ರಾಕಿಭಾಯ್ ಕೆಜಿಎಫ್ ಸ್ಟೈಲಲ್ಲಿ SDPI ವಾರ್ನಿಂಗ್- ವೈಲೆನ್ಸ್ ಡೈಲಾಗ್ ಹೇಳಿದ ರಿಯಾಜ್

ಮಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರದ ಡೈಲಾಗ್ ನಲ್ಲಿಯೇ ಸಂಘ ಪರಿವಾರಕ್ಕೆ ಇದೀಗ ಎಸ್‍ಡಿಪಿಐ (SDPI) ಎಚ್ಚರಿಕೆ ನೀಡಿದೆ.‌

ಮಂಗಳೂರಿನ ಕಣ್ಣೂರಿನಲ್ಲಿ ನಡೆದ ಎಸ್‍ಡಿಪಿಐ ಜನಾಧಿಕಾರ ಸಮಾವೇಶದಲ್ಲಿ ಮಾತನಾಡುತ್ತಾ ರಿಯಾಜ್ ಪರಂಗಿಪೇಟೆ ರಾಕಿಭಾಯ್ ಡೈಲಾಗ್‍ನಲ್ಲಿ ವಾರ್ನಿಂಗ್ ಕೊಟ್ಟಿದ್ದಾರೆ. ಈ ಮೂಲಕ ಅಬ್ದುಲ್ ಮಜೀದ್ ಬಳಿಕ ರಿಯಾಜ್ ಪರಂಗಿಪೇಟೆ ಕೂಡ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ವೈಲೆನ್ಸ್.. ವೈಲೆನ್ಸ್.. ವೈಲೆನ್ಸ್… ವಿ ಡೋಂಟ್ ಲೈಕ್ ಇಟ್. ವಿ ಅವಾಯ್ಡ್. ಬಟ್ ವೈಲೆನ್ಸ್ ಲೈಕ್ಸ್ ಅಸ್.. ವಿ ಕಾಂಟ್ ಅವಾಯ್ಡ್ ಅಂತ ಎಚ್ಚರಿಕೆ ನೀಡಿ ಇದೀಗ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  ಇದನ್ನೂ ಓದಿ: ಸೌಹಾರ್ದತೆಯಲ್ಲಿರೋ ಸಮಾಜವನ್ನು ಎಸ್‌ಡಿಪಿಐ ಒಡೆಯುತ್ತಿದೆ: ಚಕ್ರವರ್ತಿ ಸೂಲಿಬೆಲೆ

ಇದಕ್ಕೂ ಮೊದಲು ಮಾತನಾಡಿದ್ದ ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ವಾಜೀದ್, ಮಳಲಿ ಮಸೀದಿಯ ಒಂದು ಹಿಡಿ ಮರಳು ಕೊಡಲಾರೆವು. ಮಸೀದಿ ಬಿಟ್ಟುಕೊಡುತ್ತಾರೆ ಅನ್ನೋ ಕನಸು ಕಾಣಬೇಡಿ. ಈ ದೇಶ ನಮ್ಮದು, ಇದಕ್ಕಾಗಿ ರಕ್ತ ಹರಿಸಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಾಂಬೂಲ ಪ್ರಶ್ನೆ ಅಂತಾ ಬರೋರನ್ನು ಒದ್ದು ಒಳಗೆ ಹಾಕ್ಬೇಕು: ಅಬ್ದುಲ್ ವಾಜೀದ್ ವಿವಾದಾತ್ಮಕ ಹೇಳಿಕೆ

ತಾಂಬೂಲ ಪ್ರಶ್ನೆ ಎಂದು ಬರುವವರನ್ನು ಪೊಲೀಸರು ಒದ್ದು ಒಳಗೆ ಹಾಕಬೇಕು. ‘ಪೂಜಾ ಸ್ಥಳ ಕಾಯ್ದೆ 1991’ ಪ್ರಕಾರ ಮೂರು ವರ್ಷ ಜೈಲಿಗೆ ಹಾಕಬೇಕು. ಈ ಆಕ್ಟ್ ಅನ್ನು ಪೊಲೀಸರು ಓದಿಲ್ವೇ?. 2006ರಲ್ಲಿ ಸಂಡೂರಿನ ಸುಗ್ಗುಲಮ್ಮ ದೇವಾಲಯ ಒಡೆದು ಹಾಕಿದ್ದರಲ್ಲ. ಸಂಘಪರಿವಾರದ ಕಾರ್ಯಕರ್ತರು ತಾಕತ್ತಿದ್ದರೆ ಅದರ ಬಗ್ಗೆ ತಾಂಬೂಲ ಪ್ರಶ್ನೆ ಇಡಲಿ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಮಾಜಿ ಸಚಿವ ಜನಾರ್ದನ ರೆಡ್ಡಿ, ಸಚಿವ ಶ್ರೀರಾಮುಲು ಧ್ವಂಸಗೊಳಿಸಿದ್ದರಲ್ಲ. ತಾಕತ್ತಿದ್ದರೆ ಜನಾರ್ದನ ರೆಡ್ಡಿ ಮನೆಗೆ ಮಾರ್ಚ್ ಮಾಡಲಿ ಎಂದು ಸವಾಲೆಸೆದರು.

Comments

Leave a Reply

Your email address will not be published. Required fields are marked *