ಕೋಲಾರದಲ್ಲಿ ಸಿದ್ದರಾಮಯ್ಯರನ್ನ ಹಣಿಯಲು ರಣತಂತ್ರ- ದಲಿತರಿಂದ ಕರಪತ್ರ ಹಂಚಿ ಅಭಿಯಾನ

ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ರಾಜ್ಯದ ಮಾಸ್ ಲೀಡರ್. ಅದರಲ್ಲೂ ಎಲ್ಲಾ ಜಾತಿ ಸಮುದಾಯಗಳು ಒಪ್ಪುವ ನಾಯಕ. ಆದರೆ ಕೋಲಾರದಲ್ಲಿ ಸಿದ್ದರಾಮಯ್ಯ ವಿರುದ್ಧ ದಲಿತ ವಿರೋಧಿ ಅನ್ನೋ ಅಭಿಯಾನವೊಂದು ಆರಂಭವಾಗಿದೆ.

ಸಿದ್ದರಾಮಯ್ಯ ಜಾತಿ ಸಮೀಕರಣ, ಸಮುದಾಯಗಳನ್ನ ನೆಚ್ಚಿಕೊಂಡು ಅಳೆದು ತೂಗಿ ಕೋಲಾರ ಕ್ಷೇತ್ರ (Kolar Constituency) ವನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಈ ಮಧ್ಯೆ ಸಿದ್ದರಾಮಯ್ಯ ವಿರುದ್ಧ ಹಿಂದೂ ವಿರೋಧಿ ಅನ್ನೋ ಅಪಪ್ರಚಾರವನ್ನ ವಿರೋಧ ಪಕ್ಷಗಳು ಮಾಡುತ್ತಿದ್ದವು.

ಆದರೆ ಇತ್ತೀಚೆಗೆ ಕೋಲಾರದಲ್ಲಿ ದಲಿತ ವಿರೋಧಿ ಅನ್ನೋ ಅಭಿಯಾನ ಆರಂಭವಾಗಿದೆ. ಮುಂದೊಂದಿನ ದಲಿತ ಸಿಎಂ ಕೂಗು ಹೆಚ್ಚಾಗಿ, ಸಿಎಂ ಸ್ಥಾನ ತಪ್ಪುತ್ತದೆ ಅನ್ನೋ ಕಾರಣಕ್ಕೆ ದಲಿತ ನಾಯಕರಾದ ಜಿ.ಪರಮೇಶ್ವರ್ ಹಾಗು ಮಲ್ಲಿಕಾರ್ಜುನ ಖರ್ಗೆ ಅವರನ್ನ ಮುಗಿಸಿದ್ರು. 2019ರ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಚಾಮರಾಜನಗರದಲ್ಲಿ ಧೃವ ನಾರಾಯಣ, 2013ರ ಪರಮೇಶ್ವರ್, ಶ್ರೀನಿವಾಸ್ ಪ್ರಸಾದ್ ಅವರನ್ನ ಮುಗಿಸಿದ್ರು. ಅಲ್ಲದೆ ಈ ಮಧ್ಯೆ ಕೋಲಾರದಲ್ಲಿ ದಲಿತ ನಾಯಕ ಮುನಿಯಪ್ಪ ಅವರನ್ನ ಸೋಲಿಸಿದ್ದು ಸಿದ್ದರಾಮಯ್ಯ, ಹಾಗಾಗಿ ಸಿದ್ದು ದಲಿತ ವಿರೋಧಿ, ಅಹಿಂದಾ ವಿರೋಧಿ ಎಂದೆಲ್ಲಾ ಸಾರಲಾಗ್ತಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಒಬ್ಬ ದಲಿತ ವಿರೋಧಿ, ಹಿಂದೂ ವಿರೋಧಿ ಅನ್ನೋದನ್ನೆ ಬಂಡವಾಳ ಮಾಡಿಕೊಂಡ ಕೆಲವರು ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ದಲಿತ ನಾಯಕರನ್ನ ಸೋಲಿಸಿದ ಸಿದ್ದರಾಮಯ್ಯ ಅವರನ್ನ ಸೋಲಿಸಿ ಎಂಬ ಕರಪತ್ರಗಳನ್ನ ಹಂಚಿಕೆ ಮಾಡುವ ಮೂಲಕ ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ; ಬಿಜೆಪಿಗೆ ಸೇರ್ತಾರಾ ಸುಮಲತಾ ಅಂಬರೀಶ್?

ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ಬೆನ್ನಲ್ಲೆ ಅವರ ವಿರುದ್ಧ ಒಂದಿಲ್ಲೊಂದು ಆರೋಪಗಳು ಕೇಳಿ ಬರುತ್ತಲೇ ಇವೆ. ಆ ಮೂಲಕ ಸಿದ್ದರಾಮಯ್ಯ ಅವರನ್ನ ಕಟ್ಟಿ ಹಾಕಲು ವಿರೋಧಿಗಳು ದಲಿತ ಸಿಎಂ ಅಭಿಯಾನ ಆರಂಭಿಸಿದ್ದು, ಮುಂದೆ ಹಿಂದೂ ವಿರೋಧಿ ಸೇರಿದಂತೆ ಹಲವು ಆರೋಪಗಳನ್ನ ಹೊರಿಸುವ ಸಾಧ್ಯತೆಗಳು ತಳ್ಳಿ ಹಾಕುವಂತಿಲ್ಲ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Comments

Leave a Reply

Your email address will not be published. Required fields are marked *