ಬಾಂಗ್ಲಾದೇಶದಲ್ಲಿ ಹಿಂದೂಗಳ ದೇವಾಲಯದ ಮೇಲೆ ನಡೆದಿರೋ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಬೆಂಗಳೂರು: ಬಾಂಗ್ಲಾದೇಶದಲ್ಲಿ ನವರಾತ್ರಿ ಸಮಯದ ವೇಳೆ ದುರ್ಗ ಪೆಂಡಲ್‍ಗಳನ್ನ ಕೋಮುವಾದಿಗಳು ಹಾನಿ ಮಾಡಿದ್ದಾರೆ. ಅದು ಅಲ್ಲದೇ ಬಾಂಗ್ಲಾದಲ್ಲಿರೋ ಇಸ್ಕಾನ್ ದೇವಾಲಯದ ಮೇಲೆ ದಾಳಿ ಮಾಡಿ ಹಿಂದೂಗಳ ಮೇಲೆ ಹಲ್ಲೆ ಮಾಡಿದ್ದಾರೆ. ಅದು ಅಲ್ಲದೇ ಇನ್ನೂ ಕೆಲ ಹಿಂದೂಗಳು ನಾಪತ್ತೆಯಾಗಿರೋದನ್ನ ಖಂಡಿಸಿ ಬೃಹತ್ ಪ್ರತಿಭಟನೆಯನ್ನು ಹಿಂದೂ ಪರ ಸಂಘಟನೆಗಳು ನಾಗವಾರದಲ್ಲಿ ಮಾಡಿದ್ದಾರೆ.

ಭಜರಂಗದಳ ಮತ್ತು ವಿಶ್ವ ಹಿಂದ್ ಪರಿಷತ್ ಆಯೋಜನೆ ಮಾಡಿದ್ದ ಪ್ರತಿಭಟನೆಯಲ್ಲಿ ನೂರಾರು ಹಿಂದೂಗಳು ಭಾಗಿಯಾಗಿದ್ದರು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಈ ರೀತಿಯ ಘಟನೆಗಳು ನಡೆಯುತ್ತಲೇ ಇದೆ. ಇದರಿಂದಾಗಿ ಹಿಂದೂಗಳು ಅಲ್ಲಿ ಭಯದಲ್ಲಿ ಬದುಕುವಂತೆ ಆಗಿದೆ. ಅಲ್ಲಿನ ಸರ್ಕಾರವೇ ಇದಕ್ಕೆಲ್ಲ ಕಾರಣ ಎಂದು ಆರೋಪಿಸಿ ಈ ಪ್ರತಿಭಟನೆ ನಡೆಸಲಾಯಿತು. ಇದನ್ನೂ ಓದಿ: ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ – ಗೋ ಕಳ್ಳರು ಅರೆಸ್ಟ್

ಈ ಹಿಂದೆ ಶೇ.30ರಷ್ಟು ಇದ್ದ ಹಿಂದೂಗಳು, ಇಂದು ಶೇ.7ಕ್ಕೆ ಬಂದಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂ ಜನರು ಸ್ವಾತಂತ್ರ್ಯವಾಗಿ ಬದುಕಲು ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಾಂಗ್ಲಾದೇಶದ ಮತಾಂಧರ ಕೃತ್ಯವನ್ನು ವಿಶ್ವಸಂಸ್ಥೆ ಗಂಭೀರವಾಗಿ ಪರಿಗಣಿಸದೇ ಕೂತಿದೆ.

ಕೇಂದ್ರ ಸರ್ಕಾರವೂ ಸಹ ಬಾಂಗ್ಲಾದೇಶದ ಹಿಂದೂಗಳ ಪರವಾಗಿ ನಿಲ್ಲಬೇಕು. ಅಲ್ಲಿನ ಪರಿಸ್ಥಿತಿ ಬದಲಾಗಬೇಕು ಎಂದು ಒತ್ತಾಯ ಮಾಡಿ ಬಾಂಗ್ಲಾದೇಶದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ಮಾಡಿದ್ದಾರೆ. ಇದನ್ನೂ ಓದಿ: ಮಹಿಳೆಯರ ಸುರಕ್ಷಣೆಗಾಗಿ ಹೈದರಾಬಾದ್ ಪೊಲೀಸರ ವಿನೂತನ ಘಟಕ ಆರಂಭ

Comments

Leave a Reply

Your email address will not be published. Required fields are marked *