ಮುಂಬೈ: ಬಾಲಿವುಡ್ ಕ್ಯೂಟ್ ಬಾಯ್ ವರುಣ್ ಧವನ್ ತಮ್ಮ ಅಂಡರ್‍ವೇರ್ ನಿಂದಾಗಿ ಟ್ರೋಲ್‍ಗೆ ಒಳಗಾಗಿದ್ದಾರೆ. ಇತ್ತೀಚಿಗೆ ವರುಣ್ ತಮ್ಮ ಫೋಟೋವೊಂದನ್ನು ಸೋಶಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದು, ಆ ಫೋಟೋಗೆ ಅಭಿಮಾನಿಗಳಿಂದ ಫನ್ನಿ ಫನ್ನಿ ಕಮೆಂಟ್ ಬಂದಿವೆ.
ಎಲ್ಲರಿಗೂ ತಿಳಿದಿರುವಂತೆ ವರುಣ್ ನಟನೆಯ ಜುಡ್ವಾ-2 ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಸಿನಿಮಾ ತನ್ನ ಚಿತ್ರೀಕರಣವನ್ನು ಯುರೋಪಿನ ಬುಡಾಪೆಸ್ಟ್ ನಲ್ಲಿ ಮಾಡಿದೆ. ಬುಡಾಪೆಸ್ಟ್ ನಲ್ಲಿ ವರುಣ್ ಶರ್ಟ್‍ಲೆಸ್ ಫೋಟೋವನ್ನು ತೆಗೆಸಿಕೊಂಡಿದ್ದಾರೆ. ಈ ಫೋಟೋವನ್ನು ತಮ್ಮ ಟ್ವಿಟರ್ ಅಕೌಂಟ್‍ನಲ್ಲಿ ಹಂಚಿಕೊಂಡಿದ್ದರು. ಫೋಟೋ ಜೊತೆಗೆ ನಾನು ನನ್ನ ಕೆಲಸವನ್ನು ಇಷ್ಟಪಡುತ್ತೇನೆ. ಆಲಿಮಾಖಾನ್ ಫೋಟೋ ಕ್ಲಿಕ್ ಮಾಡಿದ್ದು, ನನ್ನ ಹೇರ್ ಸ್ಟೈಲ್ ಡಿಸೈನ್ ಮಾಡಿದ್ದು ಅವರೇ ಎಂದು ಬರೆದುಕೊಂಡಿದ್ದಾರೆ.
ಫೋಟೋದಲ್ಲಿ ವರುಣ್ ಹಾಟ್ ಸಿಕ್ಸ್ ಪ್ಯಾಕ್ ನಲ್ಲಿ ಹಸಿರು ಬಣ್ಣದ ಶಾರ್ಟ್ ನಲ್ಲಿರುವುದನ್ನು ನೋಡಬಹುದು. ಆದರೆ ಕೆಲವರು ಮಾತ್ರ ವರುಣ್ ಧರಿಸಿರುವ ಅಂಡರ್‍ವೇರ್ ಮೇಲೆಯೇ ಕಣ್ಣು ಹಾಕಿದ್ದಾರೆ. ಇಷ್ಟು ಕಡಿಮೆ ಬೆಲೆಯ ಒಳ ಉಡುಪನ್ನು ನೀವು ಧರಿಸಿತ್ತೀರಾ? ತುಂಬಾ ಕಂಫರ್ಟ್ ಫೀಲ್ ಮಾಡುತ್ತಿರಬಹುದು ಅಲ್ಲವೇ, ಇದು ನೋಡಿ ಲಕ್ಸ್ ಕೋಜಿಯ ಜಾಹಿರಾತು ಎಂದು ರೀಟ್ವೀಟ್ ಮಾಡಿದ್ದಾರೆ.
ತಮ್ಮ ಫೋಟೋಗಳಿಗೆ ಪ್ರತಿಕ್ರಿಯೆಗಳನ್ನು ನೋಡಿದ ವರುಣ್, ಈ ಅಂಡರ್‍ವೇರ್ ನಲ್ಲಿ ನಾನು ತುಂಬಾ ಕಂಫರ್ಟ್ ಫೀಲ್ ಮಾಡುತ್ತಿದ್ದು ಹಾಗು ಸುಂದರವಾಗಿಯೂ ಇದೆ. ಇದು ರಾಜರಿಗೂ ಇಷ್ಟವಾದ ಉಡುಪು ಎಂದು ರಿಪ್ಲೈ ಮಾಡಿದ್ದಾರೆ.
ವರುಣ್ ನಟನೆಯ ಜುಡ್ವಾ 2 ಇದೇ ತಿಂಗಳು 29ರಂದು ದೇಶಾದ್ಯಂತ ತೆರೆಕಾಣಲಿದೆ. ವರುಣ್ ಸಿನಿಮಾದಲ್ಲಿ ದ್ವಿಪಾತ್ರ ಕಾಣಿಸಿಕೊಂಡಿದ್ದು, ನಾಯಕನಿಗೆ ಜೊತೆಯಾಗಿ ಜಾಕ್ವೇಲಿನ್ ಫರ್ನಾಂಡೀಸ್ ಮತ್ತು ತಾಪ್ಸಿ ಪನ್ನೂ ನಟಿಸಿದ್ದಾರೆ. 1997ರಲ್ಲಿ ತೆರೆಕಂಡ ಸಲ್ಮಾನ್ ಖಾನ್ ನಟನೆಯ ಜುಡ್ವಾ ಸಿನಿಮಾದ ಎರಡನೇ ಅವತರಣಿಕೆಯಾಗಿದೆ.
#varuninbudapest. Been training hard for this. Stunts, thrill and love ❤️ pic.twitter.com/wGr4i10dVD
— Varun sunny sanskari Dhawan (@Varun_dvn) September 12, 2017



https://twitter.com/BadassSalmaniac/status/907512855724924928
https://twitter.com/Abhishek_rawat5/status/907512866206507008
Me after seeing this pic 😍🔥😂❤ pic.twitter.com/ExOfDafIVZ
— pranjal | ssktk♡ (@pranjal_24dvn) September 12, 2017
https://twitter.com/VarunsDiya/status/907531923588657152
सस्ती है पर अच्छी है…
— Punit Mahor 🇮🇳 (@punitmahor) September 13, 2017
kyun ki ye aaram ka mamla hai hai….
— Rajat Arora (@aroraepicure) September 13, 2017
https://twitter.com/PankajSharma731/status/907980044928147456

Leave a Reply