– ಕೆ.ಎಸ್.ಭಗವಾನ್ ವಿರುದ್ಧ ಕಿಡಿಕಾರಿದ ಬಾಬಾ ರಾಮದೇವ್
ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣಕ್ಕಿಂತ ಕಪ್ಪು ಮನಸ್ಸುಗಳ ವಿರುದ್ಧ ಹೋರಾಟ ನಡೆಸಿದ್ದಾರೆ ಎಂದು ಬಾಬಾ ರಾಮದೇವ್ ಹೇಳಿದರು.
ನಗರದ ಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಬಾಬಾ ರಾಮದೇವ್, ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರುವ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟಿದ್ದೇವೆ ಎಂದ ಅವರು ದೇಶದಲ್ಲಿ ಬಡತನ, ಆಹಾರ ಪದಾರ್ಥಗಳ ಬೆಲೆಯು ಏರಿಕೆಯಾಗುತ್ತಿದೆ ಎಂದರು.

ಪ್ರೊ. ಕೆ.ಎಸ್.ಭಗವಾನ್ ವಿರುದ್ಧ ಕಿಡಿಕಾರಿದ ಬಾಬಾ ರಾಮದೇವ್, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಒಂದು ಧರ್ಮದ ಬಗ್ಗೆ ಮಾತನಾಡುವುದು ಸರಿಯಲ್ಲ. ಹೀಗೆ ಮಾತನಾಡುವವರು ಇಸ್ಲಾಂ ಧರ್ಮ, ಮೊಹಮ್ಮದ್ ಪೈಗಂಬರ್, ಖುರಾನ್, ಬೈಬಲ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಾರಾ? ಒಂದು ವೇಳೆ ದಲಿತ ಚಿಂತಕನೇ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ವಿರುದ್ಧ ಮಾತನಾಡಿದರೆ ಆತನ ಪರಿಸ್ಥಿತಿ ಹೇಗಿರುತ್ತದೆ ಎಂದು ಪ್ರಶ್ನಿಸಿದರು.
ಶ್ರೀರಾಮ ದಲಿತ, ಆದಿವಾಸಿ, ವನವಾಸಿ, ಬ್ರಾಹ್ಮಣ ಇದ್ಯಾವುದೂ ನಮಗೆ ಮುಖ್ಯವಲ್ಲ. ಆತ ನಮ್ಮ ಪೂರ್ವಜ ಎನ್ನುವುದಷ್ಟೇ ಮುಖ್ಯ. ನಾವು ರಾಮನನ್ನು ಪೂಜಿಸುತ್ತೇವೆ, ಗೌರವಿಸುತ್ತೇವೆ ಎಂದ ಅವರು, ವಾಲ್ಮೀಕಿ ಬರೆದ ರಾಮಾಯಣದಲ್ಲಿ ರಾಮನ ಬಗ್ಗೆ ಎಲ್ಲಿಯೂ ಕೆಟ್ಟದಾಗಿ ಪ್ರಸ್ತಾಪ ಮಾಡಿಲ್ಲ. ನಾನು ಕೂಡ ರಾಮಾಯಣ ಓದಿದ್ದೇನೆ. ವಾಲ್ಮೀಕಿ ರಾಮನಾಯಣವನ್ನು ಆಧಾರವಾಗಿ ಇಟ್ಟುಕೊಂಡು ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಭಗವಾನ್ ವಿರುದ್ಧ ಗುಡುಗಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply