ಬಾದಾಮಿಯಲ್ಲಿ ಸಿಎಂ ವಿರುದ್ಧ ಪ್ರಚಾರಕ್ಕಿಳಿದ ವಾಲ್ಮೀಕಿ ಸಮುದಾಯ

ಬಾಗಲಕೋಟೆ: ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ ವಿವಿಧ ತಂತ್ರಗಳನ್ನು ರೂಪಿಸುತ್ತಿದೆ. ಈ ಬೆನ್ನಲ್ಲೆ, ಹೈದರಾಬಾದ್ ಕರ್ನಾಟಕದ ವಾಲ್ಮೀಕಿ ಸಮುದಾಯವು ಸಿಎಂ ವಿರುದ್ಧ ಪ್ರಚಾರಕ್ಕೆ ಮುಂದಾಗಿವೆ.

ಮೀಸಲಾತಿ ವಿಚಾರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯವಾಗಿದೆ. ನಮ್ಮ ಅಭಿವೃದ್ಧಿಗೆ ಸಿಎಂ ಯಾವುದೇ ಕೊಡುಗೆ ನೀಡಿಲ್ಲ. ಅಲ್ಲದೇ ಹೈದರಾಬಾದ್ ಕರ್ನಾಟಕದಲ್ಲಿ ಸ್ವಜಾತಿಯವರಿಗೆ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ವಾಲ್ಮೀಕಿ ಸಮುದಾಯದ ನಾಯಕರು ಆರೋಪಿಸಿದ್ದಾರೆ.

6 ಜಿಲ್ಲೆಯ ತಂಡಗಳು ಸೋಮವಾರ ರಾತ್ರಿ ಬಾದಾಮಿಗೆ ಬಂದು ಸಿಎಂ ವಿರುದ್ಧ ಪ್ರಚಾರ ಮಾಡುತ್ತಿವೆ. ಅಲ್ಲದೇ, ಶ್ರೀರಾಮುಲು ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಈ ತಂಡದಲ್ಲಿ ಹೈದರಾಬಾದ್ ಕರ್ನಾಟಕ ವಾಲ್ಮೀಕಿ ಸಮುದಾಯದ ವಿಭಾಗೀಯ ಅಧ್ಯಕ್ಷ ನಂದಕುಮಾರ ಪಾಟೀಲ, ಕಾರ್ಯದರ್ಶಿ ರಘುವೀರ ನಾಯಕ್, ಯಾದಗಿರಿ ಜಿಲ್ಲಾಧ್ಯಕ್ಷ ಮರಿಯಪ್ಪ ನಾಯಕ ಸೇರಿದಂತೆ 6 ಜಿಲ್ಲೆಗಳ ಪದಾಧಿಕಾರಿಗಳ ಸೇರಿದ್ದಾರೆ.

ಹೈದರಾಬಾದ್ ಕರ್ನಾಟಕ ಜಿಲ್ಲೆಗಳಾದ ರಾಯಚೂರು, ಯಾದಗಿರಿ, ಕಲಬುರಗಿ, ಕೊಪ್ಪಳ, ಬೀದರ್, ಬಳ್ಳಾರಿಯಿಂದ ಸುಮಾರು 100ಕ್ಕೂ ಅಧಿಕ ಜನರು ಬಾದಾಮಿಗೆ ಬಂದಿದ್ದಾರೆ. ಇವರು ಬಾದಾಮಿ, ಗುಳೇದಗುಡ್ಡ, ಶಿವಯೋಗಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದಾರೆ. ಮೂರು ದಿನಗಳ ಕಾಲ ಈ ತಂಡವು ಸಿಎಂ ವಿರುದ್ಧ ಪ್ರಚಾರ ಮಾಡಲಿದೆ ಎಂಬುದಾಗಿ ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *