ಹೊಟ್ಟೆಯ ಮೇಲೆ 49 ಕಲ್ಲಂಗಡಿ ಕತ್ತರಿಸಿಕೊಳ್ಳುವ ಮೂಲಕ ಭಾರತೀಯನಿಂದ ವಿಶ್ವದಾಖಲೆ

ಗಾಂಧಿನಗರ: ಗುಜರಾತಿನ ವ್ಯಕ್ತಿಯೊಬ್ಬರು ಸ್ನೇಹಿತನ ಸಹಾಯದಿಂದ ಹೊಟ್ಟೆಯ ಮೇಲೆ ಒಂದು ನಿಮಿಷದಲ್ಲಿ 49 ಕಲ್ಲಂಗಡಿಯನ್ನು ಕತ್ತರಿಸಿಕೊಳ್ಳುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.

ವಿಸ್ಪಿ ಜಿಮ್ಮಿ ಖಾರಾಡಿ ತನ್ನ ಮಾರ್ಷಲ್ ಆರ್ಟ್ಸ್ ಸಾಹಸ ಪ್ರದರ್ಶನದಿಂದ ಹೊಸ ಗಿನ್ನಿಸ್ ದಾಖಲೆಯನ್ನು ಸೂರತ್‍ನಲ್ಲಿ ಬರೆದಿದ್ದಾರೆ. ಮಂಗಳವಾರದಂದು ನಡೆದ ಗಿನ್ನಿಸ್ ವಿಶ್ವದಾಖಲೆ ಪ್ರಯತ್ನದಲ್ಲಿ ಜಪಾನಿನ ಹರಿತವಾದ ಖಡ್ಗ ಕಟಾನಾದಿಂದ ತನ್ನ ಸ್ನೇಹಿತ ವಿಸ್ಪಿ ಬಾಜಿ ಕಸಾದ್‍ರ ಸಹಾಯದಿಂದ ಹೊಟ್ಟೆಯ ಮೇಲೆ 49 ಕಲ್ಲಗಂಡಿ ಹಣ್ಣನ್ನು ಕತ್ತರಿಸಿ ಕೊಳ್ಳುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

ವಿಸ್ಪಿ ಜಿಮ್ಮಿ ಖಾರಾಡಿ ಮತ್ತು ವಿಸ್ಪಿ ಬಾಜಿ ಕಸಾದ್ ಇಬ್ಬರು ಜಮ್ ಟ್ರೈನರ್ ಆಗಿದ್ದು, ಇಬ್ಬರು ಮಾರ್ಷಲ್ ಆರ್ಟ್ಸ್ ನಲ್ಲಿ ನಿಪುಣರು. 1 ನಿಮಿಷದಲ್ಲಿ 51 ಕಲ್ಲಂಗಡಿ ಹಣ್ಣನ್ನು ಕತ್ತರಿಸಿದ್ದರೂ, ನಿಯಮದ ಪ್ರಕಾರ ಎರಡು ಹಣ್ಣನ್ನು ಸರಿಯಾಗಿ ಕತ್ತರಿಸದ ಕಾರಣ ಮತ್ತು ಇನ್ನೊಂದು ಹಣ್ಣು 1 ನಿಮಿಷದ ನಂತರ ಕತ್ತರಿಸಿದ್ದಕ್ಕೆ ಈ ಎರಡು ಪ್ರಯತ್ನವನ್ನು ಪರಿಗಣಿಸಲಿಲ್ಲ.

ಇಂತಹ ಸಾಹಸ ಮಾಡುವಾಗ ಕೆಲವು ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಇವರ ವಿಷಯದಲ್ಲಿ ಯಾವುದೇ ನೋವು ಮತ್ತು ಗಾಯಗಳಾಗದೇ ಸುಲಭವಾಗಿ ಈ ಸವಾಲನ್ನು ಪೂರ್ಣಗೊಳಿಸಿದ್ದಾರೆ. ಇದನ್ನು ಮಾಡುವ ಮೊದಲು ಸಾಕಷ್ಟು ಅಭ್ಯಾಸ ಮಾಡಿರುವ ಜಿಮ್ಮಿ ಖಾರಾಡಿ ಮತ್ತು ಬಾಜಿ ಕಸಾದ್ ತಮ್ಮ ಬಲವಾದ ಆತ್ಮವಿಶ್ವಾಸದಿಂದ ಇದನ್ನು ಸಾಧಿಸಿದ್ದಾರೆ.

Comments

Leave a Reply

Your email address will not be published. Required fields are marked *