ಇತಿಹಾಸ ಪ್ರಸಿದ್ಧ ಕೇರಳಾಪುರದ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಸಂಪನ್ನ

ಹಾಸನ/ಮಡಿಕೇರಿ: ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೇರಳಾಪುರ ಗ್ರಾಮದಲ್ಲಿಂದು ಚೋಳರ ಕಾಲದ ಇತಿಹಾಸ ಪ್ರಸಿದ್ಧ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಸಡಗರ ಸಂಭ್ರಮದಿಂದ ನಡೆಯಿತು.

ಬೆಳಗ್ಗೆ ದೇವಾಲಯದಲ್ಲಿ ಗಣಪತಿ, ಪೂಜೆ, ಅಂಕುರಾರ್ಪಣೆ, ನವಮಿ ಉತ್ಸವ, ನವಗ್ರಹ ಪೂಜೆ ಸಲ್ಲಿಸಲಾಯಿತು. ಮೂಲ ದೇವರಿಗೆ ವಿಶೇಷ ಪೂಜೆ, ಯಾತ್ರಾದಾನೋತ್ಸವ ಸೇವೆ ಪೂರೈಸಲಾಯಿತು. ಇದನ್ನೂ ಓದಿ: ತೇಜಸ್ವಿ ಸೂರ್ಯ, ಶಿವಶ್ರೀ ರಿಸೆಪ್ಷನ್ – ಸಿಎಂ, ಡಿಸಿಎಂ ಸೇರಿದಂತೆ ಗಣ್ಯರಿಂದ ನವದಂಪತಿಗೆ ಶುಭಹಾರೈಕೆ

ಬಳಿಕ ದೇವರ ಉತ್ಸವ ಮೂರ್ತಿಯನ್ನು ಹೊರತಂದು ಪ್ರದಕ್ಷಿಣೆ ಹಾಕಿದ ಬಳಿಕ ದೇವಸ್ಥಾನ ಎದುರಿದ್ದ ಅಲಂಕೃತ ರಥದ ಮೇಲೆ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ನಂತರ ಭಕ್ತರು ಹರ್ಷೋದ್ಘಾರದಿಂದ ತೇರು ಎಳೆದರು. ರಥ ಬೀದಿಯಲ್ಲಿ ತೇರು ಮುಂದೆ ಚಲಿಸುವಾಗಿ ಭಕ್ತರು ಹಣ್ಣು ಧವನ ಎಸೆದರು. ಇದನ್ನೂ ಓದಿ: ಐಶ್ವರ್ಯಗೌಡ ವಂಚನೆ ಕೇಸ್‌ಗೆ ಟ್ವಿಸ್ಟ್ – ವಿನಯ್ ಕುಲಕರ್ಣಿ ಕಾರು ಚಾಲಕನ ವಿಚಾರಣೆ

ಮೈಲಾರ ಲಿಂಗೇಶ್ವರ ದೇವಸ್ಥಾನದವರೆಗೆ ಸಾಗಿದ ತೇರನ್ನು ಸಂಜೆ ಪೂಜೆ ಸಲ್ಲಿಸಿ ವಾಪಸ್ ಸ್ವಸ್ಥಳಕ್ಕೆ ತಂದು ನಿಲ್ಲಿಸಲಾಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ದೇವಾಲಯದ ವತಿಯಿಂದ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನದಲ್ಲಿ ಮೂರ್ತಿಯನ್ನು ಬಗೆ ಬಗೆಯ ಹೂಗಳಿಂದ ಸಿಂಗರಿಸಲಾಗಿತ್ತು.