಳ ವಾಯುಸೇನೆಯ ವಿಮಾನ, ಪ್ರಯಾಣಿಕ ವಿಮಾನ ಏರತೊಡಗಿದ್ದಾರೆ. ಈ ವೇಳೆ 2013ರ ಫೋಟೋಗೆ ಭಾರತಕ್ಕೆ ಜನ ಮರಳುತ್ತಿದ್ದಾರೆ. ವಿಮಾನ ಸಾಮರ್ಥ್ಯಕ್ಕಿಂತಲೂ ಹೆಚ್ಚು ಜನರನ್ನು ಪ್ರಾಣಿಗಳಂತೆ ತುಂಬಲಾಗಿದೆ ಎಂದು ಬರೆದು ಬರೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದು, ಫೋಟೋ ವೈರಲ್ ಆಗಿದೆ. ಇದನ್ನೂ ಓದಿ: ಅಫ್ಘಾನ್ ನಿರಾಶ್ರಿತರಿಗೆ ಭಾರತದ ಆಶ್ರಯ – ಏನಿದು ವೀಸಾ? ವಿಶೇಷತೆ ಏನು?

ಸತ್ಯ ಏನು?
ಜನರನ್ನು ರಕ್ಷಣೆ ಮಾಡುತ್ತಿರುವ ದೃಶ್ಯ ಸರಿಯಾಗಿದ್ದರೂ ಇದು ಅಫ್ಘಾನಿಸ್ತಾನದಿಂದ ಭಾರತಕ್ಕೆ ಮರಳುತ್ತಿರುವ ಫೋಟೋ ಅಲ್ಲ. 2013ರ ಡಿಸೆಂಬರ್ ನಲ್ಲಿ  ಭೀಕರ ಚಂಡಮಾರುತಕ್ಕೆ ಫಿಲಿಪೈನ್ಸ್ ತತ್ತರಿಸಿತ್ತು. ಈ ವೇಳೆ ಅಮೆರಿಕ ವಾಯಸೇನೆಯ ವಿಮಾನದ ಮೂಲಕ 600 ಮಂದಿಯನ್ನು ಸ್ಥಳಾಂತರಿಸಿತ್ತು. ಈ ಫೋಟೋ ಈಗ ವೈರಲ್ ಆಗುತ್ತಿದೆ.

ಭಾರತ ಮತ್ತು ಮತ್ತು ಅಮೆರಿಕ ಅಫ್ಘಾನಿಸ್ತಾನಕ್ಕೆ ಗ್ಲೋಬ್ ಮಾಸ್ಟರ್ ವಿಮಾನವನ್ನು ಕಳುಹಿಸಿ ತನ್ನ ಪ್ರಜೆಗಳನ್ನು ಸ್ವದೇಶಕ್ಕೆ ಕರೆದುಕೊಂಡು ಬರುತ್ತಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ – ಭಾರತಕ್ಕೆ ಇರುವ ಸವಾಲುಗಳೇನು?

ವೈರಲ್ ಯಾಕೆ?
ಸಾಧಾರಣವಾಗಿ ಯಾವುದಾದರು ಒಂದು ಟ್ರೆಂಡ್ ಸೃಷ್ಟಿಸುವ ಘಟನೆ ನಡೆದರೆ ಆ ಘಟನೆಗೆ ಪೂರಕವಾಗುವ ಫೋಟೋ, ವಿಡಿಯೋಗಳನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ. ಈಗ ಅಫ್ಘಾನಿಸ್ತಾನ ವಿಚಾರ ವಿಶ್ವದಲ್ಲೇ ಟ್ರೆಂಡ್ ಆಗುತ್ತಿರುವ ಕಾರಣ ಹಲವು ವಿಡಿಯೋ, ಫೋಟೋಗಳು ಬರುತ್ತಿವೆ. ಇದರಲ್ಲಿ ಸತ್ಯ ಯಾವುದು? ಸುಳ್ಳು ಯಾವುದು ಎನ್ನುವುದು ಕೂಡಲೇ ತಿಳಿಯುವುದಿಲ್ಲ. ಫೋಟೋ, ವಿಡಿಯೋ ವೈರಲ್ ಆದ ಬಳಿಕ ಮೂಲ ಯಾವುದು ಎನ್ನುವುದು ತಿಳಿಯುತ್ತದೆ. ಆದರೆ ಅಷ್ಟು ಹೊತ್ತಿಗೆ ಫೋಟೋ, ವಿಡಿಯೋ ವೈರಲ್ ಆಗಿರುತ್ತದೆ.

Comments

Leave a Reply

Your email address will not be published. Required fields are marked *