ಪ್ರವಾದಿ ವಿರುದ್ಧ ಅವಹೇಳನ – ಮುಸ್ಲಿಂ ಸಂಘಟನೆಗಳ ಪ್ರತಿಭಟನೆಗೆ ವಿಹೆಚ್‌ಪಿ ತೀವ್ರ ಖಂಡನೆ

ನವದೆಹಲಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಬಿಜೆಪಿ ಮಾಜಿ ವಕ್ತಾರೆ ನೀಡಿರುವ ಹೇಳಿಕೆ ಖಂಡಿಸಿ ಮುಸ್ಲಿಂ ಸಂಘಟನೆಗಳು ರಾಷ್ಟ್ರವ್ಯಾಪಿ ನಡೆಸುತ್ತಿರುವ ಪ್ರತಿಭಟನೆಯನ್ನು ವಿಶ್ವ ಹಿಂದೂ ಪರಿಷತ್ (VHP) ತೀವ್ರವಾಗಿ ಖಂಡಿಸಿದೆ.

VHPಯ ಮಾರ್ಗದರ್ಶಕ ಮಂಡಳಿಯು ಇಂದು ಮತ್ತು ನಾಳೆ (ಜೂನ್ 12) ಸಭೆ ನಡೆಸುತ್ತಿದ್ದು, ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಹೊರತಾಗಿ ಜ್ಞಾನವಾಪಿ ಮಸೀದಿ, ಕಾಶ್ಮೀರಿ ಪಂಡಿತರ ಉದ್ದೇಶಿತ ಹತ್ಯೆಗಳು, ಯುಸಿಸಿ ಮುಂತಾದ ವಿಷಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ಇದನ್ನೂ ಓದಿ: ಪದವೀಧರ ಮಹಿಳೆಯನ್ನು ಕೆಲಸಕ್ಕೆ ಹೋಗುವಂತೆ ಒತ್ತಾಯಿಸುವಂತಿಲ್ಲ – ಹೈಕೋರ್ಟ್ 

ಇಂದು ನಡೆಯುತ್ತಿದ್ದ ಸಭೆಯಲ್ಲಿ ವಿಹೆಚ್‌ಪಿ ಮುಖಂಡರು `ಫ್ರೀ ಹಿಂದೂ ಟೆಂಪಲ್’ (ಹಿಂದೂ ದೇವಸ್ಥಾನಗಳನ್ನು ಮುಕ್ತಗೊಳಿಸಿ) ಎಂದು ಘೋಷಣೆ ಕೂಗಿದ್ದಾರೆ ಎಂದು ವರದಿಯಾಗಿದೆ.

ಅಲ್ಲದೆ ರಾಜ್ಯದ ಮಠ ಮಂದಿರಗಳಿಂದಲೇ 1.5 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹಿಸಲಾಗಿದೆ. ಕಳೆದ ವರ್ಷವೂ 4 ಲಕ್ಷ ಕೋಟಿ ಸಂಗ್ರಹಿಸಲಾಗಿದೆ. ಹಿಂದೂಗಳ ಈ ಹಣವನ್ನು ಹಿಂದೂ ಧರ್ಮಕ್ಕಾಗಿಯೇ ಬಳಸಬೇಕು. ಜೊತೆಗೆ ಸರ್ಕಾರ ಮಠ, ಮಂದಿರ ಮತ್ತು ದೇವಸ್ಥಾನಗಳನ್ನು ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಎಲ್ಲ ಶಾಸಕರಿಗೆ 50 ಲಕ್ಷ, ಅಡ್ಡ ಮತಕ್ಕೆ ಕಾರಣವೇನು? – ಹಳೇ ಕಥೆ ಬಿಚ್ಚಿಟ್ಟ ಶ್ರೀನಿವಾಸ್ ಗೌಡ

ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಹೆಚ್‌ಪಿಯ ಕೇಂದ್ರ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಮಾತನಾಡಿ, ಮುಸ್ಲಿಮರಲ್ಲಿನ ಜಿಹಾದಿಗಳು ಸಮುದಾಯವನ್ನು ಹಿಂಸಾಚಾರದ ಹಾದಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದು ಸಮುದಾಯದ ಅಥವಾ ದೇಶದ ಹಿತಾಸಕ್ತಿಯಲ್ಲ. ದೇಶದ ಶಾಂತಿಯನ್ನು ಹಾಳುಮಾಡಲು ಪ್ರಯತ್ನಿಸುತ್ತಿರುವ ಅಂಶಗಳು. ಭಾರತವು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆಯೇ ಹೊರತು ಷರಿಯಾ ಅಪರಾಧದ ಕಾನೂನಿನಿಂದ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಜೊತೆಗೆ ಗಲಭೆಕೋರರ ವಿರುದ್ಧ ಮೃದು ಸ್ವಭಾವ ತೋರಿಸದೇ ಗಲಭೆಯಿಂದ ಹಾನಿಯಾಗಿರುವ ಆಸ್ತಿಗೆ ಅವರಿಂದಲೇ ವಸೂಲಿ ಮಾಡಬೇಕು. ತ್ವರಿತವಾಗಿ ಈ ಕ್ರಮ ಕೈಗೊಳ್ಳಬೇಕು ಎಂದು ಅಲೋಕ್‌ಕುಮಾರ್ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನ ನೀರಿನ ಟ್ಯಾಂಕ್ 25 ವರ್ಷಗಳಿಂದ ಸ್ವಚ್ಛತೆಯನ್ನೇ ಕಂಡಿಲ್ಲ!

ಮುಸ್ಲಿಂ ಸಮುದಾಯವು ಹಿಂಸಾಚಾರದ ಹಾದಿಯನ್ನು ತ್ಯಜಿಸಬೇಕು. ನ್ಯಾಯಾಲಯದ ತೀರ್ಪಿಗೆ ಕಾಯಬೇಕು. ಏಕೆಂದರೆ ಈ ರೀತಿಯ ಹಿಂಸಾತ್ಮಕ ಘಟನೆಗಳು ಇತರ ಸಮುದಾಯಗಳನ್ನೂ ಪ್ರೇರೇಪಿಸಬಹುದು. ಇದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ಹಾಗಾಗಿ ಹಿಂಸಾಚಾರದ ಹಾದಿ ತ್ಯಜಿಸಬೇಕು ಎಂದು ಅಲೋಕ್‌ ಕುಮಾರ್ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *