‘ಮಾ ಇಷ್ಟಂ’ ಸಿನಿಮಾಗೆ ತಡೆಯಾಜ್ಞೆ ತಂದವರ ವಿರುದ್ಧವೇ ನಕಲಿ ಸಹಿ ದೂರು ನೀಡಿದ ವರ್ಮಾ

ಕ್ಷಿಣದ ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ‘ಮಾ ಇಷ್ಟಂ’ ಸಿನಿಮಾ ಅಂದುಕೊಂಡಂತೆ ಆಗಿದ್ದರೆ ಮೂರು ವಾರಗಳ ಹಿಂದೆಯೇ ರಿಲೀಸ್ ಆಗಬೇಕಿತ್ತು. ಆದರೆ, ನಿರ್ಮಾಪಕರಾದ ಕ್ರಾಂತಿ ಹಾಗೂ ನಟ್ಟಿ ಕರುಣಾ ಎನ್ನುವವರು ಈ ಚಿತ್ರಕ್ಕೆ ತಡೆಯಾಜ್ಞೆ ತಂದಿದ್ದರು. ತಮಗೆ ರಾಮ್ ಗೋಪಾಲ್ ವರ್ಮಾ ಹಣ ಕೊಡದೇ ವಂಚಿಸಿದ್ದಾರೆ ಎಂದು ದೂರು ದಾಖಲಿಸಿದ್ದರು. ಇದನ್ನೂ ಓದಿ : ಕರಣ್ ಜೋಹಾರ್ ಬರ್ತಡೇ ಪಾರ್ಟಿಗೆ ‘ಬಾಡಿಗಾರ್ಡ್ಸ್ ‘ ನಿರ್ಬಂಧ

ನಟ್ಟಿಸ್ ಎಂಟರ್ ಟೈನ್ಮೆಂಟ್ ಗೆ ರಾಮ್ ಗೋಪಾಲ್ ವರ್ಮಾ ವಂಚಿಸಿದ್ದಾರೆ ಎಂದು ಈ ಇಬ್ಬರೂ ನಿರ್ಮಾಪಕರು ದೂರು ಕೊಟ್ಟ ಹಿನ್ನೆಲೆಯಲ್ಲಿ ಮತ್ತು ಕೋರ್ಟ್ನಿಂದ ತಡೆಯಾಜ್ಞೆ ತಂದ ಕಾರಣದಿಂದಾಗಿ ಚಿತ್ರ ರಿಲೀಸ್ ಆಗಿರಲಿಲ್ಲ. ಇದೀಗ ರಾಮ್ ಗೋಪಾಲ್ ವರ್ಮಾ ಆ ನಿರ್ಮಾಪಕರ ಮೇಲೆ ಮತ್ತೊಂದು ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ ನಟ್ಟಿ ಕ್ರಾಂತಿ ಮತ್ತು ನಟ್ಟಿ ಕರುಣಾ ಅವರು ತಮ್ಮ ಸಹಿ ಫೋರ್ಜರಿ ಮಾಡಿದ್ದಾರೆ ಎಂದು ಹೈದರಾಬಾದ್ ನ ಪಂಗಗುಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ : ರಜನಿಕಾಂತ್ ಮನೆಯಲ್ಲಿ ಕಾಣಿಸಿಕೊಂಡ ಕಮಲ್ ಹಾಸನ್: ಕುತೂಹಲ ಮೂಡಿಸಿದ ಭೇಟಿ

ನಟ್ಟಿಸ್ ಎಂಟರ್ ಟೈನ್ಮೆಂಟ್ ನಿರ್ಮಾಪಕರು ನನ್ನ ಸಹಿ ಮತ್ತು ನನ್ನ ಲೆಟರ್ ಹೆಡ್ ಅನ್ನು ನಕಲು ಮಾಡಿ, ದುರುಪಯೋಗ ಮಾಡಿಕೊಂಡಿದ್ದಾರೆ. ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಲೆಟರ್ ಹೆಡ್ ನನ್ನದಲ್ಲ ಮತ್ತು ಸಹಿ ಕೂಡ ನಾನು ಮಾಡಿಲ್ಲ. ಅವರೇ ಫೋರ್ಜರಿ ಮಾಡಿದ್ದಾರೆ ಎಂದು ಪ್ರತಿದೂರು ನೀಡಿದ್ದಾರೆ. ಇದರ ಬಗ್ಗೆ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ : ಐಪಿಎಲ್ ಫಿನಾಲೆಯಲ್ಲಿ ಅಮೀರ್ ಖಾನ್ ಸಿನಿಮಾ ‘ಲಾಲ್ ಸಿಂಗ್ ಛಡ್ಡಾ’ ಟ್ರೈಲರ್ ರಿಲೀಸ್

ನಟ್ಟಿ ಸಹೋದರರಿಂದ ರಾಮ್ ಗೋಪಾಲ್ ವರ್ಮಾ 56 ಲಕ್ಷ ರೂಪಾಯಿಯನ್ನು ಸಾಲ ಪಡೆದುಕೊಂಡಿದ್ದರಂತೆ. ಸಾಲ ಮರಳಿಸದೇ ವಂಚಿಸಿದ್ದಾರೆ ಎಂದು ಮಿಯಾಪೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿತ್ತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 12ಕ್ಕೆ ನಡೆಯಲಿದೆ.

Comments

Leave a Reply

Your email address will not be published. Required fields are marked *