ವ್ಯಾಲೆಂಟೈನ್‌ ವೀಕ್‌ನಲ್ಲಿ ಕಂಗೊಳಿಸಬೇಕೇ? ಇಲ್ಲಿದೆ ಟಿಪ್ಸ್

ಪ್ರತಿ ವರ್ಷದಂತೆ ಈ ವರ್ಷವು ಕೂಡ ಪ್ರೇಮಿಗಳ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಪ್ರೇಮಿಗಳು ಎದುರು ನೋಡ್ತಿದ್ದಾರೆ. ವ್ಯಾಲೆಂಟೈನ್‌ ವೀಕ್‌ನಲ್ಲಿ (Valentine’s Day) ಮಿಂಚಲು ಮಹಿಳಾ ಮಣಿಗಳಿಗೆ ಇಲ್ಲಿದೆ ಬ್ಯೂಟಿ ಟಿಪ್ಸ್. ವ್ಯಾಲೆಂಟೈನ್‌ ವೀಕ್‌ನಲ್ಲಿ ಬ್ಯೂಟಿ ಲೋಕದಲ್ಲಿ ಫೇಸ್ ಮಾಸ್ಕ್ ಸೌಂದರ್ಯವರ್ಧಕದ ಹವಾ ಹೆಚ್ಚಾಗಿದೆ. ಇದನ್ನೂ ಓದಿ:ಆರ್ಟಿಕಲ್ 370 ಟ್ರೈಲರ್ ನಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ

ವ್ಯಾಲೆಂಟೈನ್‌ ವೀಕ್‌ನಲ್ಲಿ ಚಾಕ್ಲೇಟ್ ಡೇಯಂದು ಪ್ರೇಮಿಗಳಿಗೆ, ಸಂಗಾತಿಗಳಿಗೆ ಚಾಕ್ಲೇಟ್‌ಗಳನ್ನು ಪ್ರೀತಿಯಿಂದ ಕೊಡುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಚಾಕ್ಲೇಟ್ ಫೇಸ್ ಮಾಸ್ಕ್ ರೆಡಿ ಪ್ಯಾಕ್‌ಗಳನ್ನು ಕೊಡುವುದು ಗೊತ್ತೇ! ಅಷ್ಟು ಮಾತ್ರವಲ್ಲ, ಈ ಸೀಸನ್‌ನಲ್ಲಿ ಚಾಕ್ಲೇಟ್ ಫೇಶಿಯಲ್‌ನಂತಹ ನಾನಾ ಫೇಸ್‌ಪ್ಯಾಕ್‌ಗಳು ಬ್ಯೂಟಿ ಸಲೂನ್ ಹಾಗೂ ಬ್ಯೂಟಿ ಪಾರ್ಲರ್‌ನಲ್ಲಿ ದೊರಕುತ್ತಿರುವುದು ತಿಳಿದಿದೆಯೇ.

ಇದೀಗ ಈ ಕಾನ್ಸೆಪ್ಟ್ ನಿಧಾನಗತಿಯಲ್ಲಿ ಸಾಮಾನ್ಯ ಯುವತಿಯರನ್ನು ತಲುಪಿದೆ. ಇನ್ನು, ದಿನಕಳೆದಂತೆ ಬ್ಯೂಟಿ ಪ್ರಿಯರ ರುಟಿನ್‌ನಲ್ಲಿ ಸೇರುತ್ತಿದೆ ಎನ್ನುತ್ತಾರೆ ಸೌಂದರ್ಯ ವರ್ಧಕರು. ಇದರೊಂದಿಗೆ ಚಾಕ್ಲೇಟ್ ನಿಂದ ಸಿದ್ಧ ಪಡಿಸಿದ ಸೌಂದರ್ಯವರ್ಧಕಗಳಿಗೆ ಇದೀಗ ಮೊದಲಿಗಿಂತ ಬೇಡಿಕೆ ಜಾಸ್ತಿಯಾಗಿದೆ. ಇದಕ್ಕೆ ಪೂರಕ ಎಂಬಂತೆ, ಬ್ಯೂಟಿ ಲೋಕದಲ್ಲಿ ನಾನಾ ಬಗೆಯ ಚಾಕ್ಲೇಟ್ ಫೇಸ್ ಪ್ಯಾಕ್ (Chocolate Face Mask), ಫೇಶಿಯಲ್, ಸ್ಕ್ರಬ್‌ನಂತಹ ಬ್ಯೂಟಿ ಟ್ರೀಟ್‌ಮೆಂಟ್‌ಗಳು ಯುವತಿಯರನ್ನು ಆಕರ್ಷಿಸುತ್ತಿವೆ.

