ರಾಮನಗರ: ಈ ಹಿಂದೆ ಕುಗ್ರಾಮ ಆಗಿದ್ದ ಗ್ರಾಮ ಇವತ್ತು ಜಿಲ್ಲೆಯಲ್ಲೇ ಮೊದಲ ಕ್ಯಾಶ್‍ಲೆಸ್ ವಿಲೇಜ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹೌದು ರೇಷ್ಮೆನಗರಿ ರಾಮನಗರ ಜಿಲ್ಲೆಯ ಚನ್ನ ಪಟ್ಟಣ ತಾಲೂಕಿನ ವಂದಾರಗುಪ್ಪೆ ಗ್ರಾಮವೇ ಇಂದಿನ ನಮ್ಮ ಪಬ್ಲಿಕ್ ಹೀರೋ. ತಾಲೂಕಿನ ಹೆದ್ದಾರಿ ಪಕ್ಕದಲ್ಲೇ ಇರೋ ಈ ವಂದಾರಗುಪ್ಪೆ ಇದೀಗ ಡಿಜಿಟಲ್ ಕ್ರಾಂತಿಗೆ ತೆರೆದುಕೊಂಡಿದೆ.
ಜಿಲ್ಲೆಯ ಮೊದಲ ಕ್ಯಾಶ್‍ಲೆಸ್ ಗ್ರಾಮ ಎನಿಸಿಕೊಂಡಿದೆ. ಇಲ್ಲಿ ಶೇ.95ರಷ್ಟು ಕ್ಯಾಶ್‍ಲೆಸ್ ವಹಿವಾಟು ನಡೀತಿದೆ. ಈ ಡಿಜಿಟಲ್ ಕ್ರಾಂತಿಗೆ ಕಾರಣ ಬ್ಯಾಂಕ್ ಆಫ್ ಬರೋಡಾ ಶಾಖೆ. ಮೋದಿಯ ಕನಸಿನ ಕೂಸಿಗೆ ಕೈಜೋಡಿಸಿದ ಬ್ಯಾಂಕ್ ಆಫ್ ಬರೋಡ, ಕೇವಲ 8 ತಿಂಗಳಲ್ಲಿ ವಂದಾರಗುಪ್ಪೆಯಲ್ಲಿ ಡಿಜಿಟಲ್ ಕ್ರಾಂತಿ ಮಾಡಿದೆ.
2 ಸಾವಿರ ಜನಸಂಖ್ಯೆಯ ವಂದಾರಗುಪ್ಪೆಯಲ್ಲಿ ಇದೀಗ 1983 ಮಂದಿ ಬ್ಯಾಂಕ್ ಅಕೌಂಟ್ ಹೊಂದಿದ್ದಾರೆ. 1900 ಜನ ಡೆಬಿಟ್ ಕಾರ್ಡ್ ಬಳಸ್ತಿದ್ದಾರೆ. ಮಿನಿ ಎಟಿಎಂಗಳು ಇವೆ. ಗ್ರಾಮದ ಎರಡು ಅಂಗಡಿಗಳಲ್ಲಿ ಸ್ವೈಪಿಂಗ್ ಮಷಿನ್ ಕೂಡ ಕಾಣಿಸಿಕೊಂಡಿವೆ.
ತೀರಾ ಇತ್ತೀಚಿನವರೆಗೂ ಕುಗ್ರಾಮವಾಗಿದ್ದ ವಂದಾರಗುಪ್ಪೆ ಮುಂದಿನ ದಿನಗಳಲ್ಲಿ ಶೇಕಡಾ 100ರಷ್ಟು ಕ್ಯಾಶ್‍ಲೆಸ್ ವಿಲೇಜ್ ಆಗುತ್ತೆ ಎಂಬ ಭರವಸೆ ಎಲ್ಲರದ್ದು.
https://www.youtube.com/watch?v=tZSR3feSggY




Leave a Reply