ಜುಲೈ 28ರಂದು ಗುಮ್ಮನ ಕಥೆ – ಯುಗಾದಿ ದಿನ ಡಬಲ್ ಖುಷಿ ಕೊಟ್ಟ ‘ವಿಕ್ರಾಂತ್ ರೋಣ’ ಟೀಮ್

ಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಟೀಸರ್ ಇಂದು(ಶನಿವಾರ) ರಿಲೀಸ್ ಆಗಿದೆ. ಯುಗಾದಿ ದಿನ ಅಭಿಮಾನಿಗಳಿಗೆ ಚಿತ್ರತಂಡ ಡಬಲ್ ಖುಷಿ ಕೊಟ್ಟಿದ್ದು, ಅಭಿಮಾನಿಗಳು ಫುಲ್ ಆಗಿದ್ದಾರೆ. ‘ವಿಕ್ರಾಂತ್ ರೋಣ’ ಸಿನಿಮಾ ಬಗ್ಗೆ ಚಂದವನದಲ್ಲಿ ಮಾತ್ರವಲ್ಲ ಹಾಲಿವುಡ್‍ನಲ್ಲೂ ಹವಾ ಹೆಚ್ಚಾಗಿದೆ.

‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್ ಲಿಕ್‍ನನ್ನು ಕಿಚ್ಚ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವೇಳೆ, ಸುದೀರ್ಘ ಮತ್ತು ಸುಂದರ ಪ್ರಯಾಣದ ನಂತರ ‘ವಿಕ್ರಾಂತ್ ರೋಣ’ ಜುಲೈ 28, 2022 ರಂದು ಥಿಯೇಟರ್‍ಗಳಲ್ಲಿ ಬರಲಿದೆ ಎಂದು ಘೋಷಿಸಲು ಸಂತೋಷವಾಗಿದೆ. #VikrantRonaJuly28 ವಿಶ್ವದಾದ್ಯಂತ 3ಡಿ ಚಿತ್ರಮಂದಿರಗಳಲ್ಲಿ ಬರಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಏ. 2 ರಂದು ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ : ತೆಲುಗಿನಲ್ಲಿ ಚಿರಂಜೀವಿ, ಮಲಯಾಳಂನಲ್ಲಿ ಮೋಹನ್ ಲಾಲ್

‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್ ಆದ ಹತ್ತೇ ನಿಮಿಷದಲ್ಲಿ 1 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದುಕೊಂಡಿದೆ. ಟೀಸರ್ ರಿಲೀಸ್ ಮಾಡಿದ ವೇಳೆ ಚಿತ್ರತಂಡ ಸಿನಿಮಾ ಬಿಡುಗಡೆ ಮಾಡುವ ದಿನಾಂಕವನ್ನೂ ಫೋಷಣೆ ಮಾಡಿದ್ದು, ಅಭಿಮಾನಿಗಳಿಗೆ ಡಬಲ್ ಖುಷಿಯಾಗಿದೆ.

ಟೀಸರ್‌ನಲ್ಲಿ, ಪಟ್ಟೆ ಪಟ್ಟೆ ಹುಲಿ ಎಂದು ಮೊದಲು ಮಕ್ಕಳ ಧ್ವನಿಯಲ್ಲಿ ವೀಡಿಯೋ ಪ್ರಾರಂಭವಾಗುತ್ತೆ. ಅಜ್ಜಿಯ ಡೈರಿ ಕಥೆಯನ್ನು ಹೇಳುವ ಮೂಲಕ ಸಿನಿಮಾ ಓಪನ್ ಆಗುತ್ತೆ. ನಂತರ ಯಾರ ಕಥೆಯನ್ನು ಹೇಳುತ್ತಿದ್ದಿಯಾ ಎಂದು ಮಕ್ಕಳು ಕೇಳಿದಾಗ ಗುಮ್ಮನ ಕಥೆಯನ್ನು ಹೇಳುತ್ತಿದ್ದೇನೆ ಎಂದು ಟೀಸರ್‌ನಲ್ಲಿ ಹೇಳಲಾಗುತ್ತೆ. ಈ ಮೂಲಕ ಸಿನಿಮಾ ಡೆವಿಲ್ ರೀತಿ ಭಯಾನಂಕವಾಗಿ ಇರುತ್ತೆ ಎಂದು ಹೇಳಲು ಚಿತ್ರತಂಡ ಹೊರಟಿದೆ. ಇದನ್ನೂ ಓದಿ: ದೆಹಲಿಯಲ್ಲಿ ರಾಕಿಬಾಯ್ ನೋಡಲು ಮುಗಿಬಿದ್ದ ಅಭಿಮಾನಿಗಳು

ಟೀಸರ್‌ನಲ್ಲೇ ಸಖತ್ ಸ್ಪೆನ್ಸರ್ ಇದ್ದು, ಮೂವೀ ಬಗ್ಗೆ ಅಭಿಮಾನಿಗಳು ಕಾತುರವನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ಕಿಚ್ಚ ಬಾಸ್ ಎಂದು ಕಾಮೆಂಟ್ ಮಾಡುವ ಮೂಲಕ ಫುಲ್ ಖುಷ್ ಆಗಿದ್ದಾರೆ. ಕಿಚ್ಚ ಮತ್ತು ಅನೂಪ್‌ ಭಂಡಾರಿ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಮೂಡಿ ಬರುತ್ತಿರುವುದರಿಂದ ಅಭಿಮಾನಿಗಳು ಸಖತ್‌ ಉತ್ಸುಕರಾಗಿದ್ದಾರೆ.

ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ ಅನ್ನು ತೆಲುಗಿನಲ್ಲಿ ಚಿರಂಜೀವಿ, ಮಲಯಾಳಂನಲ್ಲಿ ಮೋಹನ್ ಲಾಲ್ , ಹಿಂದಿಯಲ್ಲಿ ಸಲ್ಮಾನ್ ಖಾನ್ ಟೀಸರ್‌ ರಿಲೀಸ್‌ ಮಾಡಿದ್ದಾರೆ.

 

Comments

Leave a Reply

Your email address will not be published. Required fields are marked *