ಬೆಂಗಳೂರು: ಟಗರು ಚಿತ್ರದ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ‘ದ್ರೋಣ’ ಸಿನಿಮಾದ ಚಿತ್ರೀಕರಣದಲ್ಲಿ ಫುಲ್ ಬ್ಯೂಸಿಯಾಗಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ವೇಳೆ ಶಿವಣ್ಣ ಅದೇ ಶಾಲೆಯಲ್ಲಿ ಓದುತ್ತಿರುವ ಪುಟಾಣಿ ಬಾಲಕಿ ಜೊತೆ ಸ್ವಲ್ಪ ಸಮಯವನ್ನು ಕಳೆದಿದ್ದಾರೆ.
ಶಿವಣ್ಣ ಶೂಟಿಂಗ್ ನಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ಬಾಲಕಿಯೊಂದಿಗೆ ಸಮಯ ಕಳೆದಿದ್ದಾರೆ. ಈ ವೇಳೆ ಬಾಲಕಿ ಹಾಡು ಸಹ ಹೇಳಿದ್ದು, ಪುಟಾಣಿಯ ಹಾಡಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಬಾಲಕಿಯ ಹೆಸರು ದೀಪ್ತಿಯಾಗಿದ್ದು, ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾಳೆ. ಕಳೆದ ಒಂದು ವಾರದಿಂದ ಈ ಶಾಲಾ ಆವರಣದಲ್ಲಿ ದ್ರೋಣ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಬಾಲಕಿಯ ಸುಮಧುರ ಕಂಠಕ್ಕೆ ಮೆಚ್ಚುಗೆಯನ್ನು ನೀಡಿ ಬಾಲಕಿ ಕಟ್ಟಿದ ರಾಕಿಗೆ ಮನಸೋತಿದ್ದಾರೆ.
ಈ ಚಿತ್ರದಲ್ಲಿ ಇನಿಯಾ, ಸ್ವಾತಿ ಶರ್ಮ, ರಂಗಾಯಣ ರಘು, ವಿ. ಮನೋಹರ್, ಸಾಧುಕೋಕಿಲ, ಬಾಬು ಹಿರಣ್ಣಯ್ಯ, ರೇಖಾದಾಸ್, ಪ್ರಕಾಶ್ ಹೆಗ್ಗೋಡು, ಆನಂದ್, ಶಂಕರ ರಾವ್, ವಿಜಯಕಿರಣ್, ನಟಿಸುತ್ತಿದ್ದಾರೆ. ಈ ಚಿತ್ರವನ್ನು ಬಿ. ಮಹದೇವ, ಬಿ. ಸಂಗಮೇಶ್ ಹಾಗೂ ಶೇಶು ಚಕ್ರವರ್ತಿ ನಿರ್ಮಿಸುತ್ತಿದ್ದಾರೆ. ಪ್ರಮೋದ್ ಚಕ್ರವರ್ತಿ ಈ ಚಿತ್ರದ ಕಥೆ, ಸಂಭಾಷಣೆ ಹಾಗೂ ನಿರ್ದೇಶನವನ್ನು ಮಾಡುತ್ತಿದ್ದು, ರಾಮ್ ಕ್ರಿಶ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
https://www.youtube.com/watch?v=qqLSQj-sTv8
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply