ಛತ್ತೀಸ್‌ಗಢ ಗ್ರಾಮ ಈಗ ಯೂಟ್ಯೂಬ್ ಹಬ್ – ಬೀದಿ ಬೀದಿಯಲ್ಲೂ ಸಿಗ್ತಾರೆ ಕ್ರಿಯೇಟರ್‌ಗಳು

ರಾಯ್ಪುರ್: ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳಿಂದ ವಯೋವೃದ್ಧರು ಸಹ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ಇದೇ ರೀತಿ ಛತ್ತೀಸ್‌ಗಢದ ಗ್ರಾಮದ ಪ್ರತಿಯೊಬ್ಬರೂ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕ್ರಿಯೆಟಿವಿಟಿ ತೋರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಗ್ರಾಮವೇ ಯೂಟ್ಯೂಬ್ ಹಬ್ ಆಗಿ ಪ್ರಸಿದ್ಧಿ ಪಡೆದಿದೆ.

ಹೌದು.. ಛತ್ತೀಸ್‌ಗಢದ ರಾಯ್ಪುರದ ತುಸ್ಲಿ ಗ್ರಾಮಕ್ಕೆ ನೀವೇನಾದರೂ ಭೇಟಿ ನೀಡಿದರೆ ಅಲ್ಲಿ ಪ್ರತಿ ಬೀದಿಯಲ್ಲೂ ಕ್ರಿಯೇಟರ್‌ಗಳು ಸಿಗುತ್ತಾರೆ. ಅಷ್ಟೇ ಅಲ್ಲದೇ ಪ್ರತಿನಿತ್ಯ ಚಿತ್ರೀಕರಣ ನಡೆಯುತ್ತಲೇ ಇರುತ್ತದೆ. ಈ ಗ್ರಾಮದಲ್ಲಿ ಇದೀಗ ಸುಮಾರು 40 ಸ್ಥಳೀಯ ಯೂಟ್ಯೂಬರ್‌ಗಳಿದ್ದಾರೆ. ಇಲ್ಲಿಯ ಮೊದಲ ಯೂಟ್ಯೂಬರ್ ಆಗಿ ಎಸ್‌ಬಿಐನಲ್ಲಿ ಇಂಟರ್‌ನೆಟ್ ಇಂಜಿಯರ್ ಆಗಿದ್ದ ಜ್ಞಾನೇಂದ್ರ ಶುಕ್ಲಾ ಹಾಗೂ ಶಿಕ್ಷಕನಾಗಿದ್ದ ಜೈವರ್ಮಾ ಅವರು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಇಬ್ಬರು ಯೂಟ್ಯೂಬರ್‌ಗಳು 2011-12ರ ಸಮಯದಲ್ಲಿ ತಮ್ಮ ಕೆಲಸವನ್ನು ತ್ಯಜಿಸಿ ಯೂಟ್ಯೂಬ್ ಖಾತೆ ತೆರೆಯುತ್ತಾರೆ. ಅವರೇ ಹೇಳುವ ಪ್ರಕಾರ ಮೊದಮೊದಲು ಸಾರ್ವಜನಿಕ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲು ಅವರಿಗೆ ಮುಜುಗರವಾಗುತ್ತಿತ್ತಂತೆ. ಆದರೆ ಗ್ರಾಮದ ಯುವ ಜನರು ಪ್ರೋತ್ಸಾಹಿಸಿದ ಹಿನ್ನೆಲೆಯಲ್ಲಿ ಅವರಿಬ್ಬರು ಎಲ್ಲಾ ಹಿಂಜರಿಕೆ ಬಿಟ್ಟು ಎಲ್ಲೆಡೆ ಚಿತ್ರೀಕರಣ ಮಾಡಲು ಪ್ರಾರಂಭಿಸಿದರು. ಈವರೆಗೆ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಸುಮಾರು 250 ವೀಡಿಯೋಗಳನ್ನು ಅಪ್‌ಲೋಡ್ ಮಾಡಿದ್ದು, 1.15 ಲಕ್ಷ ಸಬ್‌‌ ಸ್ಕೃೈಬರ್‌ಗಳಿದ್ದಾರೆ. ಅಷ್ಟೇ ಅಲ್ಲದೇ ತಿಂಗಳಿಗೆ 30-40 ಸಾವಿರ ರೂ.ವನ್ನು ಸಂಪಾದಿಸುತ್ತಿದ್ದಾರೆ.

ಈ ರೀತಿಯಾಗಿ ತುಸ್ಲಿ ಗ್ರಾಮಕ್ಕೆ ಪ್ರವೇಶ ನೀಡಿದ ಯೂಟ್ಯೂಬ್ ಚಾನೆಲ್‌ಗಳು ಇಂದು ಯೂಟ್ಯೂಬ್ ಹಬ್ ಎಂದೇ ಬೀರುದು ಪಡೆದುಕೊಳ್ಳುವ ಮಟ್ಟದಲ್ಲಿ ಇಲ್ಲಿನ ಯೂಟ್ಯೂಬರ್‌ಗಳು ಹುಟ್ಟಿಕೊಂಡಿದ್ದಾರೆ. ಇಂದು 3,000 ಜನರಿರುವ ಈ ಗ್ರಾಮದಲ್ಲಿ ಕನಿಷ್ಠ 40 ಮಂದಿ ಯೂಟ್ಯೂಬರ್‌ಗಳಿದ್ದಾರೆ. ಈ ಎಲ್ಲಾ ಯೂಟ್ಯೂಬರ್‌ಗಳು ಶಿಕ್ಷಣ, ಮನೋರಂಜನೆಯ ವಿಷಯವನ್ನು ಇಟ್ಟುಕೊಂಡು ವೀಡಿಯೋವನ್ನು ರಚಿಸುತ್ತಾರೆ. ಇದನ್ನೂ ಓದಿ: ಮೋದಿಯ ಆಹಾರದ ಹಣವನ್ನು ಸರ್ಕಾರ ಭರಿಸುತ್ತಿಲ್ಲ – ಹಾಗಾದ್ರೆ ಯಾರು ಹಣ ನೀಡ್ತಾರೆ?

ಇನ್ನೊಬ್ಬ ಯೂಟ್ಯೂಬರ್ ಪಿಂಕಿ ಸಾಹು ಮಾತನಾಡಿ, ನಮ್ಮ ರಾಜ್ಯವು ನಕ್ಸಲ್ ಪೀಡಿತ ರಾಜ್ಯವಾಗಿದೆ. ಇದರಿಂದಾಗಿ ಮಹಿಳೆಯರು ಮನೆಯಿಂದ ಹೊರಬರಲು ಹೆದರುತ್ತಿದ್ದರು. ಆದರೆ ನಮ್ಮ ಗ್ರಾಮದಲ್ಲಿ ಯೂಟ್ಯೂಬ್ ಚಾನೆಲ್‌ಗಳನ್ನು ಪ್ರಾರಂಭಿಸಿದ್ದರಿಂದ ಮಹಿಳೆಯರು ಸ್ವತಂತ್ರವಾಗಿ ಓಡಾಡಲೂ ಸಹಾಯವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರು ನಗರದಲ್ಲಿ ಮುಂದಿನ 24 ಗಂಟೆಗಳಲ್ಲಿ ಸಾಧಾರಣ ಮಳೆ- ಹವಾಮಾನ ಇಲಾಖೆ ಮುನ್ಸೂಚನೆ

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *