ಕೋಲಾರ: ಚಲಿಸುತ್ತಿದ್ದ ಬೈಕ್‍ನಲ್ಲಿ ದಿಢೀರನೆ ಬೆಂಕಿ ಕಾಣಿಸಿಕೊಂಡು ಬೈಕನ್ನ ನಡು ರಸ್ತೆಯಲ್ಲಿ ಬಿಟ್ಟಿದ್ದಕ್ಕೆ ಸಾರ್ವಜನಿಕರು ಭಯ ಬೀಳುವಂತಾದ ಘಟನೆ ಕೋಲಾರದಲ್ಲಿ ನಡೆದಿದೆ.
ಬಂಗಾರಪೇಟೆ ಪಟ್ಟಣದ ಬೂದಿಕೋಟೆ ವೃತ್ತದ ಬಳಿ ಬೈಕ್ ಚಲಾಯಿಸಿಕೊಂಡು ಹೋಗ್ತಿದ್ದಾಗ ಪೆಟ್ರೋಲ್ ಸೋರಿಕೆ ಉಂಟಾಗಿ ಬೈಕ್ ಹೊತ್ತಿ ಉರಿದಿದೆ. ತುಂಬಾ ಹೊತ್ತು ಬೈಕ್ ಉರಿಯೋದನ್ನೇ ನೋಡ್ತಿದ್ದ ಜನ ಕಡೆಗೂ ಮಣ್ಣು, ನೀರು ಹಾಕಿ ಬೆಂಕಿ ನಂದಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆದಿದ್ದಾರೆ.
https://www.youtube.com/watch?v=hw9qcwdVotI



Leave a Reply