ಅತ್ಯಧಿಕ ಆಂಟಿ ಆಕ್ಸಿಡೆಂಟ್ಸ್ ಇರುವಂತಹ ಚಾಕ್ಲೇಟ್ ಫೇಸ್ ಮಾಸ್ಕ್ ತ್ವಚೆಯ ಡ್ಯಾಮೆಜನ್ನು ತಡೆಯುತ್ತದೆ. ಮಾತ್ರವಲ್ಲ, ಡೆಡ್ ಸ್ಕಿನ್ ನಿವಾರಣೆ ಮಾಡುತ್ತದೆ. ಅಲ್ಲದೇ, ಚರ್ಮದ ಮಾಯಿಶ್ಚರೈಸರ್ ಅಂಶವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಸೌಂದರ್ಯ ತಜ್ಞೆ ಉಮಾ ಜಯಕುಮಾರ್. ಅವರ ಪ್ರಕಾರ, ಈ ಬಗೆಯ ಫೇಸ್ ಮಾಸ್ಕ್ ವಿದೇಶದಲ್ಲಿ ಹೆಚ್ಚು ಪ್ರಚಲಿತದಲ್ಲಿತ್ತು ಇದೀಗ ನಮ್ಮಲ್ಲೂ ಸಾಮಾನ್ಯವಾಗುತ್ತಿದೆ ಎನ್ನುತ್ತಾರೆ.

ರೆಡಿಮೇಡ್ ಪ್ಯಾಕ್ ಹಾಗೂ ಬಾಕ್ಸ್‌ನಲ್ಲೂ ನಾನಾ ಬ್ರಾಂಡ್‌ನಲ್ಲಿ ಇವು ಲಭ್ಯ. ಮೊದಲಿಗೆ ಪ್ಯಾಚ್ ಟೆಸ್ಟ್ ಮಾಡಿ, ತ್ವಚೆಗೆ ಅಲರ್ಜಿಯಾಗದಿದ್ದರೇ ಬಳಸಬಹುದು. ಸಲೂನ್‌ಗೆ ಹೋಗಿ ಹೆಚ್ಚು ಹಣ ಸುರಿದು ಈ ಚಾಕ್ಲೇಟ್ ಫೇಸ್ ಮಾಸ್ಕ್ ಮಾಡಿಸಿಕೊಳ್ಳಲಾಗದಿದ್ದವರು, ಮನೆಯಲ್ಲೆ ತಾವೇ ಇದನ್ನು ಸುಲಭವಾಗಿ ಸಿದ್ಧಪಡಿಸಿಕೊಂಡು ಹಚ್ಚಿಕೊಳ್ಳಬಹುದು.

ಸಿಂಪಲ್ಲಾಗಿ ಹೇಳಬೇಕೆಂದೆರೇ, ಒಂದು ಬೌಲ್‌ನಲ್ಲಿ ಅಗತ್ಯವಿರುವಷ್ಟು ಚಾಕ್ಲೇಟ್ ಅನ್ನು ಬಿಸಿ ಮಾಡಿ ಕರಗಿಸಿಕೊಂಡು, ಅದಕ್ಕೆ ಕೊಂಚ ಸಕ್ಕರೆ, ಉಪ್ಪು ಹಾಗೂ ಹಾಲನ್ನು ಮಿಶ್ರ ಮಾಡಿ. ಮುಖಕ್ಕೆಲೇಪಿಸಿ. ಒಣಗಿದ ನಂತರ ಮುಖವನ್ನು ವಾಶ್ ಮಾಡಿ ಎಂದು ಸಿಂಪಲ್ ಟಿಪ್ಸ್ ನೀಡುತ್ತಾರೆ ಫ್ಯಾಷನ್ ಪ್ರಿಯರು.