ನೊಯ್ಡಾ: ನೈತಿಕ ಪೊಲೀಸ್‍ಗಿರಿ ಹೆಸರಲ್ಲಿ ಇಬ್ಬರು ಪುರುಷರು ಹಾಗೂ ಓರ್ವ ಯುವತಿ ಮೇಲೆ ಹಲ್ಲೆ ಮಾಡಿರುವ ಘಟನೆ ಗ್ರೇಟರ್ ನೊಯ್ಡಾದಲ್ಲಿ ನಡೆದಿದ್ದು, ಇದರ ವಿಡಿಯೋ ಜನವರಿ 30ರಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.
ಆರೋಪಿಗಳು ಸ್ಥಳೀಯರಾಗಿದ್ದು, ಅಸಭ್ಯ ವರ್ತನೆ ತೋರಿದ್ದಕ್ಕೆ ಥಳಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆರೋಪಿಗಳು ಯುವತಿ ಹಾಗೂ ಇನ್ನಿಬ್ಬರು ವ್ಯಕ್ತಿಗಳನ್ನ ನಿಂದಿಸಿ ಬೆದರಿಕೆ ಹಾಕುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು.

ಒಂದು ಹಂತದಲ್ಲಿ ಆರೋಪಿಗಳು, ಈ ವಿಡಿಯೋವನ್ನ ಹಂಚಿಕೊಂಡು ನಿಮ್ಮ ದುರ್ವತನೆಯನ್ನ ಬಯಲು ಮಾಡ್ತೀವಿ, ಯುವತಿಯ ಮುಖವನ್ನೂ ತೋರಿಸ್ತೀವಿ ಎಂದು ಹೇಳಿದ್ದಾರೆ. ಮೊದಲಿಗೆ ಹಲ್ಲೆಗೊಳಗಾದವರು ಆರೋಪಿಗಳ ವರ್ತನೆಗೆ ವಿರೋಧ ವ್ಯಕ್ತಪಡಿಸಿಲ್ಲ. ಆದ್ರೆ ನಂತರ ಪ್ರತಿರೋಧ ತೋರಿದ್ದಕ್ಕೆ ನಿರ್ಜನ ಪ್ರದೇಶದಲ್ಲಿ ದೊಣ್ಣೆಗಳಿಂದ ಹೊಡೆದಿದ್ದಾರೆ.

ವಿಡಿಯೋ ವೈರಲ್ ಆದ ಬಳಿಕ ಪೊಲೀಸರಿಗೆ ಈ ಬಗ್ಗೆ ಮಾಹಿತಿ ತಿಳಿದಿದ್ದು, ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅದರಲ್ಲಿ ಒಬ್ಬ ತಾನು ಅಪ್ರಾಪ್ತ ಎಂದು ಹೇಳಿ ತನ್ನ ವರ್ತನೆಗೆ ಕ್ಷಮೆ ಕೇಳಿದ್ದಾನೆ.

ವರದಿಯ ಪ್ರಕಾರ ಈ ಘಟನೆ ಜನವರಿ 1ರಂದು ನಡೆದಿದೆ. ಮೂವರು ಸಂತ್ರಸ್ತರು ಹೊಸ ವರ್ಷ ಆಚರಣೆಗಾಗಿ ಗ್ರೇಟರ್ ನೊಯ್ಡಾದ ಬಿಸ್ರಖ್‍ನಲ್ಲಿ ಜಮೀನೊಂದರ ಬಳಿ ಹೋಗುವಾಗ ಆರೋಪಿಗಳು ದಾಳಿ ಮಾಡಿದ್ದಾರೆ. ನೈತಿಕ ಪೊಲೀಸ್‍ಗಿರಿ ಹೆಸರಲ್ಲಿ ಆರೋಪಿಗಳು ಮೂವರ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ.



Leave a Reply