ಜೂ.23ಕ್ಕೆ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಟ್ರೈಲರ್: ಕಾದಿದ್ದ ಅಭಿಮಾನಿಗಳಿಗೆ ಕಿಚ್ಚೋತ್ಸವ

ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಮುಂದಿನ ಅಪ್ ಡೇಟ್ ಗಾಗಿ ಕಿಚ್ಚನ ಅಭಿಮಾನಿಗಳು ಕಾಯುತ್ತಿದ್ದರು. ಅದರಲ್ಲೂ ಟ್ರೈಲರ್ ಯಾವಾಗ ಬರಲಿದೆ ಎನ್ನುವ ಪ್ರಶ್ನೆಗಳನ್ನು ಸಾಕಷ್ಟು ಬಾರಿ ನಿರ್ದೇಶಕ ಅನೂಪ್ ಭಂಡಾರಿ ಅವರಿಗೆ ಕೇಳಿದ್ದರು. ಇದೀಗ ಅಭಿಮಾನಿಗಳ ಕಾಯುವಿಕೆಗೆ ಉತ್ತರ ಸಿಕ್ಕಿದೆ. ಜೂ.23 ರಂದು ನಿರೀಕ್ಷಿತ ಟ್ರೈಲರ್ ರಿಲೀಸ್ ಮಾಡುವುದಾಗಿ ಕಿಚ್ಚ ಸುದೀಪ್ ಟ್ವಿಟ್ ಮಾಡಿದ್ದಾರೆ.

ನಿನ್ನೆ ಸಂಜೆ ಸೋಷಿಯಲ್ ಮೀಡಿಯಾ ಮೂಲಕ ‘ನಾಳೆ ಬಿಗ್ ಅನೌನ್ಸ್ ಮೆಂಟ್’ ಎಂದು ಬರೆದು, ಸಖತ್ ಕ್ಯೂರಿಯಾಸಿಟಿ ಮೂಡಿಸಿತ್ತು ಸಿನಿಮಾ ಟೀಮ್. ಆ ಅನೌನ್ಸ್ ಮೆಂಟ್ ಏನಿರಬಹುದು ಎಂಬ ಪ್ರಶ್ನೆ ಮೂಡಿತ್ತು. ಬಹುಶಃ ಮತ್ತೊಂದು ಹಾಡು ರಿಲೀಸ್ ಮಾಡಬಹುದಾ? ಅಥವಾ ಪ್ರಿ ರಿಲೀಸ್ ಇವೆಂಟ್ ಬಗ್ಗೆ ಏನಾದರೂ ಹೇಳಬಹುದು ಎಂದು ಅಂದಾಜಿಸಲಾಗಿತ್ತು. ಇದಕ್ಕೂ ದೊಡ್ಡ ಸರ್ ಪ್ರೈಸ್ ಮೂಲಕ ಅಭಿಮಾನಿಗಳಿಗೆ ಸಂಭ್ರಮ ತಂದಿದ್ದಾರೆ ನಿರ್ದೇಶಕರು. ಇದನ್ನೂ ಓದಿ: ಶಿವಣ್ಣ – ತಲೈವಾ ಸಿನಿಮಾಗೆ `ಜೈಲರ್’ ಟೈಟಲ್ ಫಿಕ್ಸ್

ಈಗಾಗಲೇ ಸಿನಿಮಾ ‘ರಾ ರಾ ರಕಮ್ಮ’ ಹಾಡು ವೈರಲ್ ಆಗಿದೆ. ಕೇವಲ ಸಾಮಾನ್ಯ ಸಿನಿ ಪ್ರೇಕ್ಷಕರು ಮಾತ್ರವಲ್ಲ, ವಿವಿಧ ಕ್ಷೇತ್ರಗಳ ಗಣ್ಯರು ಕೂಡ ಈ ಹಾಡಿಗೆ ಹೆಜ್ಜೆ ಹಾಕಿ, ಆ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ದೇಶ ವಿದೇಶಗಳಲ್ಲೂ ಈ ಹಾಡು ಕ್ರೇಜ್ ಕ್ರಿಯೇಟ್ ಮಾಡಿದೆ. ಟ್ರೈಲರ್ ನಲ್ಲಿ ಮತ್ತೇನು ಹೊಸದು ಕಾದಿದೆ ಎನ್ನುವ ನಿರೀಕ್ಷೆಯಂತೂ ಮೂಡಿದೆ.

Live Tv

Comments

Leave a Reply

Your email address will not be published. Required fields are marked *