ರಾಮ್ ರಹೀಂ ರೇಪ್ ಆರೋಪ ಸಾಬೀತು- ಹಿಂಸಾಚಾರದಲ್ಲಿ 11 ಮಂದಿ ಸಾವು

– ರಾಷ್ಟ್ರೀಯ ಸುದ್ದಿವಾಹಿನಿಯ 3 ವಾಹನಗಳು ಧ್ವಂಸ

ಚಂಢೀಗಢ: ಗುರುಮೀತ್ ರಾಮ್ ರಹೀಂ ಬಾಬಾ ವಿರುದ್ಧದ ಅತ್ಯಾಚಾರ ಆರೋಪ ಸಾಬೀತಾದ ಬೆನ್ನಲ್ಲೇ ಹರಿಯಾಣದ ಪಂಚಕುಲಾದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಆರೋಪ ಸಾಬೀತಾಗುತ್ತಿದ್ದಂತೆಯೇ ಕೋರ್ಟ್ ಎದುರೇ ನೆರೆದಿದ್ದ ಬಾಬಾ ಭಕ್ತರು ರಾಷ್ಟ್ರೀಯ ಸುದ್ದಿವಾಹಿನಿಯ ಮೂರು ವಾಹನಗಳನ್ನು ಧ್ವಂಸ ಮಾಡಿದ್ದಾರೆ. ಅಲ್ಲದೇ 10ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿಯಿಟ್ಟಿದ್ದಾರೆ. ಘಟನೆಯಿಂದಾಗಿ 11 ಮಂದಿ ಬಬಾ ಭಕ್ತರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಘಟನೆಯಲ್ಲಿ 100ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಹರಿಯಾಣದ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಅಲ್ಲಿನ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟಾರ್, ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಇದ್ಯಾವುದಕ್ಕೂ ಜಗ್ಗದ ಬಾಬಾ ಭಕ್ತರು ಹಿಂಸಾಚಾರಕ್ಕೆ ತಿರುಗಿದ್ದಾರೆ. ಪೊಲೀಸರ ಮೇಲೆಯೇ ರಾಮ್ ರಹೀಂ ಭಕ್ತರಿಂದ ಕಲ್ಲು ತೂರಾಟ, ಹಲ್ಲೆ ನಡೆಯುತ್ತಿದೆ. ತಮ್ಮ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಗುಂಡು, ಜಲಫಿರಂಗಿ ಬಳಸಿದ್ರೂ ಬಗ್ಗದೇ ಭದ್ರತಾ ಪಡೆ ಮೇಲೂ ಕಲ್ಲು ತೂರಾಟ ನಡೆಸುತ್ತಿದ್ದಾರೆ.

ಸರ್ಕಾರಿ ಕಚೇರಿ, ಪೆಟ್ರೋಲ್ ಬಂಕ್, ವಿದ್ಯುತ್ ಸ್ಥಾವರಕ್ಕೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಮನೆಯೊಳಗೆ ನಿಲ್ಲಿಸಿದ್ದ ಕಾರ್ ಗಳ ಮೇಲೂ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಸದ್ಯ ಹರಿಯಾಣದ ಪರಿಸ್ಥಿತಿ ಬಿಗಡಾಯಿಸಿದೆ. ಇತ್ತ ನವದೆಹಲಿಯಲ್ಲಿ 7 ಕಡೆ ಕಲ್ಲು ತೂರಾಟ, ಬೆಂಕಿ ಹಚ್ಚಿದ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಸ್ವಯಂಘೋಷಿತ ಆಧ್ಯಾತ್ಮಕ ಗುರು ರಾಮ್ ರಹೀಮ್ 2002ರಲ್ಲಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿರುವುದು ಸಾಬೀತಾಗಿದ್ದು, ಸೋಮವಾರ ಶಿಕ್ಷೆ ಪ್ರಕಟವಾಗಲಿದೆ.

ಇದನ್ನೂ ಓದಿ: ಕೋರ್ಟ್‍ಗೆ 100ಕ್ಕೂ ಹೆಚ್ಚು ಕಾರ್‍ಗಳ ಭದ್ರತೆಯೊಂದಿಗೆ ಬಂದ ರಾಮ್ ರಹೀಂ

https://twitter.com/ANI/status/901051587749007360

 

 

Comments

Leave a Reply

Your email address will not be published. Required fields are marked *