ಯಶ್ ಹೊಸ ಚಿತ್ರದ ಬಗ್ಗೆ ಸುಳಿವು ಕೊಟ್ಟ ಹೊಂಬಾಳೆ ಫಿಲ್ಮ್ಸ್ ವಿಜಯ್ ಕಿರಗಂದೂರ್

ಕೆಜಿಎಫ್ 3 ಸಿನಿಮಾದ ಬಗ್ಗೆ ಕಳೆದ ಒಂದೂವರೆ ತಿಂಗಳಿಂದ ಭಾರೀ ಸುದ್ದಿಯಾಗುತ್ತಿದೆ. ಈ ಸಿನಿಮಾದ ಮುಹೂರ್ತ ಯಾವಾಗ? ಯಾರೆಲ್ಲ ಈ ಚಿತ್ರದಲ್ಲಿ ಇರಲಿದ್ದಾರೆ? ಎಷ್ಟೆಲ್ಲ ಭಾಷೆಗಳಲ್ಲಿ ಮೂಡಿ ಬರಲಿದೆ? ಬಜೆಟ್ ಎಷ್ಟು? ಹೀಗೆ ನಾನಾ ರೀತಿಯ ಚರ್ಚೆಗಳು ನಡೆದಿವೆ. ಅಲ್ಲದೇ, ರಾಣಾ ದುಗ್ಗುಬಾಟಿ, ಹೃತಿಕ್ ರೋಷನ್ ಸೇರಿದಂತೆ ಹಲವು ಹೆಸರುಗಳು ಕೂಡ ತಾರಾಗಣದಲ್ಲಿ ಕೇಳಿ ಬಂದಿತ್ತು. ಈ ವರ್ಷವೇ ಚಿತ್ರಕ್ಕೆ ಮುಹೂರ್ತ ಎಂದು ಸುದ್ದಿಯಾಗಿತ್ತು. ಇದನ್ನೂ ಓದಿ : 17 ವರ್ಷ ಲವ್, 2 ಮಕ್ಕಳಾದ ನಂತರ ಮದುವೆಯಾದ ನಿರ್ದೇಶಕ ಹನ್ಸಲ್ ಮೆಹ್ತಾ, ಸಫೀನಾ ಹುಸೇನ್

ಹೊಂಬಾಳೆ ಫಿಲ್ಮ್ಸ್ ಮಾಲೀಕ, ನಿರ್ಮಾಪಕ ವಿಜಯ್ ಕಿರಂಗದೂರ್ ಅವರೇ ಮಾಧ್ಯಮಗಳ ಜೊತೆ ಮಾತನಾಡಿ, ಅತೀ ಶೀಘ್ರದಲ್ಲೇ ಕೆಜಿಎಫ್ 3 ಸಿನಿಮಾ ಶುರುವಾಗಲಿದೆ ಎಂದು ಹೇಳಿರುವ ಸುದ್ದಿಯೂ ಕೂಡ ಪ್ರಕಟವಾಯಿತು. ಕೆಜಿಎಫ್ 3 ಸಿನಿಮಾದಲ್ಲಿ ಯಶ್ ಇರುತ್ತಾರಾ? ಅಥವಾ ಅವರ ಪಾತ್ರ ಇರುತ್ತಾ ಎನ್ನುವಲ್ಲಿಗೆ ಸುದ್ದಿ ಆಯಿತು. ಆನಂತರ ಆದ ಲೆಕ್ಕಾಚಾರವೇ ಬೇರೆ. ಈ ಎಲ್ಲದರ ಕುರಿತು ವಿಜಯ ಕಿರಗಂದೂರು ಮತ್ತೆ ಮಾತನಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ : ಧನುಶ್ ನಟನೆಯ ಹಾಲಿವುಡ್ ಸಿನಿಮಾದ ಟ್ರೇಲರ್ ರಿಲೀಸ್ : ಎಲ್ಲಿದ್ದಾರೆ ಧನುಶ್?

ಕೆಜಿಎಫ್ 3 ಸಿನಿಮಾ ಸದ್ಯಕ್ಕಂತೂ ಇಲ್ಲವೆಂದು ವಿಜಯ್ ಕಿರಂಗದೂರು ಹೇಳಿದ್ದಾರೆ ಎನ್ನುವ ಸುದ್ದಿಯಿದೆ. ಅವರು ಸಲಾರ್ ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ, ಸಲಾರ್ ಚಿತ್ರದಲ್ಲಿ ಪ್ರಶಾಂತ್ ನೀಲ್ ಕೂಡ ತೊಡಗಿಕೊಂಡಿದ್ದರಿಂದ ಮತ್ತು ಯಶ್ ಕೂಡ ತಮ್ಮ ಹೊಸ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದರಿಂದ ಸದ್ಯಕ್ಕಂತೂ ಕೆಜಿಎಫ್ 3 ಸಿನಿಮಾ ಆಗುವುದಿಲ್ಲ ಎಂದಿದ್ದಾರೆ. ಈ ಮೂಲಕ ಯಶ್ ಅವರು ಹೊಸ ಸಿನಿಮಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ. ಇದನ್ನೂ ಓದಿ : ಕನ್ನಡದ ಖ್ಯಾತ ನಟಿಯೊಬ್ಬಳು ನಿರ್ದೇಶಕನನ್ನೇ ಮಂಚಕ್ಕೆ ಕರೆದ ಕಥೆಗೆ ಮೆಗಾ ಟ್ವಿಸ್ಟ್

ಯಶ್ ನಟನೆಯ ಹೊಸ ಸಿನಿಮಾವನ್ನು ಯಾರು ಮಾಡುತ್ತಾರೆ? ನಿರ್ಮಾಪಕರು ಯಾರು? ಹೀಗೆ ಇತ್ಯಾದಿ ವಿಷಯಗಳನ್ನು ಹೇಳದೇ ಇದ್ದರೂ, ಯಶ್ ಹೊಸ ಸಿನಿಮಾ ಸದ್ಯದಲ್ಲೇ ಮುಹೂರ್ತ ಕಾಣಲಿದೆ ಎನ್ನುವ ಸುಳಿವಂತೂ ವಿಜಯ್ ಅವರು ನೀಡಿದ್ದಾರೆ. ಹೀಗಾಗಿ ಯಶ್ ಹೊಸ ಸಿನಿಮಾ ಸದ್ಯದಲ್ಲೇ ಪಕ್ಕಾ ಎನ್ನುವುದು ಖುಷಿ ವಿಚಾರ.

Comments

Leave a Reply

Your email address will not be published. Required fields are marked *