ವಿಜಯ್ ದೇವರಕೊಂಡ ಹೊಸ ಸಿನಿಮಾಗೆ ಶ್ರೀಲೀಲಾ ಹೀರೋಯಿನ್

ತೆಲುಗು ಚಿತ್ರರಂಗದಲ್ಲಿ (Tollywood) ಮತ್ತೊಬ್ಬ ಕನ್ನಡತಿ ಹವಾ ಶುರುವಾಗಿದೆ. ರಶ್ಮಿಕಾ (Rashmika Mandanna) ಬಳಿಕ ನಟಿ ಶ್ರೀಲೀಲಾಗೆ ಭರ್ಜರಿ ಬೇಡಿಕೆಯಿದೆ. ವಿಜಯ್ ದೇವರಕೊಂಡ (Vijaydevarakonda) ಜೊತೆ ರೊಮ್ಯಾನ್ಸ್ ಮಾಡಲು ಶ್ರೀಲೀಲಾ ಸಜ್ಜಾಗಿದ್ದಾರೆ. ಇದನ್ನೂ ಓದಿ:‘ತಂಗಲಾನ್’ ರಿಹರ್ಸಲ್ ವೇಳೆ ವಿಕ್ರಮ್‌ಗೆ ಗಾಯ- ಶೂಟಿಂಗ್ ಸ್ಥಗಿತ

‘ಲೈಗರ್’ ಸೋಲಿನ ನಂತರ ‘ಜೆರ್ಸಿ’ ನಿರ್ದೇಶಕ ಗೌತಮ್ ಡ್ಯಾಶಿಂಗ್ ಹೀರೋ ವಿಜಯ್ ದೇವರಕೊಂಡ ಹೊಸ ಸಿನಿಮಾ ಮಾಡ್ತಿದ್ದಾರೆ. ವಿಭಿನ್ನ ಪಾತ್ರದ ಮೂಲಕ ಮನಗೆಲ್ಲು ಸಜ್ಜಾಗಿದ್ದಾರೆ. ವಿಜಯ್- ಶ್ರೀಲೀಲಾ (Sreeleela) ನಟನೆಯ ಹೊಸ ಸಿನಿಮಾದ ಮುಹೂರ್ತ ಪೂಜೆಯನ್ನ ಮೇ ೩ರಂದು ಹೈದರಾಬಾದ್ ಸರಳವಾಗಿ ನಡೆದಿದೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವಿಜಯ್ ದೇವರಕೊಂಡ ನಟನೆಯ 12ನೇ ಸಿನಿಮಾದ ಪೂಜೆ ಕಾರ್ಯವನ್ನ ಸರಳವಾಗಿ ಮಾಡಲಾಯಿತು. ವಿಜಯ್, ಶ್ರೀಲೀಲಾ, ನಿರ್ದೇಶಕ ಗೌತಮ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇನ್ನೂ ಪೆಳ್ಳಿ ಸಂದಡಿ, ‘ಧಮಾಕ’ (Dhamaka) ಸಕ್ಸಸ್ ನಂತರ ಶ್ರೀಲೀಲಾ ಕೈಯಲ್ಲಿ 7ಕ್ಕೂ ಹೆಚ್ಚು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ದೇವರಕೊಂಡ ನಟನೆಯ ಹೊಸ ಸಿನಿಮಾ ಇದೇ ಜೂನ್‌ನಿಂದ ಶೂಟಿಂಗ್‌ ಶುರುವಾಗಲಿದೆ. ರಶ್ಮಿಕಾ ಬಳಿಕ ಸಖತ್ ಬೇಡಿಕೆಯಲ್ಲಿರುವ ಕನ್ನಡತಿ ಶ್ರೀಲೀಲಾ- ವಿಜಯ್ ದೇವರಕೊಂಡ ಜೋಡಿ ತೆರೆಯ ಮೇಲೆ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತೆ ಎಂಬುದನ್ನ ಕಾದುನೋಡಬೇಕಿದೆ.