ಕೆನಡಾದ ಬೀದಿಯಲ್ಲಿ ಅಭಿಮಾನಿಗಳಿಂದ ಕತ್ರಿನಾ ಕೈಫ್‍ಗೆ ಅವಮಾನ-ವಿಡಿಯೋ ನೋಡಿ

ಒಟ್ಟಾವಾ: ಬಾಲಿವುಡ್ ನಟಿ ಕತ್ರಿನಾ ಕೈಫ್ ಇತ್ತೀಚೆಗೆ ತನ್ನ ಗೆಳೆಯ ಸಲ್ಮಾನ್ ಖಾನ್ ಜೊತೆ ‘ದ-ಬ್ಯಾಂಗ್’ ಕಾನ್ಸರ್ಟ್ ಗಾಗಿ ಕೆನಡಾಗೆ ಹೋಗಿದ್ದರು. ಆಗ ಅಲ್ಲಿ ಯುವತಿಯರು ನಡುಬೀದಿಯಲ್ಲೇ ನಟಿಗೆ ಅವಮಾನ ಮಾಡಿದ್ದಾರೆ.

ಕತ್ರಿನಾ ಕಾರ್ಯಕ್ರಮವನ್ನು ಮುಗಿಸಿಕೊಂಡು ತನ್ನ ಕಾರಿನ ಬಳಿ ಹೋಗುತ್ತಿದ್ದಾಗ ಅಲ್ಲಿ ಇದ್ದ ಯುವತಿಯರು ನಡುರಸ್ತೆಯಲೇ ನಿಂತು “ಕತ್ರಿನಾ ನಮಗೆ ನಿಮ್ಮ ಜೊತೆ ಫೋಟೋ ಬೇಡ ಭೂ…” ಎಂದು ಕಿರುಚಾಡಿದ್ದಾರೆ. ಯುವತಿಯರ ವರ್ತನೆಯಿಂದ ಕೋಪಗೊಂಡ ಕತ್ರಿನಾ “ನಿಮಗೆ ಒಂದು ವಿಷಯ ಗೊತ್ತಾ? ನೀವು ಹೀಗೆ ಮಾಡಬಾರದು. ನಾನು ಒಂದು ದೊಡ್ಡ ಕಾರ್ಯಕ್ರಮ ಮುಗಿಸಿ ಆಯಾಸಗೊಂಡಿದ್ದೇನೆ” ಎಂದು ಪ್ರತಿಕ್ರಿಯಿಸಿದ್ದರು.

ಆಗ ಯುವತಿಯರು “ನೀವು ಒಳ್ಳೆಯ ಸ್ವಭಾವವನ್ನು ಬೆಳೆಸಿಕೊಳ್ಳಬೇಕು. ಜನರು ನಿಮ್ಮನ್ನು ನಟಿ ಎಂದು ಕರೆಯುತ್ತಾರೆ. ಆದರೆ ಜನರು ನಿಮ್ಮ ಹತ್ತಿರ ಬಂದಾಗ ನೀವು ಅವರನ್ನು ದೂರ ಮಾಡುತ್ತೀರಿ” ಎಂದಾಗ ಕತ್ರಿನಾ “ಕಾಮ್ ಡೌನ್”(ಸಮಾಧಾನ) ಎಂದು ಹೇಳಿದ್ದಾರೆ. ಆಗ ಯುವತಿ “ನಾನು ಪಬ್ಲಿಕ್ ಪ್ರಾರ್ಪಟಿ ಅಲ್ಲ. ನೀವು ನನಗೆ ಸಮಾಧಾನ ಎಂದೂ ಹೇಳೋಕ್ಕೆ ಆಗಲ್ಲ” ಎಂದು ಮರು ಉತ್ತರ ನೀಡಿದ್ದಾಳೆ.

ನಡೆದಿದ್ದೇನು?
ಕಾರ್ಯಕ್ರಮ ಮುಗಿದ ಮೇಲೆ ಯುವತಿಯರು ಕತ್ರಿನಾ ಜೊತೆ ಫೋಟೋ ತೆಗೆದುಕೊಳ್ಳಬೇಕು ಎಂದುಕೊಂಡಿದ್ದರು. ಆದರೆ ಕತ್ರಿನಾ ಕಾರ್ಯಕ್ರಮದಲ್ಲಿ ತುಂಬಾ ಆಯಾಸಗೊಂಡಿದ್ದ ಕಾರಣ ಅವರು ಅಭಿಮಾನಿಗಳ ಜೊತೆ ಫೋಟೋ ಕ್ಲಿಕ್ಕಿಸಲು ಸ್ವಲ್ಪ ತಡ ಮಾಡಿದ್ದರು. ಇದ್ದರಿಂದ ಯುವತಿಯರು ಕೋಪಗೊಂಡು ಅಲ್ಲಿಂದ ಹೊರಟು ಹೋದರು. ನಂತರ ಕತ್ರಿನಾ ಹೋಟೆಲ್‍ನಿಂದ ಹೊರಬಂದು ತನ್ನ ಕಾರಿನ ಬಳಿ ಹೋಗುತ್ತಿದ್ದಾಗ ಯುವತಿಯರು ಕತ್ರಿನಾರನ್ನು ಹಿಂಬಾಲಿಸಿ ಅವಮಾನ ಮಾಡಿದ್ದಾರೆ.

ಯುವತಿಯರ ಈ ವರ್ತನೆ ಕಂಡು ಕತ್ರಿನಾ ತನ್ನ ತಾಳ್ಮೆಯನ್ನು ಕಳೆದುಕೊಳ್ಳದೇ ಆ ಸಂದರ್ಭವನ್ನು ಶಾಂತಿಯಿಂದ ನಿಭಾಯಿಸಿದ್ದರು. ಕತ್ರಿನಾ ಅಲ್ಲಿದ್ದ ಬೇರೆ ಅಭಿಮಾನಿಗಳ ಜೊತೆ ಶಾಂತಿಯಿಂದ ಫೋಟೋಗೆ ಪೋಸ್ ಕೊಟ್ಟರು. ಅಲ್ಲದೇ ಅಭಿಮಾನಿಗಳಿಗೆ ತಮ್ಮ ಆಟೋಗ್ರಾಫ್ ಕೂಡ ನೀಡಿದ್ದರು. ಕತ್ರಿನಾ ಬೇರೆ ಅಭಿಮಾನಿಗಳ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಆ ಯುವತಿಯರು ಕತ್ರಿನಾ ಬಗ್ಗೆ ಕಮೆಂಟ್ ಮಾಡಿ ಅವಮಾನ ಮಾಡಿದ್ದಾರೆ.

https://www.youtube.com/watch?time_continue=46&v=OZt7ze5XYYU

Comments

Leave a Reply

Your email address will not be published. Required fields are marked *