ವಿಡಿಯೋ: ಏಳೇಳು ಜನ್ಮದಲ್ಲೂ ಈಗಿರುವ ಪತ್ನಿ ಬೇಡವೆಂದು ಅತ್ತಿ ಮರಕ್ಕೆ ಪೂಜೆ ಸಲ್ಲಿಸಿದ ಪತಿ!

ಚಿಕ್ಕೋಡಿ: ಪತ್ನಿಯಂದಿರು ವಟ ಸಾವಿತ್ರಿ ಹುಣ್ಣಿಮೆ ನಿಮಿತ್ತ ಅತ್ತಿ ಮರಕ್ಕೆ ಪೂಜೆ ಮಾಡಿ ಪ್ರದಕ್ಷಿಣೆ ಹಾಕುವುದು ಸಾಮಾನ್ಯ. ಆದರೆ ಚಿಕ್ಕೋಡಿಯಲ್ಲಿರುವ ವ್ಯಕ್ತಿಯೊಬ್ಬರು ಪತ್ನಿ ಕಿರುಕುಳ ತಾಳಲಾರೇ ಅತ್ತಿ ಮರಕ್ಕೆ ಪೂಜೆ ಸಲ್ಲಿಸಿ ಸುದ್ದಿಯಾಗಿದ್ದಾರೆ.

ಹೌದು. ಪತ್ನಿ ಪೀಡಿತರಾಗಿರುವ ಶಶಿಧರ್ ರಾಮಚಂದ್ರ ಅವರು ವಟ ಸಾವಿತ್ರಿ ವೃತ್ತದ ನಿಮಿತ್ತ ಏಳೇಳು ಜನ್ಮದಲ್ಲೂ ಈಗ ಇರುವ ಹೆಂಡತಿ ಬೇಡವೆಂದು ಅತ್ತಿ ಮರಕ್ಕೆ ಪೂಜೆ ಸಲ್ಲಿಸಿದ್ದಾರೆ.

ಪತ್ನಿಯಂದಿರು ತನಗೆ ಪ್ರತಿ ಜನ್ಮದಲ್ಲೂ ತನ್ನ ಗಂಡನೇ ಸಿಗಬೇಕು ಎಂದು ವಟ ಸಾವಿತ್ರಿ ಹುಣ್ಣಿಮೆ ದಿನದಂದು ಅತ್ತಿ ಮರಕ್ಕೆ ಪೂಜೆ ಮಾಡಿ ಪ್ರದಕ್ಷಿಣೆ ಹಾಕಿ ಮರಕ್ಕೆ ದಾರವನ್ನು ಕಟ್ಟುತ್ತಾರೆ. ಆದರೆ ಈ ಜನ್ಮದಲ್ಲಿ ತನ್ನ ಹೆಂಡತಿಯು ತನಗೆ ಹಾಗೂ ನನ್ನ ತಂದೆ ತಾಯಿ ಸೇರಿದಂತೆ ಕುಟುಂಬದವರ ಮೇಲೆ ಸುಳ್ಳು ವರದಕ್ಷಿಣೆ ಪ್ರಕರಣ ದಾಖಲಿಸಿ ಕಿರುಕುಳ ನೀಡಿದ್ದಾಳೆ. ಹೀಗಾಗಿ ಈ ಹೆಂಡತಿ ನನಗೆ ಮುಂದಿನ ಜನಮದಲ್ಲಿ ಬೇಡ ಎಂದು ಅವರು ಅತ್ತಿ ಮರಕ್ಕೆ ಪೂಜೆ ಸಲ್ಲಿಸಿದ್ದಾರೆ.

ಮುಂದಿನ ಜನ್ಮದಲ್ಲಿ ಬೇಕಾದರೆ ನಾನು ಕುಮಾರನಾಗಿಯೇ ಇರುತ್ತೇನೆ. ಆದರೆ ಈ ರೀತಿಯ ಪತ್ನಿಯನ್ನು ನನಗೆ ದಯವಿಟ್ಟು ನೀಡಬೇಡ ಎಂದು ಪ್ರಾರ್ಥನೆ ಮಾಡಿ ದೇವರಲ್ಲಿ ಬೇಡಿಕೊಂಡಿದ್ದಾರೆ. ಪತ್ನಿಯಿಂದ ಕಿರುಕುಳ ಅನುಭವಿಸಿದ ಶಶಿಧರ್ ಪುರುಷ ಸಾಂತ್ವಾನ ಕೇಂದ್ರವನ್ನು ಸ್ಥಾಪನೆ ಮಾಡಿದ್ದಾರೆ.

https://www.youtube.com/watch?v=5-m-RvIaRsc&feature=youtu.be

Comments

Leave a Reply

Your email address will not be published. Required fields are marked *