ಟಗರು ಕಾಳಗವನ್ನು ಮೀರಿಸುವಂತೆ ನಡೆಯಿತು ಕೃಷ್ಣಮೃಗಗಳ ಕಾಳಗ- ವಿಡಿಯೋ ನೋಡಿ

ಹಾವೇರಿ: ಉತ್ತರ ಕರ್ನಾಟಕ ಭಾಗದಲ್ಲಿ ಟಗರು ಕಾಳಗ ಅಂದ್ರೆ ಅದು ಸಖತ್ ಫೇಮಸ್. ಆದರೆ ಹಾವೇರಿ ತಾಲೂಕಿನ ನಾಗನೂರು ಗ್ರಾಮದ ಬಳಿಯ ರೈತರ ಜಮೀನಿನಲ್ಲಿ ಟಗರು ಕಾಳಗವನ್ನೂ ಮೀರಿಸುವಂತೆ ಕೃಷ್ಣಮೃಗಗಳ ಕಾಳಗ ನಡೆದಿದೆ.

ಸುಮಾರು ಅರ್ಧ ಗಂಟೆ ಕಾಲ ಬಿಟ್ಟುಬಿಡದೆ ಕೃಷ್ಣ ಮೃಗಗಳು ಸಖತ್ ಡಿಚ್ಚಿ ಹೊಡೆದದ್ದೆ. ನಾ ಸೋಲಲ್ಲ, ಗೆಲುವು ನನ್ನದೇ ಎನ್ನುವ ಹಾಗೆ ಕೃಷ್ಣ ಮೃಗಗಳು ಒಂದಕ್ಕೊಂದು ಸಖತ್ ಫೈಟ್ ಮಾಡಿದ್ದವು. ಅರ್ಧ ಗಂಟೆ ಕಾಲ ಬಿಟ್ಟು ಬಿಡದಂತೆ ಫೈಟ್ ಮಾಡಿದ್ದು ರೈತರ ಹುಬ್ಬೇರಿಸುವಂತೆ ಮಾಡಿತು.

ಕೊನೆಗೆ ಒಂದು ಕೃಷ್ಣಮೃಗ ಓಡಿ ಹೋದ ನಂತರ ಕೃಷ್ಣ ಮೃಗಗಳ ಕಾಳಗಕ್ಕೆ ಬ್ರೇಕ್ ಬಿದ್ದಿತು. ಕೃಷ್ಣ ಮೃಗಗಳ ಜೊತೆಗಿದ್ದ ಜಿಂಕೆಗಳು ಕಾಳಗ ನೋಡ್ತಾ ಸುಮ್ಮನೆ ಅತ್ತಿತ್ತ ಓಡಾಡ್ತಿದ್ದವು.

https://www.youtube.com/watch?v=mG8a7gx5wSw

Comments

Leave a Reply

Your email address will not be published. Required fields are marked *