ಶ್ರೀಲೀಲಾ ನಟಿಸಲಿರುವ ಬಾಲಿವುಡ್ ಸಿನಿಮಾ ಏನಾಯ್ತು?

ನ್ನಡತಿ ಶ್ರೀಲೀಲಾ(Sreeleela) ಇದೀಗ ಬಾಲಿವುಡ್ ಅಂಗಳಕ್ಕೆ ಲಗ್ಗೆ ಇಟ್ಟಿದ್ದಾರೆ. ತೆಲುಗು ಸಿನಿಮಾಗಳ ಜೊತೆ ಬಾಲಿವುಡ್‌ನಲ್ಲಿಯೂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ವರುಣ್‌ ಧವನ್‌ (Varun Dhawan) ಜೊತೆ ನಟಿ ಸಿನಿಮಾ ಮಾಡ್ತಾರೆ ಎಂದು ಸುದ್ದಿ ವೈರಲ್‌ ಆಗಿತ್ತು. ಬಳಿಕ ಏನಾಯ್ತು ಎಂದು ಮಾಹಿತಿ ಸಿಕ್ಕಿರಲಿಲ್ಲ. ಇದೀಗ ನಟಿಯ ಚೊಚ್ಚಲ ಹಿಂದಿ ಸಿನಿಮಾ ಬಗ್ಗೆ ಮಾಹಿತಿ ಸಿಕ್ಕಿದೆ.

ಹೊಸ ಸಿನಿಮಾದಲ್ಲಿ ವರುಣ್ ಧವನ್, ಮೃಣಾಲ್ ಠಾಕೂರ್ (Mrunal Thakur) ಜೊತೆ ಶ್ರೀಲೀಲಾ ಕೂಡ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಇದೇ ಜುಲೈ ಅಂತ್ಯದಿಂದ ಸಿನಿಮಾ ಶೂಟಿಂಗ್ ಶುರುವಾಗಲಿದೆ.

ಡೇವಿಡ್ ಧವನ್ ನಿರ್ಮಾಣದಲ್ಲಿನ ಈ ಸಿನಿಮಾಗೆ ಕ್ರೇಜಿ ಆಗಿರುವ ಟೈಟಲ್ ಇಡಲಾಗಿದೆ. `ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಎಂದು ಶೀರ್ಷಿಕೆ ಇಡಲಾಗಿದೆ. ಶ್ರೀಲೀಲಾ ಮೊದಲ ಬಾರಿಗೆ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ, ಅವರಿಗೆ ಈ ಚಿತ್ರ ಸ್ಪೆಷಲ್ ಪ್ರಾಜೆಕ್ಟ್ ಆಗಿದೆ.

ವರುಣ್ ಧವನ್‌ಗೆ ಜೋಡಿಯಾಗಿ ಶ್ರೀಲೀಲಾ, ಮೃಣಾಲ್ ಠಾಕೂರ್ ನಟಿಸುತ್ತಿರುವ ಕಾರಣ ಸಿನಿಮಾ ಬಗ್ಗೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.ಹಾಟ್‌ ಹುಡುಗಿಯರ ಜೊತೆ ವರುಣ್‌ ರೊಮ್ಯಾನ್ಸ್‌ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಇದನ್ನೂ ಓದಿ:ತಮಿಳು ನಟ ಧನುಷ್‌ಗೆ ಹಾಟ್ ಬೆಡಗಿ ತೃಪ್ತಿ ದಿಮ್ರಿ ನಾಯಕಿ

ಅಂದಹಾಗೆ, ನಿತಿನ್ ಜೊತೆ ರಾಬಿನ್‌ಹುಡ್, ಪವನ್ ಕಲ್ಯಾಣ್ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಶ್ರೀಲೀಲಾ ಬ್ಯುಸಿಯಾಗಿದ್ದಾರೆ.