ವಿರೋಧಿಗಳ ನಾಶಕ್ಕೆ ಭಕ್ತರ ಬೇಡಿಕೆ – ಯಲಗೂರು ದೇಗುಲದ ಹುಂಡಿಯಲ್ಲಿತ್ತು ವಿಚಿತ್ರ ಪತ್ರ

ವಿಜಯಪುರ: ದೇವರ ಹುಂಡಿಯಲ್ಲಿ ಹಣದ ಬದಲು ವಿರೋಧಿಗಳ ನಾಶಕ್ಕೆ ಭಕ್ತರು ಬೇಡಿಕೆ ಪತ್ರ ಹಾಕಿರುವ ವಿಚಿತ್ರ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರಿನಲ್ಲಿ ನಡೆದಿದೆ.

ಶ್ರೀಕ್ಷೇತ್ರ ಯಲಗೂರ ದೇವಸ್ಥಾನದ ಕಾಣಿಕೆ ಹುಂಡಿಗಳಲ್ಲಿ ಚಿತ್ರವಿಚಿತ್ರ ಬೇಡಿಕೆಗಳನ್ನು ಬರೆದು ಭಕ್ತರು ಹಾಕಿದ್ದಾರೆ. ಹುಂಡಿ ತೆಗೆದು ಎಣಿಕೆ ಮಾಡುವ ವೇಳೆ ಪತ್ರ ಕಂಡು ಕಂದಾಯ ಅಧಿಕಾರಿಗಳು ಹಾಗೂ ದೇವಸ್ಥಾನ ಕಮಿಟಿ ಬೆಚ್ಚಿಬಿದ್ದಿದೆ. ಕಂದಾಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಸೇರಿದಂತೆ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮತ್ತು ಸದಸ್ಯರಿಂದ ಎಣಿಕೆ ಕಾರ್ಯ ನಡೆದಿದೆ.

ಪತ್ರದಲ್ಲೇನಿದೆ..?
ನನಗೆ ಗಂಡು ಮಗು ಹುಟ್ಟಲಿ ತಂದೆ. ನಿನ್ನ ಸನ್ನಿಧಿಗೆ ಬಂದು ಜವಳದ ಕಾರ್ಯ ಮಾಡುವೆನು ಎಂದು ಭಕ್ತರೊಬ್ಬರು ಪತ್ರ ಬರೆದ್ರೆ, ನಮಗೆ ಕೆಲವರು ಶತ್ರುಗಳಾಗಿ ಕಾಡುತ್ತಿದ್ದಾರೆ ಅವರಿಗೆ ಕಣಿಯಾಗಿ ಕಾಡಬೇಕಿದೆ. ಅವರು ನಮ್ಮ ತಂಟೆಗೆ ಬರಬಾರದು. ನಮ್ಮ ಕಟ್ಟೆ ಮೇಲೆ ಸಾಮಾನುಗಳನ್ನು ಇಡಬಾರದು. ಹನುಮಂತೇಶ ನೀನು ಅವರಿಗೆ ಕಾಡಬೇಕು ಬೇಡಿಕೆಯಿಟ್ಟು ಪತ್ರದಲ್ಲಿ ನಾಲ್ವರ ಹೆಸರನ್ನು ಉಲ್ಲೇಖಿಸಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *