ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಯ್ತು ‘ವಿಜಯಾನಂದ’ ಟ್ರೈಲರ್

ಸಾರಿಗೆ ಕ್ಷೇತ್ರ, ಪತ್ರಿಕೋದ್ಯಮ, ಮಾಧ್ಯಮ ಹಾಗು ಹಲವಾರು ವಿಭಾಗಗಳಲ್ಲಿ ಪರಿಣತಿ ಹೊಂದಿರುವ ಆನಂದ ಸಂಕೇಶ್ವರ ಇದೀಗ ವಿ ಆರ್ ಎಲ್ ಮೀಡಿಯಾ ಸಂಸ್ಥೆಯ ಅಡಿಯಲ್ಲಿ “ವಿ ಆರ್ ಎಲ್ ಫಿಲಂ ಪ್ರೊಡಕ್ಷನ್ಸ್” ಹೆಸರಿನ ಸ್ವಂತ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಾಣವಾಗಿರುವ ವಿಜಯಾನಂದ ಸಿನಿಮಾದ ಟ್ರೈಲರ್ ನಿನ್ನೆ ರಿಲೀಸ್ ಆಗಿದೆ. ಇದನ್ನೂ ಓದಿ:ಅಫೇರ್ ಆರೋಪ ಬೆನ್ನಲ್ಲೇ ಧಿಡೀರ್ ಸಂಭಾವನೆ ಹೆಚ್ಚಿಸಿಕೊಂಡ ಪವಿತ್ರಾ ಲೋಕೇಶ್

ವಿಜಯ ಸಂಕೇಶ್ವರರ ಜೀವನಾಧಾರಿತ ಚಿತ್ರ ಇದಾಗಿದ್ದು, 1976 ರಲ್ಲಿ ಒಂದೇ ಟ್ರಕ್‌ನೊಂದಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿ ಇಂದು ಭಾರತದ ಅತಿದೊಡ್ಡ ಲಾಜಿಸ್ಟಿಕ್ಸ್ ಕಂಪನಿಯ ಮಾಲೀಕರಾಗಿರುವ ವಿಜಯ ಸಂಕೇಶ್ವರ ಅವರ ಅದ್ಭುತ ಮತ್ತು ರೋಮಾಂಚನಕಾರಿ ಕಥೆಯಾಗಿದೆ. ಈ ಕಥೆಯು ವಿಜಯ ಸಂಕೇಶ್ವರ ಮತ್ತು ಅವರ ಮಗ ಆನಂದ ಸಂಕೇಶ್ವರ ಜೊತೆಗೆ ತಮ್ಮ ಪತ್ರಿಕೆ ಮತ್ತು ಮಾಧ್ಯಮ ಕ್ಷೇತ್ರಕ್ಕೆ ಹೆಸರುವಾಸಿಯಾದ ಯಶಸ್ಸಿನ ಪ್ರಯಾಣವನ್ನು ಒಳಗೊಂಡಿದೆ.

ಈ ಚಿತ್ರದ ಮೊದಲ ಅಧಿಕೃತ ಟೀಸರನ್ನು ಚಿತ್ರ ತಂಡವು ನಿನ್ನೆಯಷ್ಟೇ ಬಿಡುಗಡೆ ಮಾಡಿದ್ದು, ಈ ಚಿತ್ರವು ಕನ್ನಡ ಚಲನಚಿತ್ರೋದ್ಯಮದ ಅಫೀಷಿಯಲ್ ಮತ್ತು ಕಮರ್ಷಿಯಲ್ ಜೀವನಚರಿತ್ರೆಯಾಗಲಿದೆ. ಅಲ್ಲದೇ, ದಕ್ಷಿಣ ಭಾರತದ ಭಾಷೆಗಳಾದ ತಮಿಳು, ತೆಲುಗು ಮತ್ತು ಮಳಯಾಳಂ ಭಾಷೆಗಳಿಗೆ ಡಬ್ ಆಗಲಿದೆ. ಹಾಗಾಗಿ ಸಿನಿಮಾದ ಟ್ರೈಲರ್ ಅಷ್ಟೂ ಭಾಷೆಯಲ್ಲಿ ಬಿಡುಗಡೆ ಆಗಿದೆ.

ಈ ಹಿಂದೆ “ಟ್ರಂಕ್” ಎಂಬ ಹಾರರ್ ಥ್ರಿಲ್ಲರ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಮಹಿಳಾ ನಿರ್ದೇಶಕಿ ರಿಷಿಕಾ ಶರ್ಮಾರವರು ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. “ವಿಜಯಾನಂದ” ಸಿನಿಮಾಗೆ ವಿಜಯ ಸಂಕೇಶ್ವರ ಅವರ ಪಾತ್ರಕ್ಕೆ “ಟ್ರಂಕ್” ಚಿತ್ರದಲ್ಲಿ ನಾಯಕ ನಟರಾಗಿದ್ದ ನಿಹಾಲ್ ಬಣ್ಣ ಹಚ್ಚಿದ್ದಾರೆ.  ಪ್ರಮುಖ ಪಾತ್ರಗಳಲ್ಲಿ ಅನಂತನಾಗ್, ವಿನಯಾ ಪ್ರಸಾದ್, ವಿ ರವಿಚಂದ್ರನ್, ಪ್ರಕಾಶ್ ಬೆಳವಾಡಿ, ಅನೀಶ್ ಕುರುವಿಲ್ಲಾ, ಸಿರಿ ಪ್ರಹ್ಲಾದ್ ಮತ್ತು ಭರತ್ ಬೋಪಣ್ಣ, ಶರಣ್ಯ ಕಾಣಿಸಿಕೊಳ್ಳುತ್ತಿದ್ದಾರೆ.  ದಕ್ಷಿಣ ಭಾರತೀಯ ಚಿತ್ರ ರಂಗದ ಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್ (ಬೆಂಗಳೂರು ಡೇಸ್, ಉಸ್ತಾದ್ ಹೋಟೆಲ್ , ಗೀತ ಗೋವಿಂದಂ, ಮೋಸ್ಟ ಎಲಿಜಿಬಲ್ ಬ್ಯಾಚುಲರ್ ) “ವಿಜಯಾನಂದ” ಚಿತ್ರಕ್ಕೆ ಹಿನ್ನಲೆ ಸಂಗೀತ ಮತ್ತು ಸಂಗೀತ ನಿರ್ದೇಶಕರಾಗಿ ಕೈ ಜೋಡಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *