ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಮತ ಹಾಕಿದ್ರೆ, ನಿಮ್ಮ ಗ್ರಹಚಾರ ಸರಿ ಇರಲ್ಲ- ಶಾಸಕ ಕೆ ಎನ್ ರಾಜಣ್ಣ ಧಮ್ಕಿ

ತುಮಕೂರು: ಮಧುಗಿರಿ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಮತದಾರರಿಗೆ ಧಮ್ಕಿ ಹಾಕುವ ತಮ್ಮ ಚಾಳಿಯನ್ನು ಮುಂದುವರೆಸಿದ್ದಾರೆ.

ಮಧುಗಿರಿ ಪಟ್ಟಣದ 14 ನೇ ವಾರ್ಡ್ ನಲ್ಲಿರುವ ಮಂಡ್ರ ಕಾಲೋನಿಯ ಪ್ರಚಾರ ಕಾರ್ಯಕ್ರಮದಲ್ಲಿ ಮತದಾರರಿಗೆ ಬಹಿರಂಗವಾಗಿ ಧಮ್ಕಿ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಮತಹಾಕಿದ್ರೆ ನಿಮ್ಮ ಗ್ರಹಚಾರ ಸರಿಯಿರಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಇಲ್ಲಿ ಯಾವ ಪಕ್ಷದವರು ಅಭಿವೃದ್ಧಿ ಮಾಡಿಲ್ಲ. ನಾನೇ ಅಭಿವೃದ್ಧಿ ಮಾಡಿದ್ದು. ಹಾಗಾಗಿ ಕಾಂಗ್ರೆಸ್ ಗೆ ಮತ ಹಾಕಬೇಕು. ಬೇರೆ ಯಾವ ಪಕ್ಷದವರನ್ನೂ ಊರ ಒಳಗಡೆ ಸೇರಿಸ್ಕೋ ಬೇಡಿ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದೇ ಇದ್ದರೆ ನಿಮ್ಮ ಗ್ರಹಚಾರ ಕೆಡ್ತು ಅಂತಾನೇ ತಿಳ್ಕೊಳ್ಳಿ ಎಂದು ಧಮ್ಕಿ ಹಾಕಿದ್ದಾರೆ.

Comments

Leave a Reply

Your email address will not be published. Required fields are marked *