ಬೆಂಗ್ಳೂರಲ್ಲಿ ಪಬ್ಲಿಕ್ ಟಿವಿ ‘ವಿದ್ಯಾಪೀಠ’ಕ್ಕೆ ಚಾಲನೆ

ಬೆಂಗಳೂರು: ಪಬ್ಲಿಕ್ ಟಿವಿ ಆಯೋಜಿಸಿರುವ ವಿದ್ಯಾಪೀಠ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಉದ್ಘಾಟಿಸಿದ್ದಾರೆ.

ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ನಂತರ ಮುಂದೇನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ನಿಮಗೆ ಲಭ್ಯವಾಗಲಿದೆ. ಯಾವ ಕಾಲೇಜಿನಲ್ಲಿ ಯಾವೆಲ್ಲ ಕೋರ್ಸ್ ಗಳಿವೆ? ಈಗಿನ ಎಜ್ಯುಕೇಶನ್ ಟ್ರೆಂಡ್ ಏನು? ವಿವಿಧ ಕೋರ್ಸ್ ಬಗ್ಗೆ ಅತಿಥಿಗಳ ಉಪನ್ಯಾಸ ಅಲ್ಲದೇ ಶಿಕ್ಷಣ ಸಂಸ್ಥೆಗಳ ಮಾಹಿತಿ ಕೇಂದ್ರಗಳು ಇಲ್ಲಿ ಇರಲಿವೆ. ಹೀಗಾಗಿ ನಿಮಗೆ ಯಾವುದೇ ಕೋರ್ಸ್ ಬಗ್ಗೆ ಸಂದೇಹ ಇದ್ದರೆ ಅಲ್ಲೇ ಪರಿಹಾರ ಮಾಡಿಕೊಳ್ಳಬಹುದು.

ಅನಿಮೇಶನ್,ಮೀಡಿಯಾ, ಗೇಮಿಂಗ್, ಕೋಚಿಂಗ್ ಇನ್ಸಿಟ್ಯೂಷನ್, ಕಾಮರ್ಸ್ ಮತ್ತು ಬ್ಯಾಂಕಿಂಗ್, ಎಂಜಿನಿಯರಿಂಗ್, ಮೆಡಿಕಲ್, ಫ್ಯಾಶನ್ ಮತ್ತು ಹೋಟೆಲ್ ಮ್ಯಾನೇಜ್‍ಮೆಂಟ್, ಕಾನೂನು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು, ಮಾಸ್ ಕಮ್ಯೂನಿಕೇಶನ್, ಎಂಬಿಎ ಅಷ್ಟೇ ಅಲ್ಲದೆ ವಿದೇಶಿ ಶಿಕ್ಷಣ ಸಂಸ್ಥೆಗಳ ಬಗ್ಗೆಯೂ ಇಲ್ಲಿ ಮಾಹಿತಿ ಸಿಗಲಿದೆ. ಕರ್ನಾಟಕ ಸಿಇಟಿ, ನೀಟ್ ಪರೀಕ್ಷೆ, ಕಾಮೆಡ್ ಕೆ ಕೌನ್ಸಿಲಿಂಗ್ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ. ಅಷ್ಟೇ ಅಲ್ಲದೇ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಇದರಲ್ಲಿ ಭಾಗವವಹಿಸುತ್ತಿದ್ದು, ವಿವಿಧ ಸ್ಕಾಲರ್ ಶಿಪ್ ಬಗ್ಗೆಯೂ ಮಾಹಿತಿ ಸಿಗಲಿದೆ.

ಗಾರ್ಡನ್ ಸಿಟಿ ಯುನಿವರ್ಸಿಟಿ ಕುಲಪತಿ ಡಾ.ವಿ.ಜಿಜೋಸೆಫ್, ಕೇಂಬ್ರಿಡ್ಜ್ ಇನ್ಸ್‍ಟಿಟ್ಯೂಟ್ ಟೆಕ್ನಾಲಜಿ ಚೇರ್ಮನ್ ಡಿ.ಕೆ.ಮೋಹನ್, ಸಿಎಂಆರ್ ಯೂನಿವರ್ಸಿಟಿ ಶಿವಕುಮಾರ್, ಮನೋಹರ್ ನಾಯ್ಡು, ಡಾ.ರಮೇಶ್, ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ, ಪಬ್ಲಿಕ್ ಟಿವಿ ಸಿಒಒ ಸಿ.ಕೆ.ಹರೀಶ್, ಪಬ್ಲಿಕ್ ಟಿವಿ ಸಿಇಒ ಅರುಣ್ ಉಪಸ್ಥಿತರಿದ್ದಾರೆ. ಬೆಳಗ್ಗೆ 9.30ರಿಂದ ಆರಂಭಗೊಂಡು ಸಂಜೆ 6 ಗಂಟೆಯವರೆಗೂ ಈ ಕಾರ್ಯಕ್ರಮ ನಡೆಯಲಿದೆ.

Comments

Leave a Reply

Your email address will not be published. Required fields are marked *