25.6 ಅಡಿ ಉದ್ದದ ಹೆಬ್ಬಾವನ್ನು ಕೊಂದು ಇಡೀ ಗ್ರಾಮದವರೇ ತಿಂದು ತೇಗಿದ್ರು!

ಜಕರ್ತಾ: 25. 6 ಅಡಿ ಉದ್ದದ ಸತ್ತ ಹೆಬ್ಬಾವೊಂದನ್ನು ಇಡೀ ಗ್ರಾಮದವರು ತಿಂದಿರುವ ಅಚ್ಚರಿಯ ಘಟನೆ ಇಂಡೋನೇಷ್ಯಾದ ರಿಯು ಪ್ರಾಂತ್ಯದಲ್ಲಿ ನಡೆದಿದೆ.

ಬುಧವಾರ 37 ವರ್ಷದ ಸೆಕ್ಯೂರಿಟಿ ಗಾರ್ಡ್ ಹೆಬ್ಬಾವಿನೊಂದಿಗೆ ಸೆಣಸಾಡಿ ಅದನ್ನು ಕೊಂದಿದ್ದರು. ನಂತರ ಗ್ರಾಮಸ್ಥರು ಸತ್ತು ಬಿದ್ದಿದ್ದ ಹೆಬ್ಬಾವನ್ನು ಬಟ್ಟೆ ಒಣಗಲು ಹಾಕಲು ಕಟ್ಟುವ ತಂತಿಯಂತೆ ಕಟ್ಟಿದ್ದರು.

ಅಷ್ಟೇ ಅಲ್ಲದೇ ಮಕ್ಕಳು ಹಾವಿನ ಬಾಲವನ್ನು ಹಿಡಿದು, ಅದರ ಮೇಲೆ ಕುಳಿತುಕೊಂಡು ಆಟವಾಡಿದ್ದರು. ಇದಾದ ಬಳಿಕ ಕೋಪಗೊಂಡಿದ್ದ ಗ್ರಾಮಸ್ಥರು ಹೆಬ್ಬಾವನ್ನು ಕತ್ತರಿಸಿ ಬಾಡೂಟ ಮಾಡಿ ತಿಂದು ತೇಗಿದ್ದಾರೆ.

ನಂಬಲಾಗದಷ್ಟು ದೊಡ್ಡದಾದ ಹಾವನ್ನು ಸೆಕ್ಯೂರಿಟಿ ಗಾರ್ಡ್ ನಬಾಬನ್ ಅವರು ಕೊಂದಿದ್ದರು. ಹಾವಿನ ಜೊತೆ ಸೆಣಸಾಡುವಾಗ ಅವರ ಕೈಗಳನ್ನು ಹಾವು ಕಚ್ಚಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ, ಗ್ರಾಮಸ್ಥರು ನಬಾಬನಿಗೆ ಕಚ್ಚಿದ್ದಕ್ಕೆ ಕೋಪಗೊಂಡು ಈ ರೀತಿ ಅಡುಗೆ ಮಾಡಿಕೊಂಡು ತಿಂದಿದ್ದಾರೆ. ನಬಾಬನು ಕೂಡ ಹಾವನ್ನು ಕೊಂದು ತಿನ್ನಬೇಕು ಎಂದು ಆಸೆ ಪಟ್ಟಿದ್ದರು. ಆದರೆ ಹೆಬ್ಬಾವಿನ ಜೊತೆಗಿನ ಕಾಳಗದಿಂದಾಗಿ ಆತ ಈಗ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *